ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌ನಲ್ಲಿ ಕಪಿಲ್‌ ದೇವ್ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದ ದಿನವಿದು

Kapil Dev played one of the finest ODI knocks in 1983 World Cup

ನವದೆಹಲಿ, ಜೂನ್ 18: ಟೀಮ್ ಇಂಡಿಯಾ ಮಾಜಿ ನಾಯಕ ಕಪಿಲ್‌ ದೇವ್ ಅವರು ವಿಶ್ವಕಪ್‌ನಲ್ಲಿ ಸ್ಫೋಟಕ ಶತಕ ಬಾರಿಸಿದ್ದರು. ಅಂದು ಕಪಿಲ್ ನೀಡಿದ್ದ ಈ ಪ್ರದರ್ಶನ ಏಕದಿನದಲ್ಲಿನ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನವಾಗಿ ಗುರುತಿಸಿಕೊಂಡಿದೆ. ಜಿಂಬಾಬ್ವೆ ವಿರುದ್ಧ ಕಪಿಲ್ ಭರ್ಜರಿ ಬ್ಯಾಟಿಂಗ್ ನಡೆಸಿದ್ದರು.

1 ಪಂದ್ಯ, 3 ತಂಡ ಮತ್ತು 36 ಓವರ್: ಕ್ರಿಕೆಟ್‌ ಲೋಕಕ್ಕೆ ಹೊಸ ಮಾದರಿ ಪರಿಚಯಿಸುತ್ತಿದೆ ದ.ಆಫ್ರಿಕಾ1 ಪಂದ್ಯ, 3 ತಂಡ ಮತ್ತು 36 ಓವರ್: ಕ್ರಿಕೆಟ್‌ ಲೋಕಕ್ಕೆ ಹೊಸ ಮಾದರಿ ಪರಿಚಯಿಸುತ್ತಿದೆ ದ.ಆಫ್ರಿಕಾ

1983 ಜೂನ್ 18ರಂದು ಇಂಗ್ಲೆಂಡ್‌ನ ರಾಯಲ್ ಟನ್‌ಬ್ರಿಡ್ಜ್‌ ವೆಲ್ಸ್‌ನ ನೆವಿಲ್ ಗ್ರೌಂಡ್‌ನಲ್ಲಿ ನಡೆದಿದ್ದ ವಿಶ್ವಕಪ್ 20ನೇ ಪಂದ್ಯಕ್ಕಾಗಿ ಭಾರತ ಮತ್ತು ಜಿಂಬಾಬ್ವೆ ತಂಡಗಳು ಮೈದಾನಕ್ಕಿಳಿದಿದ್ದವು. ಆವತ್ತು ಆರಂಭದಲ್ಲಿ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಭಾರತ ಆಘಾತ ಅನುಭವಿಸಿತಾದರೂ ಅನಂತರ ಕಪಿಲ್ ಬ್ಯಾಟಿಂಗ್‌ನಿಂದ ಭರ್ಜರಿ ರನ್ ಕಲೆ ಹಾಕಿತ್ತು.

ಪಂದ್ಯ ಆಡಿ 50 ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟಿಗನಾದ ಜೋನ್ಸ್: ಗಮ್ಮತ್ತಿನ ಕತೆ!ಪಂದ್ಯ ಆಡಿ 50 ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟಿಗನಾದ ಜೋನ್ಸ್: ಗಮ್ಮತ್ತಿನ ಕತೆ!

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತದಿಂದ ಸುನಿಲ್ ಗವಾಸ್ಕರ್ 0, ಕ್ರಿಶ್ ಶ್ರೀಕಾಂತ್ 0, ಮೋಹಿಂದರ್ ಅಮರ್‌ನಾಥ್ 5, ಸಂದೀಪ್ ಪಾಟಿಲ್ 1 ರನ್‌ಗೆ ವಿಕೆಟ್ ಒಪ್ಪಿಸಿದ್ದರು. ಆದರೆ 6ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಕಪಿಲ್ ದೇವ್ ಕ್ರೀಸಿಗಂಟಿ ನಿಂತರು.

ಕೇರಳ ರಣಜಿ ತಂಡದಲ್ಲಿ ವಿವಾದಾತ್ಮಕ ವೇಗಿ ಶ್ರೀಶಾಂತ್‌ಗೆ ಸ್ಥಾನ!ಕೇರಳ ರಣಜಿ ತಂಡದಲ್ಲಿ ವಿವಾದಾತ್ಮಕ ವೇಗಿ ಶ್ರೀಶಾಂತ್‌ಗೆ ಸ್ಥಾನ!

ಆವತ್ತು ಕೇವಲ 138 ಎಸೆತಗಳಿಗೆ ದೇವ್ ಅಜೇಯ 175 ರನ್ ಬಾರಿಸಿದ್ದರು. ಇದರಲ್ಲಿ 16 ಬೌಂಡರಿ, 6 ಸಿಕ್ಸ್‌ಗಳು ಸೇರಿದ್ದವು. ಕಪಿಲ್ ಏಕಾಂಗಿ ಹೋರಾಟದೊಂದಿಗೆ ಭಾರತ 60 ಓವರ್‌ಗೆ 8 ವಿಕೆಟ್ ನಷ್ಟದಲ್ಲಿ 266 ರನ್ ಕಲೆ ಹಾಕಿತ್ತು. ಗುರಿ ಬೆನ್ನಟ್ಟಿದ ಜಿಂಬಾಬ್ವೆ 57 ಓವರ್‌ಗೆ ಎಲ್ಲಾ ವಿಕೆಟ್‌ ಕಳೆದು 235 ರನ್ ಬಾರಿಸಿ 31 ರನ್‌ನಿಂದ ಶರಣಾಯಿತು. ಕಪಿಲ್ ದೇವ್ ಪಂದ್ಯಶ್ರೇಷ್ಠರೆನಿಸಿದ್ದರು.

Story first published: Friday, June 19, 2020, 10:41 [IST]
Other articles published on Jun 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X