ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಭಾರತ ಗೆಲ್ಲಲಿದೆ: ಕಪಿಲ್ ದೇವ್

Kapil Dev Believes India Will Win The Battle Against Coronavirus

ವಿಶ್ವಾದ್ಯಂತ ಹಬ್ಬುತ್ತಿರುವ ಕೊರೊನಾ ವೈರಸ್ ವಿರುದ್ಧ ಭಾರತ ಹೋರಾಟವನ್ನು ನಡೆಸುತ್ತಿದ್ದು ಈ ಹೋರಾಟದಲ್ಲಿ ಭಾರತ ಗೆಲುವನ್ನು ಸಾಧಿಸಲಿದೆ ಎಂದು ಕಪಿಲ್ ದೇವ್ ಹೇಳಿದ್ದಾರೆ. ಭಾರತ ಒಂದಾಗಿ ಈ ಹೋರಾಟದಲ್ಲಿ ಭಾಗಿಯಾದರೆ ಮಾತ್ರ ಈ ಗೆಲುವು ಸಾಧ್ಯವಾಗಲಿದೆ ಎಂದು ಅವರು ಹೇಳಿದ್ದಾರೆ.

ಭಾರತ ಕ್ರಿಕೆಟ್ ತಂಡ ಮೊದಲ ಬಾರಿಗೆ ವಿಶ್ವಕಪ್ ಗೆದ್ದ ತಂಡದ ನಾಯಕ ಕಪಿಲ್ ದೇವ್ ಕೊರೊನಾ ವೈರಸ್ ವಿಚಾರವಾಗಿ ಹೇಳಿಕೆಯನ್ನು ನೀಡಿದ್ದಾರೆ. ದೇಶಾದ್ಯಂತ ಲಾಕ್‌ಡೌನ್ ಮಾಡಲಾಗಿದ್ದು ಪ್ರತಿಯೊಬ್ಬರೂ ಮನೆಯೊಳಗೆ ಇದ್ದಾರೆ. ಹೀಗಿದ್ದಾಗ ಮಾತ್ರವೇ ಈ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಸಾಧ್ಯ ಎಂದು ಅವರು ಹೇಳಿದ್ದಾರೆ.

ಕೊರೊನಾ ವಿರುದ್ಧದ ಹೋರಾಟಕ್ಕೆ ಸಚಿನ್ ತೆಂಡೂಲ್ಕರ್ ಆರ್ಥಿಕ ಸಹಾಯಕೊರೊನಾ ವಿರುದ್ಧದ ಹೋರಾಟಕ್ಕೆ ಸಚಿನ್ ತೆಂಡೂಲ್ಕರ್ ಆರ್ಥಿಕ ಸಹಾಯ

ಇಂತಾ ಸಂದರ್ಭದಲ್ಲಿ ಎಲ್ಲರೂ ಮನೆಯಲ್ಲಿಯೇ ಇರಬೇಕಾಗುತ್ತದೆ. ಎಲ್ಲರೂ ತಾವಿರುವ ಮನೆಯೊಳಗೆ ಇರಿ. ಈ ವೈರಸ್ ಇನ್ನಷ್ಟು ಹಬ್ಬದಂತೆ ಮಾಡಲು ನಮ್ಮಿಂದ ಸಾಧ್ಯವಿರುವ ಏಕೈಕ ದಾರಿ ಇದಾಗಿದೆ ಎಂದು ಕಪಿಲ್‌ದೇವ್ ಸ್ಟಾರ್‌ಸ್ಪೋರ್ಟ್ಸ್ ಜೊತೆಗೆ ಮಾತನಾಡುತ್ತಾ ಹೇಳಿದ್ದಾರೆ.

ಮನೆಯೊಳಗೆ ಇರುವುದು ಅನೇಕರಿಗೆ ಕಷ್ಟಕರವಾಗಬಹುದು. ಆದರೆ ಇದು ಅನಿವಾರ್ಯವಾಗಿದೆ. ಇಂತಾ ಪರಿಸ್ಥಿತಿಯನ್ನು ಸಕಾರಾತ್ಮವಾಗಿ ತೆಗೆದುಕೊಳ್ಳಬೇಕು. ಕುಟುಂಬಕ್ಕೋಸ್ಕರ ಈ ಸಮಯವನ್ನು ಮೀಸಲಿಡಬೇಕು. ನಮಗೆ ನಾವೇ ಸವಾಲು ಹಾಕಿಕೊಂಡು ಮನೆಯೊಳಗೇ ಇರುವ ನಿರ್ಧಾರವನ್ನು ತೆಗೆದುಕೊಳ್ಳಲೇ ಬೇಕು ಎಂದಿದ್ದಾರೆ ಕಪಿಲ್ ದೇವ್.

ಕೊರೊನಾವೈರಸ್ ಆಸ್ಪತ್ರೆಯಾಗಿ ಬದಲಾಗಲಿದೆ ಮರಕಾನಾ ಸ್ಟೇಡಿಯಂಕೊರೊನಾವೈರಸ್ ಆಸ್ಪತ್ರೆಯಾಗಿ ಬದಲಾಗಲಿದೆ ಮರಕಾನಾ ಸ್ಟೇಡಿಯಂ

ಇಂತಾ ಕಠಿಣ ಪರಿಸ್ಥಿತಿ ಎಲ್ಲರನ್ನೂ ಜವಾಬ್ಧಾರಿಯುತರನ್ನಾಗಿ ಮಾಡುತ್ತದೆ ಎಂದು 61 ವರ್ಷದ ಮಾಜಿ ಕ್ರಿಕೆಟಿ್ ಕಪಿಲ್ ದೇವ್ ಹೇಳಿದ್ದಾರೆ. ಸರ್ಕಾರ ನೀಡುವ ಸೂಚನೆಯನ್ನು ಇಂತಾ ಸಂದರ್ಭದಲ್ಲಿ ಎಲ್ಲರೂ ಪಾಲಿಸಬೇಕು ಎಂದು ಕಪಿಲ್ ದೇವ್ ಮನವಿ ಮಾಡಿಕೊಂಡಿದ್ದಾರೆ.

Story first published: Friday, March 27, 2020, 16:16 [IST]
Other articles published on Mar 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X