ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌: ಜಯವರ್ಧನೆ ಅವರ ವಿಶ್ವ ದಾಖಲೆ ಮುರಿದ ಕೇನ್‌ ವಿಲಿಯಮ್ಸನ್‌

ICC World Cup 2019 : ನ್ಯೂಜಿಲೆಂಡ್ ನಾಯಕನ ದಾಖಲೆಗೆ ಭೇಶ್ ಎಂದ ಕ್ರಿಕೆಟ್ ಜಗತ್ತು..? | Kane Williamson
Kane williamson registers most runs by captain in a WC edition

ಲಂಡನ್‌, ಜುಲೈ 14: ಪ್ರಸಕ್ತ ವಿಶ್ವಕಪ್‌ ಟೂರ್ನಿಯಲ್ಲಿ ನ್ಯೂಜಿಲೆಂಡ್‌ ತಂಡದ ನಾಯಕ ಕೇನ್‌ ವಿಲಿಯಮ್ಸನ್‌ ರನ್‌ ಹೊಳೆಯನ್ನೇ ಹರಿಸುವ ಮೂಲಕ ಮುಂಚೂಣಿಯಲ್ಲಿ ನಿಂತು ತಮ್ಮ ತಂಡವನ್ನು ಫೈನಲ್‌ಗೆ ಮುನ್ನಡೆಸಿದ್ದಾರೆ. ಅಲ್ಲದೆ ಈ ಬಾರಿ ಅತಿ ಹೆಚ್ಚು ರನ್‌ ಗಳಿಸಿದವರ ಪೈಕಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ವಿಶ್ವಕಪ್‌: ನ್ಯೂಜಿಲೆಂಡ್‌ - ಇಂಗ್ಲೆಂಡ್‌ ಫೈನಲ್‌ ಪಂದ್ಯದ ಲೈವ್‌ ಸ್ಕೋರ್‌ ಕಾರ್ಡ್‌

ಇಂಗ್ಲೆಂಡ್‌ ವಿರುದ್ಧ ಭಾನುವಾರ ಇಲ್ಲಿನ ಇತಿಹಾಸ ಪ್ರಸಿದ್ಧ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದ ನ್ಯೂಜಿಲೆಂಡ್‌ ಮೊದಲು ಬ್ಯಾಟ್‌ ಮಾಡಲು ಮುಂದಾಯಿತು. ಮಾರ್ಟಿನ್‌ ಗಪ್ಟಿಲ್‌ (19) ನಿರ್ಗಮನದ ಬಳಿಕ ಕಣಕ್ಕಿಳಿದ ಕೇನ್‌, 53 ಎಸೆತಗಲ್ಲಿ 30 ರನ್‌ಗಳಿಸುವ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು.

ವಿಶ್ವಕಪ್‌ ಫೈನಲ್‌ನಲ್ಲಿ ಇದೇ ತಂಡ ಗೆಲ್ಲೋದು ಎಂದ ಪೀಟರ್ಸನ್‌ವಿಶ್ವಕಪ್‌ ಫೈನಲ್‌ನಲ್ಲಿ ಇದೇ ತಂಡ ಗೆಲ್ಲೋದು ಎಂದ ಪೀಟರ್ಸನ್‌

ಅತ್ಯಂತ ತಾಳ್ಮೆಯ ಆಟವಾಡಿ 2 ಫೋರ್‌ಗಳೊಂದಿಗೆ ಎಚ್ಚರಿಕೆಯ ಬ್ಯಾಟಿಂಗ್‌ ನಡೆಸುತ್ತಿದ್ದ ವಿಲಿಯಮ್ಸನ್‌, ವೇಗಿ ಮಾರ್ಕ್‌ ವುಡ್‌ ಬೌಲಿಂಗ್‌ನಲ್ಲಿ ವಿಕೆಟ್‌ ಕೀಪರ್‌ ಜೋಸ್‌ ಬಟ್ಲರ್‌ಗೆ ಕ್ಯಾಚಿತ್ತು ನಿರಾಸೆ ಅನುಭವಿಸಿದರು. ಆನ್‌ಫೀಲ್ಡ್‌ ಅಂಪೈರ್‌ ಕುಮಾರ ಧರ್ಮಸೇನಾ ನಾಟ್‌ಔಟ್‌ ನಿರ್ಧಾರ ನೀಡಿದರೂ, ಇಂಗ್ಲೆಂಡ್ ಡಿಆರ್‌ಎಸ್‌ ಮೊರೆ ಹೋಗಿ ವಿಲಿಯಮ್ಸನ್‌ ವಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಯಿತು.

