ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಾನ್ಪುರ ಪಿಚ್ ತಯಾರಿಸಿದ ಸಿಬ್ಬಂದಿಗಳಿಗೆ 35,000 ರೂ. ನೀಡಿದ ಕೋಚ್ ದ್ರಾವಿಡ್: ಕಾರಣ ಇಲ್ಲಿದೆ!

Kanpur test: Team India Coack Rahul Dravid rewarded groundstaff for preparing sporting pitch

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಾನ್ಪುರದಲ್ಲಿ ನಡೆದ ಮೊದಲ ಪಂದ್ಯ ರೋಚಕ ಡ್ರಾದಲ್ಲಿ ಅಂತ್ಯವಾಗಿದೆ. ಎರಡು ತಂಡಗಳು ಕೂಡ ಸಾಕಷ್ಟು ಪೈಪೋಟಿಯ ಪ್ರದರ್ಶನ ನೀಡಿದ್ದು ಅಂತಿಮವಾಗಿ ಪಂದ್ಯ ಯಾರ ಪರವಾಗಿಯೂ ಬಾರದೆ ಡ್ರಾಗೊಂಡಿದೆ. ಆದರೆ ಈ ಪಂದ್ಯದ ಬಳಿಕ ಟೀಮ್ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಒಂದು ನಿರ್ಧಾರ ಕುತೂಹಲ ಮೂಡಿಸಿದೆ. ಅಲ್ಲದೆ ಕ್ರಿಕೆಟ್ ಪ್ರೇಮಿಗಳು ದ್ರಾವಿಡ್ ನಿರ್ಧಾರದ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಕಾನ್ಪುರ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯವಾದ ಬಳಿಕ ಟೀಮ್ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕಾನ್ಪುರದ ಗ್ರೀನ್‌ಪಾರ್ಕ್ ಕ್ರೀಡಾಂಗಣದ ಸಿಬ್ಬಂದಿಗಳಿಗೆ ವಿಶೇಷ ಬಹುಮಾನವನ್ನು ನೀಡಿದ್ದಾರೆ. 35,000 ರೂಪಾಯಿ ನಗದನ್ನು ಬಹುಮಾನವಾಗಿ ನೀಡಿದ್ದಾರೆ ರಾಹುಲ್ ದ್ರಾವಿಡ್. ಟೀಮ್ ಇಂಡಿಯಾದ ಕೋಚ್ ಈ ಬಹುಮಾನ ನೀಡಲು ಬಲವಾದ ಕಾರಣವೂ ಇದೆ.

5ನೇ ದಿನವೂ ವಿಕೆಟ್ ಕೀಪಿಂಗ್‌ಗೆ ಕಣಕ್ಕಿಳಿಯದ ವೃದ್ದಿಮಾನ್ ಸಾಹ: ಕೆ.ಎಸ್‌ ಭರತ್‌ ಕಣಕ್ಕೆ5ನೇ ದಿನವೂ ವಿಕೆಟ್ ಕೀಪಿಂಗ್‌ಗೆ ಕಣಕ್ಕಿಳಿಯದ ವೃದ್ದಿಮಾನ್ ಸಾಹ: ಕೆ.ಎಸ್‌ ಭರತ್‌ ಕಣಕ್ಕೆ

