ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ ವಿರುದ್ಧದ ಸೆಮಿಫೈನಲ್‌ ಪಂದ್ಯದಲ್ಲಿ ದಾಖಲೆ ಬರೆದ ವಿಲಿಯಮ್ಸನ್‌

Kane Williamson records most runs by New Zealand batsman in a World Cup

ಮ್ಯಾಂಚೆಸ್ಟರ್‌, ಜುಲೈ 10: ಟೀಮ್‌ ಇಂಡಿಯಾ ವಿರುದ್ಧದ ವಿಶ್ವಕಪ್‌ ಸೆಮಿಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡದ ಪರ ಜವಾಬ್ದಾರಿಯುತ ಅರ್ಧಶತಕ (67 ರನ್‌) ದಾಖಲಿಸಿದ ಕಿವೀಸ್‌ ನಾಯಕ ಕೇನ್‌ ವಿಲಿಯಮ್ಸನ್‌ ಈ ಮೂಲಕ ದಾಖಲೆಯೊಂದನ್ನು ಬರೆದಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಪ್ರಸಕ್ತ ವಿಶ್ವಕಪ್‌ನಲ್ಲಿ ರನ್‌ ಹೊಳೆಯನ್ನೇ ಹರಿಸಿರುವ ಕೇನ್‌ ವಿಲಿಯಮ್ಸನ್‌, ಭಾರತ ವಿರುದ್ಧದ 67 ರನ್‌ಗಳೊಂದಿಗೆ ಟೂರ್ನಿಯಲ್ಲಿ ಆಡಿದ ಒಟ್ಟು 8 ಇನಿಂಗ್ಸ್‌ಗಳಲ್ಲಿ 548 ರನ್‌ಗಳನ್ನು ದಾಖಲಿಸಿದ್ದಾರೆ. ಈ ಮೂಲಕ ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ನ್ಯೂಜಿಲೆಂಡ್‌ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ವಿಶ್ವಕಪ್‌ ಸೆಮಿಫೈನಲ್‌ಗೆ ಶಮಿ, ಕುಲ್ದೀಪ್‌ ಅವರನ್ನು ಹೊರಗಿಟ್ಟಿದ್ದೇಕೆ?ವಿಶ್ವಕಪ್‌ ಸೆಮಿಫೈನಲ್‌ಗೆ ಶಮಿ, ಕುಲ್ದೀಪ್‌ ಅವರನ್ನು ಹೊರಗಿಟ್ಟಿದ್ದೇಕೆ?

ಇದಕ್ಕೂ ಮುನ್ನ ನ್ಯೂಜಿಲೆಂಡ್‌ನ ಅನುಭವಿ ಬ್ಯಾಟ್ಸ್‌ಮನ್‌ ಮಾರ್ಟಿನ್‌ ಗಪ್ಟಿಲ್‌ ಈ ದಾಖಲೆ ಹೊಂದಿದ್ದರು. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ಜಂಟಿ ಆಶ್ರಯದಲ್ಲಿ ನಡೆದ 2015ರ ವಿಶ್ವಕಪ್‌ ಟೂರ್ನಿಯಲ್ಲಿ ಗಪ್ಟಿಲ್‌ ಒಟ್ಟು 547 ರನ್‌ಗಳನ್ನು ಗಳಿಸಿದ್ದರು. ಈ ಟೂರ್ನಿಯಲ್ಲಿ ನ್ಯೂಜಿಲೆಂಡ್‌ ತಂಡ ರನ್ನರ್‌ಅಪ್‌ ಸ್ಥಾನ ಪಡೆದಿತ್ತು.

ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ನ್ಯೂಜಿಲೆಂಡ್‌ ಬ್ಯಾಟ್ಸ್‌ಮನ್‌ಗಳು
ಆಟಗಾರ ವರ್ಷ ರನ್‌
ಕೇನ್‌ ವಿಲಿಯಮ್ಸನ್‌ 2019 548*
ಮಾರ್ಟಿನ್‌ ಗಪ್ಟಿಲ್‌ 2015 547
ಸ್ಕಾಟ್‌ ಸ್ಟೈರಿಸ್‌ 2007 499
ಮಾರ್ಟಿನ್‌ ಕ್ರೋವ್‌ 1992 456
ಸ್ಟೀಫನ್‌ ಫ್ಲೆಮಿಂಗ್‌ 2007 353

Story first published: Wednesday, July 10, 2019, 18:02 [IST]
Other articles published on Jul 10, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X