ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

WTC ಫೈನಲ್‌ನಲ್ಲಿ ಗೆದ್ದ ಮೇಲೆ ಕೇನ್ ವಿಲಿಯಮ್ಸನ್ ವಿರಾಟ್ ಕೊಹ್ಲಿ ಅಪ್ಪಿ ಎದೆಗೊರಗಿದ್ಯಾಕೆ ಗೊತ್ತಾ?!

Kane Williamson reveals why he rested his head on Virat Kohlis shoulder after winning WTC

ವೆಲ್ಲಿಂಗ್ಟನ್: ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯದಲ್ಲಿ ಭಾರತ ವಿರುದ್ಧ ನ್ಯೂಜಿಲೆಂಡ್‌ ತಂಡ 8 ವಿಕೆಟ್ ಸುಲಭ ಬಯ ಗಳಿಸಿತ್ತು. ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್ ಗೆಲುವಿನ ಬಳಿಕ ನ್ಯೂಜಿಲೆಂಡ್‌ ತಂಡದ ವಿಜಯೋತ್ಸವದ ಎಲ್ಲಾ ಫೋಟೋಗಳ ಜೊತೆ ಒಂದು ವಿಶಿಷ್ಠ ಫೋಟೋ ಗಮನ ಸೆಳೆದಿತ್ತು. ಅದ್ಯಾವ ಫೋಟೋ ಎಂದರೆ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಅವರು ಭಾರತದ ನಾಯಕ ವಿರಾಟ್ ಕೊಹ್ಲಿಯನ್ನು ಅಪ್ಪಿ ಅವರ ಎದೆಗೊರಗಿದ್ದ ಫೋಟೋ.

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ಗೆ ಹೊಸ ಅಂಕ ನಿಯಮ ಘೋಷಿಸಿದ ಐಸಿಸಿವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ಗೆ ಹೊಸ ಅಂಕ ನಿಯಮ ಘೋಷಿಸಿದ ಐಸಿಸಿ

ತನ್ನ ನಾಯಕತ್ವದ ತಂಡ ವಿಶ್ವ ಚಾಂಪಿಯನ್‌ಶಿಪ್ ಆಗಿ ಸಂಭ್ರಮಾಚರಿಸುತ್ತಿದ್ದಾಗ ಸೋತ ಎದುರಾಳಿ ತಂಡದ ನಾಯಕನನ್ನು ವಿಲಿಯಮ್ಸನ್ ಅಪ್ಪಿ ಅವನ ಎದೆಗೊರಗಿದ್ದು ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ ವಿಲಿಯಮ್ಸನ್ ಆವತ್ತು ಹಾಗೆ ಮಾಡಿದ್ಯಾಕೆ ಅನ್ನೋದನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ.

WTC ಫೈನಲ್ ಪಂದ್ಯದ ಸ್ಕೋರ್‌

WTC ಫೈನಲ್ ಪಂದ್ಯದ ಸ್ಕೋರ್‌

ಸೌಥಾಂಪ್ಟನ್‌ನಲ್ಲಿ ನಡೆದಿದ್ದ ಫೈನಲ್‌ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 92.1 ಓವರ್‌ಗೆ 10 ವಿಕೆಟ್ ಕಳೆದು 217 ರನ್ ಗಳಿಸಿತ್ತು. ನ್ಯೂಜಿಲೆಂಡ್‌ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 99.2 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 249 ರನ್ ಗಳಿಸಿತ್ತು. ಭಾರತ ದ್ವಿತೀಯ ಇನ್ನಿಂಗ್ಸ್‌ನಲ್ಲಿ 73 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 170 ರನ್ ಬಾರಿಸಿತ್ತು. ನ್ಯೂಜಿಲೆಂಡ್‌ ಗೆಲುವಿಗೆ 53 ಓವರ್‌ ಗಳಲ್ಲಿ 139 ರನ್ ಬೇಕಿತ್ತು. ಗುರಿ ಬೆನ್ನಟ್ಟಿದ ಕಿವೀಸ್ 45.5ನೇ ಓವರ್‌ಗೆ 2 ವಿಕೆಟ್ ನಷ್ಟದಲ್ಲಿ 140 ರನ್ ಬಾರಿಸಿ ಗೆಲುವನ್ನಾಚರಿಸಿತು.