ಮೊದಲನೇ ಪಂದ್ಯದ Pitch ಸಿದ್ದಪಡಿಸಿದವರಿಗೆ Dravid ಕೊಟ್ಟ ಬಹುಮಾನ | Oneindia Kannada

ಕಾನ್ಪುರದ ಗ್ರೀನ್ ಪಾರ್ಕ್‌ನಲ್ಲಿ ನಡೆದ ಪಂದ್ಯ ಡ್ರಾದಲ್ಲಿ ಅಂತ್ಯವಾಗಿದ್ದರೂ ಪಂದ್ಯದ ಕೊನೆಯ ಹಂತದ ವರೆಗೂ ಸಾಕಷ್ಟು ರೋಚಕವಾಗಿ ಸಾಗಿತ್ತು. ಇದರಲ್ಲಿ ಕಾನ್ಪುರದ ಕ್ರೀಡಾಂಗಣದ ಪಿಚ್‌ನ ಗುಣಮಟ್ಟವೂ ಪ್ರಮುಖ ಪಾತ್ರವಹಿಸಿದೆ. ಹಾಗಾಗಿ ಇಂತಾ ಉತ್ತಮ ಗುಣಮಟ್ಟದ ಪಿಚ್ ತಯಾರಿಸಿದ ಕಾರಣಕ್ಕೆ ಕ್ರೀಡಾಂಗಣದ ಸಿಬ್ಬಂದಿಗಳಿಕೆ ಕೋಚ್ ರಾಹುಲ್ ದ್ರಾವಿಡ್ ಬಹುಮಾನವಾಗಿ 35,000 ರೂಪಾಯಿ ಗಣವನ್ನು ನೀಡಿ ಗೌರವಿಸಿದ್ದಾರೆ.

ಈ ಬಗ್ಗೆ ಉತ್ತರ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಪಂದ್ಯದ ಮುಕ್ತಾದ ನಂತರ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. "ನಾವು ಅಧಿಕೃತವಾಗಿ ಘೋಷಣೆ ಮಾಡಲು ಇಷ್ಟಪಡುತ್ತಿದ್ದೇವೆ. ನಮ್ಮ ಕ್ರೀಡಾಂಗಣದ ನಿರ್ವಹಣಾ ಸಿಬ್ಬಂದಿಗೆ ಮಾನ್ಯ ರಾಹುಲ್ ದ್ರಾವಿಡ್ ಅವರು 35,000 ರೂಪಾಯಿ ವಿಶೇಷ ಪುರಸ್ಕಾರವನ್ನು ವೈಯಕ್ತಿಕವಾಗಿ ನೀಡಿದ್ದಾರೆ. ಎಂದು ಈ ಪ್ರಕಟನೆಯಲ್ಲಿ ಮಾಹಿತಿ ನೀಡಲಾಗಿದೆ.

ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಕೆಲ ಪ್ರಮುಖ ಆಟಗಾರರ ಅಲಭ್ಯತೆಯಲ್ಲಿ ಕಣಕ್ಕಿಳಿದಿತ್ತು. ಸಾಕಷ್ಟು ರೋಚಕವಾಗಿ ಸಾಗಿದ ಈ ಪಂದ್ಯದಲ್ಲಿ ಅಂತಿಮ ದಿನದಾಟಕ್ಕೂ ಮುನ್ನ ಟೀಮ್ ಇಂಡಿಯಾ ಗೆಲ್ಲುವ ಅವಕಾಶ ಪಡೆದುಕೊಂಡಿತ್ತು. ಆದರೆ ಕೊನೆಯ ದಿನ ನ್ಯೂಜಿಲೆಂಡ್ ಕೂಡ ಟೀಮ್ ಇಂಡಿಯಾ ವಿರುದ್ಧ ತಿರುಗಿ ಬಿದ್ದಿತ್ತು. ನಂತರ ಮತ್ತೆ ಪಮದ್ಯ ಭಾರತದ ಪರವಾಗುವ ಲಕ್ಷ ಕಾಣಿಸಿತ್ತಾದರೂ ಕಿವೀಸ್ ಪಡೆ ಅಂತಿಮ ಹಂತದಲ್ಲಿ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ಬಹುಕಾಲದ ಗೆಳತಿ ಜೊತೆಗೆ, ಟೀಂ ಇಂಡಿಯಾ ಬೌಲರ್ ಶಾರ್ದೂಲ್ ಠಾಕೂರ್ ನಿಶ್ಚಿತಾರ್ಥಬಹುಕಾಲದ ಗೆಳತಿ ಜೊತೆಗೆ, ಟೀಂ ಇಂಡಿಯಾ ಬೌಲರ್ ಶಾರ್ದೂಲ್ ಠಾಕೂರ್ ನಿಶ್ಚಿತಾರ್ಥ

