ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಪಿಲ್‌ದೇವ್‌ ಮೆಚ್ಚಿದ ಇಬ್ಬರು ಆಲ್‌ರೌಂಡರ್‌ಗಳು: ದ್ರಾವಿಡ್ ಬಗ್ಗೆ ಕಪಿಲ್ ನುಡಿದ ಭವಿಷ್ಯವೇನು?

Kapil Dev chooses two Indian all-rounders as his favourites

ವಿಶ್ವ ಕಂಡ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಕಪಿಲ್‌ದೇವ್ ಕೂಡ ಒಬ್ಬರು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಅದರಲ್ಲೂ ಭಾರತ ಈವರೆಗೆ ಕಪಿಲ್‌ದೇವ್ ಅವರಂಥಾ ಮತ್ತೋರ್ವ ಆಲ್‌ರೌಂಡರ್‌ಅನ್ನು ಕಂಡಿಲ್ಲ. ಅನೇಕ ಯುವ ಆಟಗಾರರು ಆರಂಭದಲ್ಲಿ ಈ ಬಗ್ಗೆ ಭರವಸೆ ಹುಟ್ಟಿಸುತ್ತಾರಾದರೂ ಬಳಿಕ ಈ ಆಟಗಾರರು ಮಂಕಾಗುತ್ತಾ ಸಾಗುತ್ತಾರೆ. ಸುದೀರ್ಘ ಕಾಲ ಸ್ಥಿರವಾಗಿ ಪ್ರದರ್ಶನ ನೀಡಲು ವಿಫಲವಾಗುತ್ತಿದ್ದಾರೆ. ಅದರಲ್ಲಿ ಇತ್ತೀಚಿನ ಉದಾಹರಣೆಯೆಂದರೆ ಹಾರ್ದಿಕ್ ಪಾಂಡ್ಯ. ಎಲ್ಲಾ ಮಾದರಿಯಲ್ಲಿಯೂ ಹಾರ್ದಿಕ್ ಪಾಂಡ್ಯ ಭಾರೀ ನಿರೀಕ್ಷೆ ಹುಟ್ಟಿಸಿದ್ದ ಆಟಗಾರ. ಆದರೆ ಇತ್ತೀಚೆಗೆ ಗಾಯದ ಸಮಸ್ಯೆ ಮುಂತಾದ ಕಾರಣಗಳಿಂದಾಗಿ ಹಾರ್ದಿಕ್ ಈ ಹಿಂದಿನ ಪ್ರದರ್ಶನ ನೀಡಲು ವಿಫಲವಾಗಿದ್ದಾರೆ.

ಇನ್ನು ಕಪಿಲ್‌ದೇವ್ ತಮ್ಮ ಕಾಲದ ಶ್ರೇಷ್ಠ ನಾಲ್ವರು ಆಲ್‌ರೌಂಡರ್‌ಗಳಲ್ಲಿ ಒಬ್ಬರು. ಉಳಿದ ಮೂವರೆಂದರೆ ಇಮ್ರಾನ್ ಖಾನ್, ಇಯಾನ್ ಬೋಥಂ ಹಾಗೂ ರಿಚರ್ಡ್ ಹ್ಯಾಡ್ಲೀ. ಆದರೆ ಈಗಿನ ಕ್ರಿಕೆಟರ್‌ಗಳ ಪೈಕಿ ಕಪಿಲ್‌ದೇವ್‌ ಅವರ ನೆಚ್ಚಿನ ಇಬ್ಬರು ಆಲ್‌ರೌಂಡರ್‌ಗಳು ಯಾರು ಗೊತ್ತಾ? ಆ ಇಬ್ಬರು ಆಟಗಾರರು ಕೂಡ ಟೀಮ್ ಇಂಡಿಯಾದ ಕ್ರಿಕೆಟಿಗರು ಎಂಬುದು ಗಮನಾರ್ಹ ಸಂಗತಿ.

ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿದ ಶ್ರೇಯಸ್ ಅಯ್ಯರ್: ಈ ಸಾಧನೆ ಮಾಡಿದ ಭಾರತದ 16ನೇ ಪ್ಲೇಯರ್ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿದ ಶ್ರೇಯಸ್ ಅಯ್ಯರ್: ಈ ಸಾಧನೆ ಮಾಡಿದ ಭಾರತದ 16ನೇ ಪ್ಲೇಯರ್

ಕಪಿಲ್ ಹೇಳಿದ ಮೊದಲ ಆಲ್‌ರೌಂಡರ್

ಕಪಿಲ್ ಹೇಳಿದ ಮೊದಲ ಆಲ್‌ರೌಂಡರ್

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್‌ದೇವ್ ಅವರಲ್ಲಿ ಪ್ರಸ್ತುತ ಆಟಗಾರರ ಪೈಕಿ ನೆಚ್ಚಿನ ಆಲ್‌ರೌಂಡರ್‌ಗಳು ಯಾರು ಎಂಬ ಪ್ರಶ್ನೆ ಕೇಳಿದಾಗ ಅವರು ಉತ್ತರವನ್ನು ನೀಡಿದ್ದಾರೆ. ನಾನು ಕ್ರಿಕೆಟ್‌ಅನ್ನು ಈಗ ಕೇವಲ ಆನಂದವನ್ನು ಅನುಭವಿಸುವುದಕ್ಕಾಗಿ ಮಾತ್ರವೇ ನೋಡುತ್ತೇನೆ. ನಾನು ನೀವು ಹೇಳಿದ ದೃಷ್ಟಿಕೋನದಿಂದ ನೋಡುವುದಿಲ್ಲ. ನನ್ನ ಕೆಲಸ ಆಟವನ್ನು ಆನಂದಿಸುವುದು. ಆದರೆ ನಾನು ಆರ್‌ ಅಶ್ವಿನ್ ಅವರನ್ನು ಹೇಳಬಲ್ಲೆ. ಆತನಿಗೆ ಹ್ಯಾಟ್ಸ್‌ಆಫ್" ಎಂದಿದ್ದಾರೆ ಕಪಿಲ್ ದೇವ್

ಜಡೇಜಾ ಬಗ್ಗೆಯೂ ಹೊಗಳಿಕೆಯ ಮಾತುಗಳನ್ನಾಡಿದ ಕಪಿಲ್

ಜಡೇಜಾ ಬಗ್ಗೆಯೂ ಹೊಗಳಿಕೆಯ ಮಾತುಗಳನ್ನಾಡಿದ ಕಪಿಲ್

ಮಾಜಿ ನಾಯಕ ಕಪಿಲ್‌ದೇವ್ ಆರ್ ಅಶ್ವಿನ್ ಅವರನ್ನು ಹೆಸರಿಸಿದ ಬಳಿಕ ರವೀಂದ್ರ ಜಡೃಜಾ ಅವರು ಕೂಡ ತನ್ನ ನೆಚ್ಚಿನ ಆಲ್‌ರೌಂಡರ್ ಎಂದಿದ್ದಾರೆ. "ಜಡೇಜಾ ಕೂಡ.. ಆತನೋರ್ವ ಎಂತಾ ಅದ್ಭುತವಾದ ಕ್ರಿಕೆಟರ್. ಆದರೆ ದುರದೃಷ್ಟವಶಾತ್ ಆತ ಬ್ಯಾಟರ್‌ಆಗಿ ಉತ್ತಮ ಪ್ರಹತಿ ಕಂಡಿದ್ದರೂ ಬೌಲರ್ ಆಗಿ ಕೆಳಮುಖ ಕಂಡಿದ್ದಾರೆ. ಆತ ಆರಂಭದ ದಿನಗಳಲ್ಲಿ ತುಂಬಾ ಉತ್ತಮವಾದ ಬೌಲರ್ ಆಗಿದ್ದರು. ಆದರೆ ಈಗ ಆತ ಉತ್ತಮವಾದ ಬ್ಯಾಟರ್ ಆಗಿದ್ದಾರೆ. ಪ್ರತೀ ಬಾರಿಯೂ ತಂಡ ಆತನನ್ನು ಬಯಸುತ್ತದೆ ಹಾಗೂ ಅದಕ್ಕೆ ಪೂರಕವಾಗಿ ಆತ ಉತ್ತಮವಾಗಿ ರನ್‌ಗಳಿಸುತ್ತಾರೆ. ಆದರೆ ಬೌಲರ್ ಆಗಿ ಆತನಿಂದ ಉತ್ತಮ ಪ್ರದರ್ಶನ ಬರುತ್ತಿಲ್ಲ" ಎಂದಿದ್ದಾರೆ ಕಪಿಲ್‌ದೇವ್.

ನೂತನ ಕೋಚ್ ಬಗ್ಗೆ ಕಪಿಲ್‌ದೇವ್ ಹೇಳಿದ್ದೇನು?

