ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಆರ್‌ಸಿಬಿ ನಾಯಕ ಕೊಹ್ಲಿಯನ್ನು ಟಗರಿಗೆ ಹೋಲಿಸಿದ ಶಿವರಾಜ್ ಕುಮಾರ್

Kannada Actor Shivaraj Kumar Compares Virat Kohli With Tagaru

ಐಪಿಎಲ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಎಲ್ಲಾ ಕಡೆಯೂ ಈಗ ಕ್ರಿಕೆಟ್ ಬಿಸಿ ಕಾವೇರುತ್ತಿದೆ. ಕ್ರಿಕೆಟ್ ಬಗ್ಗೆ ಆಸಕ್ತಿಯಿರುವ ಪ್ರತಿಯೊಬ್ಬರೂ ಐಪಿಎಲ್ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ವಿಮರ್ಶೆಗಳನ್ನು ಮಾಡತೊಡಗಿದ್ದಾರೆ. ಕನ್ನಡ ಸಿನಿಮಾ ರಂಗದ ಖ್ಯಾತ ನಾಯಕ ನಟ ಶಿವರಾಜ್ ಕುಮಾರ್ ಕೂಡ ಸ್ಟಾರ್ ಸ್ಪೋರ್ಟ್ಸ್ ಕನ್ನಡ ವಾಹಿನಿಯಲ್ಲಿ ಕ್ರಿಕೆಟ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಮಾಜಿ ನಾಯಕ ಎಂಎಸ್ ಧೋನಿ ಬಗ್ಗೆ ಶಿವರಾಜ್ ಕುಮಾರ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಜೊತೆಗೆ ಕ್ರಿಸ್ ಗೇಲ್ ಆಟದ ಬಗ್ಗೆಯೂ ಶಿವರಾಜ್ ಕುಮಾರ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಕೊಹ್ಲಿ ಅಲ್ಲ.. ಡಿವಿಲಿಯರ್ಸ್ ಅಲ್ಲ.. ಆರ್‌ಸಿಬಿ ಮ್ಯಾಚ್ ವಿನ್ನರ್ ಹೆಸರಿಸಿದ ಸುನಿಲ್ ಗವಾಸ್ಕರ್!ಕೊಹ್ಲಿ ಅಲ್ಲ.. ಡಿವಿಲಿಯರ್ಸ್ ಅಲ್ಲ.. ಆರ್‌ಸಿಬಿ ಮ್ಯಾಚ್ ವಿನ್ನರ್ ಹೆಸರಿಸಿದ ಸುನಿಲ್ ಗವಾಸ್ಕರ್!

ಸ್ಟಾರ್ ಸ್ಪೋರ್ಟ್ಸ್ ಕನ್ನಡ ವಾಹಿನಿಯಲ್ಲಿ ಮಾಜಿ ಕ್ರಿಕೆಟಿಗ ವಿಜಯ್ ಭಾರಧ್ವಾಜ್ ಜೊತೆಗೆ ಸಂದರ್ಶನದಲ್ಲಿ ಪಾಲ್ಗೊಂಡ ಶಿವರಾಜ್ ಕುಮಾರ್ ಕ್ರಿಕೆಟ್ ವಿಚಾರವಾಗಿ ಮನಬಿಚ್ಚಿ ಮಾತನಾಡಿದ್ದಾರೆ. ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿಯ ವ್ಯಕ್ತಿತ್ವ ಟಗರಿನ ರೀತಿಯದ್ದು ಎಂದು ಶಿವರಾಜ್ ಕುಮಾರ್ ಈ ಸಂದರ್ಭದಲ್ಲಿ ಬಣ್ಣಿಸಿದ್ದಾರೆ.

ಇನ್ನು ಮಾಜಿ ನಾಯಕ ಎಂಎಸ್ ಧೋನಿ ಬಗ್ಗೆ ಮಾತನಾಡಿರುವ ಶಿವರಾಜ್ ಕುಮಾರ್ ಧೋನಿ ಮುಖದಲ್ಲಿ ಗಂಭೀರತೆಯ ಜೊತೆಗೆ ಶಾಂತತೆ ಎರಡೂ ಜೊತೆಯಾಗಿದೆ ಎಂದು ಹೇಳಿದ್ದಾರೆ. ಇನ್ನು ಆರ್‌ಸಿಬಿ ತಂಡದ ಪರವಾಗಿ ಆಡುತ್ತಿದ್ದ ಕ್ರಿಸ್ ಗೇಲ್ ಸಿಕ್ಸರ್‌ಗಳಿಗೆ ಬೆಲೆಯೇ ಇಲ್ಲದಂತೆ ಮಾಡಿದ್ದರು ಎಂದು ನೆನಪಿಸಿಕೊಂಡಿದ್ದಾರೆ.

ಅಬುಧಾಬಿ ಪಿಚ್ ಹಾಗೂ ಆ ಮೂವರು ಆಟಗಾರರು.! ಮುಂಬೈ ಸೋಲಿಸಲು ಧೋನಿ ಮಾಸ್ಟರ್‌ಪ್ಲ್ಯಾನ್ಅಬುಧಾಬಿ ಪಿಚ್ ಹಾಗೂ ಆ ಮೂವರು ಆಟಗಾರರು.! ಮುಂಬೈ ಸೋಲಿಸಲು ಧೋನಿ ಮಾಸ್ಟರ್‌ಪ್ಲ್ಯಾನ್

ಕ್ರಿಕೆಟ್‌ನಲ್ಲಿ ಆಸಕ್ತಿಯನ್ನು ಹೊಂದಿರುವ ಶಿವರಾಜ್ ಕುಮಾರ್ ಕ್ರಿಕೆಟ್ ಜೊತೆಗಿನ ತಮ್ಮ ನಂಟನ್ನು ಹಂಚಿಕೊಂಡಿದ್ದಾರೆ. ಕ್ರಿಕೆಟ್ ಆಡುವ ಹವ್ಯಾಸವನ್ನೂ ಹೊಂದಿರುವ ಶಿವರಾಜ್ ಕುಮಾರ್ ಸೋದರರ ಜೊತೆಗೆ ಹಾಗೂ ಚಿತ್ರರಂಗದ ಸ್ನೇಹಿತರ ಜೊತೆಗೆ ಹಲವು ಸಂದರ್ಭಗಳಲ್ಲಿ ಕ್ರಿಕೆಟ್ ಪಂದ್ಯಗಳಲ್ಲಿ ಭಾಗವಹಿಸಿದ್ದಾರೆ.

Story first published: Friday, September 18, 2020, 15:50 [IST]
Other articles published on Sep 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X