ಟೀಮ್‌ ಇಂಡಿಯಾದ ವೆಸ್ಟ್‌ ಇಂಡೀಸ್‌ ಪ್ರವಾಸದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

ಪಂದ್ಯ ಆರಂಭಕ್ಕೂ ಮುನ್ನ 548 ರನ್‌ಗಳನ್ನು ಗಳಿಸಿದ್ದ ಕೇನ್‌ ವಿಲಿಯಮ್ಸನ್‌ ತಮ್ಮ ಖಾತೆಗೆ 2 ರನ್‌ಗಳನ್ನು ಸೇರಿಸುತ್ತಿದ್ದಂತೆಯೇ ನೂತನ ವಿಶ್ವ ದಾಖಲೆ ಬರೆದು. 549 ರನ್‌ಗಳೊಂದಿಗೆ ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆ ಅವರ ಹೆಸರಲ್ಲಿದ್ದ ವಿಶ್ವಕಪ್‌ ಟೂರ್ನಿಯ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ನಾಯಕ ಎಂಬ ವಿಶ್ವ ದಾಖಲೆಯನ್ನು ಅಳಿಸಿ ಹಾಕಿದರು. ಒಟ್ಟಾರೆ 30 ರನ್‌ ಗಳಿಸಿ ಔಟಾದ ಕೇನ್‌, ಈ ದಾಖಲೆಯನ್ನು 578 ರನ್‌ಗಳಿಗೆ ವಿಸ್ತರಿಸಿದರು.

2007ರ ವಿಶ್ವಕಪ್‌ನಲ್ಲಿ ರನ್ನರ್ಸ್‌ಅಪ್‌ ಸ್ಥಾನ ಪಡೆದ ಶ್ರೀಲಂಕಾ ತಂಡದ ಪರ ಜಯವರ್ಧನೆ ಒಟ್ಟು 548 ರನ್‌ಗಳನ್ನು ಚೆಚ್ಚಿದ್ದರು. ಇದೀಗ ಈ ವಿಶ್ವ ದಾಖಲೆ ವಿಲಿಯಮ್ಸನ್‌ ಮುಡಿಗೇರಿದೆ. 28 ವರ್ಷದ ಬಲಗೈ ಬ್ಯಾಟ್ಸ್‌ಮನ್‌ ಕೇನ್‌ 9 ಇನಿಂಗ್ಸ್‌ನಲ್ಲಿ82.57ರ ಸರಾಸರಿಯಲ್ಲಿ 578 ರನ್‌ಗಳನ್ನು ಗಳಿಸಿದ್ದಾರೆ.

2019ರ ವಿಶ್ವಕಕಪ್‌ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ನಾಯಕರು

ಆಟಗಾರ ತಂಡ ರನ್‌
ಕೇನ್‌ ವಿಲಿಯಮ್ಸನ್‌ ನ್ಯೂಜಿಲೆಂಡ್‌ 578
ಆರೊನ್‌ ಫಿಂಚ್‌ ಆಸ್ಟ್ರೇಲಿಯಾ 507
ವಿರಾಟ್‌ ಕೊಹ್ಲಿ ಭಾರತ 443
ಫಾಫ್‌ ಡು'ಪ್ಲೆಸಿಸ್‌ ದಕ್ಷಿಣ ಆಫ್ರಿಕಾ 387
ಐಯಾನ್‌ ಮಾರ್ಗನ್‌ ಇಂಗ್ಲೆಂಡ್‌ 362*

Story first published: Sunday, July 14, 2019, 17:28 [IST]
Other articles published on Jul 14, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X