ನೂತನ ಕೋಚ್ ಬಗ್ಗೆ ಕಪಿಲ್‌ದೇವ್ ಹೇಳಿದ್ದೇನು?

ಇನ್ನು ಒದೇ ಸಂದರ್ಭದಲ್ಲಿ ದಿಗ್ಗಜ ಆಟಗಾರ ಕಪಿಲ್‌ದೇವ್ ಭಾರತೀಯ ಕ್ರಿಕೆಟ್ ತಂಡದ ನೂತನ ಕೋಚ್ ರಾಹುಲ್ ದ್ರಾವಿಡ್ ಬಗ್ಗೆಯೂ ಮಾತನಾಡಿದ್ದಾರೆ. ರಾಹುಲ್ ದ್ರಾವಿಡ್ ತನ್ನ ಹೊಸ ಜವಾಬ್ಧಾರಿಯಲ್ಲಿ ಹೆಚ್ಚು ಯಶಸ್ಸು ಗಳಿಸುತ್ತಾರೆ ಎಂದಿದ್ದಾರೆ ಕಪಿಲ್‌ದೇವ್. ರಾಹುಲ್ ದ್ರಾವಿಡ್ ಭಾರತೀಯ ಕ್ರಿಕೆಟ್‌ನಲ್ಲಿ 16 ವರ್ಷಗಳ ಕಾಲ ಬ್ಯಾಟರ್ ಆಗಿದ್ದಕ್ಕಿಂತಲೂ ಹೆಚ್ಚಿನ ಯಶಸ್ಸನ್ನು ಕೋಚ್ ಹುದ್ದೆಯಲ್ಲಿ ಪಡೆಯಲಿದ್ದಾರೆ ಎಂದು ಕಪಿಲ್ ದೇವ್ ಭವಿಷ್ಯ ನುಡಿದಿದ್ದಾರೆ.

ದ್ರಾವಿಡ್ ಏನು ಸಾಧಿಸುತ್ತಾರೆ ಅನ್ನೋದು ನಾವು ನೋಡಲಿದ್ದೇವೆ

ದ್ರಾವಿಡ್ ಏನು ಸಾಧಿಸುತ್ತಾರೆ ಅನ್ನೋದು ನಾವು ನೋಡಲಿದ್ದೇವೆ

ಆತನೋರ್ವ ಅತ್ಯುತ್ತಮ ವ್ಯಕ್ತಿ ಮತ್ತು ಉತ್ತಮ ಕ್ರಿಕೆಟಿಗ. ಆತ ಕ್ರಿಕೆಟರ್ ಆಗಿದ್ದಕ್ಕಿಂತಲೂ ಅತ್ಯುತ್ತಮವಾಗಿ ಕೋಚ್ ಆಗಿ ಕಾರ್ಯ ನಿರ್ವಹಿಸಬಲ್ಲರು. ಯಾಕೆಂದರೆ ಕ್ರಿಕೆಟ್‌ನಲ್ಲಿ ಆತನಿಗಿಂತ ಉತ್ತಮವಾಗಿ ಈ ಹುದ್ದೆಯನ್ನು ಯಾರು ಕೂಡ ನಿರ್ವಹಿಸಲು ಸಾಧ್ಯವಿಲ್ಲ. ಆತನ ಪದಾರ್ಪಣೆಯ ತಕ್ಷಣವೇ ಇದನ್ನು ನೀವು ನಿರ್ಣಯಿಸಲು ಸಾಧ್ಯವಿಲ್ಲ. ಒಂದು ಪ್ರದರ್ಶನದ ಆಧಾರದ ಮೇಲೆ ನೀವು ಹೋಗಲು ಸಾಧ್ಯವಿಲ್ಲ. ಒಂದು ಅವಧಿಯಲ್ಲಿ ರಾಹುಲ್ ದ್ರಾವಿಡ್ ಏನು ಸಾಧಿಸಲಿದ್ದಾರೆ ಎಂಬುದನ್ನು ನಾವೆಲ್ಲಾ ನೋಡಲಿದ್ದೇವೆ" ಎಂದಿದ್ದಾರೆ ಮಾಜಿ ಕ್ರಿಕೆಟಿಗ ಕಪಿಲ್‌ದೇವ್

Shreyas Iyer ತಂದ ಈ ದಿನಕ್ಕಾಗಿ ಕಾದು ಕುಳಿತಿದ್ದರು | Oneindia Kannada

Story first published: Saturday, November 27, 2021, 10:42 [IST]
Other articles published on Nov 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X