ಹಾಗೆ ನೋಡಿದರೆ ನಾಲ್ಕನೇ ದಿನದಂತ್ಯಕ್ಕೆ ಗಮನಿಸಿದಾಗ ಪಂದ್ಯ ಎಲ್ಲಾ ಮೂರು ಫಲಿತಾಂಶ ಪಡೆಯುವ ಅಮಾನ ಅವಕಾಶವನ್ನು ಹೊಂದಿತ್ತು. ಅದರಲ್ಲೂ ಅಂತಿಮ ದಿನದ ಮೊದಲ ಸೆಶನ್‌ನಲ್ಲಿ ಎರಡು ಅದ್ಭುತವಾದ ಜೊತೆಯಾಟ ಟಾಮ್ ಲಾಥಮ್, ವಿಲಿಯಮ್ ಸಾಮರ್‌ವಿಲ್ಲೆ ಹಾಗೂ ಕೇನ್ ವಿಲಿಯಮ್ಸನ್ ಮಧ್ಯೆ ಬಂದದ್ದ ಕಾರಣ ಕಿವಿಸ್ ಪಡೆ ಮೇಲುಗೈ ಸಾಧಿಸುವ ಅವಕಾಶ ಉಂಟಾಗಿತ್ತು. ಆದರೆ ಅದಾದ ನಂತರ ಟೀಮ್ ಇಂಡಿಯಾ ಅನುಭವಿ ಸ್ಪಿನ್ನರ್‌ಗಳಾದ ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಪಂದ್ಯದಲ್ಲಿ ಮತ್ತೊಮ್ಮೆ ಟೀಮ್ ಇಂಡಿಯಾ ಹಿಡಿತ ಸಾಧಿಸುವಂತೆ ಮಾಡಿದರು.

ಈ ಪಂದ್ಯದಲ್ಲಿ ರವೀಂದ್ರ ಜಡೇಜಾ 40 ರನ್‌ಗಳಿಗೆ 4 ವಿಕೆಟ್ ಕಿತ್ತು ಮಿಂಚಿದರೆ ಆರ್ ಅಶ್ವಿನ್ 35 ರನ್‌ಗಳಿಗೆ 3 ವಿಕೆಟ್ ಪಡೆದರು. ಈ ಇಬ್ಬರ ದಾಳಿಯಿಂದಾಗಿ ನ್ಯೂಜಿಲೆಂಡ್ ಟಿ ವಿರಾಮದ ಅವಧಿಯಲ್ಲಿ 66 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಅಂತಿಮ ಹಂತದಲ್ಲಿ ಚೊಚ್ಚಲ ಪಂದ್ಯವನ್ನಾಡುತ್ತಿರುವ ರಚಿನ್ ರವೀಂದ್ರ ಹಾಗೂ 11ನೇ ಕ್ರಮಾಂಕದ ಆಟಗಾರ ಅಜಾಜ್ ಪಟೇಲ್ ದಿಟ್ಟ ಹೋರಾಟವನ್ನು ಮಾಡುವ ಮೂಲಕ ಮಂದಬೆಳಕಿನ ಕಾರಣದಿಂದ ಪಂದ್ಯ ಮುಂದೂಡುವವರೆಗೂ ಕ್ರಿಸ್‌ನಲ್ಲಿ ಗಟ್ಟಿಯಾಗಿ ತಳವೂರಿದ್ದರು. ಈ ಮೂಲಕ ಪಂದ್ಯ ರೋಚಕ ಡ್ರಾದಲ್ಲಿ ಅಂತ್ಯವಾಗಿದೆ. ಈ ಸರಣಿಯ ಎರಡನೇ ಪಂದ್ಯ ಡಿಸೆಂಬರ್ 3ರಿಂದ ಮುಂಬೈನ ವಾಂಕೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ.

Story first published: Tuesday, November 30, 2021, 10:26 [IST]
Other articles published on Nov 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X