ಸಖತ್ ವೈರಲ್ ಆಗಿದ್ದ ಚಿತ್ರ

ಸಖತ್ ವೈರಲ್ ಆಗಿದ್ದ ಚಿತ್ರ

WTC ಫೈನಲ್‌ ಪಂದ್ಯದಲ್ಲಿ ಗೆಲ್ಲುತ್ತಲೇ ಅಜೇಯ ಬ್ಯಾಟಿಂಗ್‌ ಮಾಡುತ್ತಿದ್ದ ಕೇನ್ ವಿಲಿಯಮ್ಸನ್ ಅವರು ಸೋತ ನಾಯಕ ವಿರಾಟ್ ಕೊಹ್ಲಿ ಬಳಿಗೆ ಬಂದು ಅವರನ್ನು ಅಪ್ಪಿ ಅರೆಕ್ಷಣ ಕೊಹ್ಲಿಯ ಎದೆಗೊರಗಿದ್ದರು. ಆ ಚಿತ್ರಣ ಹೇಗಿತ್ತೆಂದರೆ, 'ಪಂದ್ಯ ಮುಗಿದಿದ್ದಾಗಿದೆ. ಆದರೆ ನೀನು ಚಿಂತೆ ಮಾಡಬೇಡ, ಸಮಾಧಾನ ತಂದುಕೋ. ನೀನೂ ಮತ್ತು ನಿನ್ನ ತಂಡ ಸೋಲಿಸಿದ್ದಕ್ಕಾಗಿ ಕ್ಷಮೆಯಿರಲಿ. ಆದರೆ ನನಗೆ ಸೋಲಿಸದೆ ಬೇರೆ ದಾರಿಯಿರಲಿಲ್ಲ' ಎಂದು ವಿಲಿಯಮ್ಸನ್ ಮೌನವಾಗೇ ಕೊಹ್ಲಿಯಲ್ಲಿ ಹೇಳಿದ್ದಾರೆ ಎನ್ನುವಂತಿತ್ತು ಆ ಫೋಟೋ.

ತುಟಿ ಬಿಚ್ಚಿದ ವಿಲಿಯಮ್ಸನ್

ತುಟಿ ಬಿಚ್ಚಿದ ವಿಲಿಯಮ್ಸನ್

ಇತ್ತೀಚೆಗೆ ಕ್ರಿಕ್‌ಬಝ್ ಜೊತೆ ಮಾತನಾಡಿದ ಕೇನ್ ವಿಲಿಯಮ್ಸನ್, WTC ಫೈನಲ್‌ ವೇಳೆಯ ಕ್ಷಣ ನೆನಪಿಸಿ, "ಅದೊಂದು ಅದ್ಭುತ ಕ್ಷಣ. ನಮಗ್ಗೊತ್ತು ಪ್ರತೀ ಸಾರಿಯೂ ಭಾರತದ ವಿರುದ್ಧ ನಾವು ಆಡುವಾಗ ಹೇಗಿರತ್ತೆ ಅಂತ. ಆಗ ಎದುರಾಳಿಯಿಂದ ನಮಗೆ ಕಠಿಣ ಸವಾಲು ಇರತ್ತೆ. ಬಹಳಷ್ಟು ಸಾರಿ ನಮಗವರು ತೀವ್ರ ಪೈಪೋಟಿ ನೀಡಿದ್ದಾರೆ. ಅವರು ನಮ್ಮೆದುರು ಭಾರತೀಯರು ಕ್ರಿಕೆಟ್‌ನಲ್ಲಿ ಎಷ್ಟು ಬಲಿಷ್ಟರು ಅನ್ನೋದನ್ನು ತೋರಿಸಿಕೊಡುತ್ತಾರೆ," ಎಂದಿದ್ದಾರೆ.

ಶಫಾಲಿ ವರ್ಮಾ ಔಟ್ ಆದ ರೀತಿ ನೋಡಿ ಬೇಸರಗೊಂಡ ಅಭಿಮಾನಿಗಳು | MS Dhoni | Oneindia Kannada
ನಿಜವಾದ ಕಾರಣವಿದು!

ನಿಜವಾದ ಕಾರಣವಿದು!

WTC ಫೈನಲ್‌ನಲ್ಲಿ ಗೆದ್ದ ಬಳಿಕ ವಿಲಿಯಮ್ಸನ್ ತನ್ನ ಸಹ ಆಟಗಾರ ರಾಸ್ ಟೇಲರ್ ಜೊತೆಗೆ ಜಿಗಿದಾಡಿ ಸಂಭ್ರಮಿಸಬಹುದಿತ್ತು. ಗಂಟಲು ಹರಿಯುವಂತೆ ಕಿರುಚಿ ಭಾರತವನ್ನು ಕೆಣಕಬಹುದಿತ್ತು. ಆದರೆ ಕೇನ್ ಹಾಗೆ ಮಾಡಿರಲಿಲ್ಲ. "ನಾನು ಮತ್ತು ವಿರಾಟ್ ಮಧ್ಯೆ ಹಲವಾರು ವರ್ಷಗಳಿಂದ, ಬೇರೆ ಬೇರೆ ಸಮಯಗಳಲ್ಲಿ ಸ್ನೇಹ ಗಟ್ಟಿಯಾಗುತ್ತಲೇಯಿದೆ. ಆ ಭಾವ ಚೆನ್ನಾಗಿದೆ ಕೂಡ. ನಮಗೆ ಸ್ನೇಹದಲ್ಲಿ ಪ್ರತೀ ಬಾರಿಯೂ ದೊಡ್ಡ ಚಿತ್ರಣ ಕಾಣುತ್ತದೆ. ನಮ್ಮಿಬ್ಬರ ಸ್ನೇಹ ಈ ಕ್ರಿಕೆಟ್‌ಗೂ ಮಿಗಿಲಾದುದು; ಅದು ನಮ್ಮಿಬ್ಬರಿಗೂ ಗೊತ್ತು," ಎಂದು ವಿಲಿಯಮ್ಸನ್ ಹೇಳಿದ್ದಾರೆ.

Story first published: Friday, July 2, 2021, 10:22 [IST]
Other articles published on Jul 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X