ಬೌಲಿಂಗ್ ಮಾಡದ ಹಾರ್ದಿಕ್ ಪಾಂಡ್ಯನನ್ನ ಆಲ್‌ರೌಂಡರ್ ಎಂದು ಪರಿಗಣಿಸಬಹುದೇ? : ಕಪಿಲ್ ದೇವ್‌

ಟೀಂ ಇಂಡಿಯಾದ ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ ಸದ್ಯ ಕೆಟ್ಟ ಫಾರ್ಮ್‌ನಿಂದಾಗಿ ತಂಡದಿಂದ ಹೊರಬಿದ್ದಿದ್ದಾರೆ. ಹೀಗಾಗಿಯೇ ಇವರನ್ನ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೂ ಆಯ್ಕೆ ಮಾಡಲಿಲ್ಲ. ಇವರ ಜಾಗದಲ್ಲಿ ಯುವ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಸ್ಥಾನ ಪಡೆದಿದ್ರು.

ಬ್ಯಾಟಿಂಗ್‌ನಲ್ಲಿ ಮಂಕಾಗಿರುವ, ಬೌಲಿಂಗ್‌ನಲ್ಲೂ ಸಂಪೂರ್ಣ ಲಯ ಕಳೆದುಕೊಂಡಿರುವ ಹಾರ್ದಿಕ್ ಪಾಂಡ್ಯರ ಭವಿಷ್ಯ ಕ್ರಿಕೆಟ್ ವೃತ್ತಿಜೀವನ ಏನು ಎನ್ನುವುದು ಪ್ರಶ್ನೆಯಾಗಿ ಉಳಿದಿದೆ. ಹೀಗಿರುವಾಗ ಹಾರ್ದಿಕ್ ಪಾಂಡ್ಯ ನಿಯಮಿತವಾಗಿ ಬೌಲಿಂಗ್ ಮಾಡದ ಕಾರಣ ಅವರನ್ನು ಆಲ್ ರೌಂಡರ್ ಎಂದು ಪರಿಗಣಿಸಬಹುದೇ ಎಂದು ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಪ್ರಶ್ನಿಸಿದ್ದಾರೆ.

ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿದ ಶ್ರೇಯಸ್ ಅಯ್ಯರ್: ಈ ಸಾಧನೆ ಮಾಡಿದ ಭಾರತದ 16ನೇ ಪ್ಲೇಯರ್ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿದ ಶ್ರೇಯಸ್ ಅಯ್ಯರ್: ಈ ಸಾಧನೆ ಮಾಡಿದ ಭಾರತದ 16ನೇ ಪ್ಲೇಯರ್

ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡ ಬಳಿಕ ಐಪಿಎಲ್ 14ನೇ ಸೀಸನ್‌ನಲ್ಲಿ ಆಡಿದ ಪಾಂಡ್ಯ ಬ್ಯಾಟಿಂಗ್‌ನಲ್ಲೂ ಮಿಂಚಲಿಲ್ಲ. ಜೊತೆಗೆ ಬೌಲಿಂಗ್‌ ಕೂಡ ಮಾಡದೇ ಆಲ್‌ರೌಂಡರ್ ಸ್ಥಾನಕ್ಕೆ ನ್ಯಾಯ ಒದಗಿಸಲಿಲ್ಲ. ಹೀಗಾಗಿ ಪಾಂಡ್ಯ ಗಾಯದಿಂದ ಹೊರಬರಬೇಕು ಮತ್ತು ಮತ್ತೊಮ್ಮೆ ಬೌಲಿಂಗ್ ಪ್ರಾರಂಭಿಸಬೇಕು ಎಂದು ಕಪಿಲ್‌ದೇವ್ ಹೇಳಿದ್ದಾರೆ.

1983ರ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್‌, ಪಾಂಡ್ಯ ಭಾರತ ತಂಡಕ್ಕೆ ಬ್ಯಾಟ್‌ನೊಂದಿಗೆ ಉತ್ತಮ ಕೊಡುಗೆ ನೀಡಬಲ್ಲರು ಎಂದು ಒಪ್ಪಿಕೊಂಡರು, ಆದರೆ ಇನ್ನೂ ಬೌಲರ್ ಎಂದು ಸಾಭೀತುಪಡಿಸಿಲ್ಲ ಎಂದು ಹೇಳಿದ್ದಾರೆ.

"ಅವರು ಆಲ್ ರೌಂಡರ್ ಎಂದು ಪರಿಗಣಿಸಲು ಎರಡೂ ಕೆಲಸಗಳನ್ನು ಮಾಡಬೇಕು. ಆತ ಬೌಲಿಂಗ್ ಮಾಡುತ್ತಿಲ್ಲ, ಆದ್ದರಿಂದ ನಾವು ಅವನನ್ನು ಆಲ್ ರೌಂಡರ್ ಎಂದು ಕರೆಯಬಹುದೇ? ಅವರು ಬೌಲಿಂಗ್ ಮಾಡಲಿ, ಅವರು ದೇಶಕ್ಕೆ ಅತ್ಯಂತ ಪ್ರಮುಖ ಬ್ಯಾಟರ್, ಬೌಲಿಂಗ್‌ಗಾಗಿ ಅವರು ಇನ್ನೂ ಹೆಚ್ಚಿನ ಪಂದ್ಯಗಳನ್ನು ಆಡಬೇಕು, ಪ್ರದರ್ಶನ ನೀಡಬೇಕು ಮತ್ತು ಬೌಲಿಂಗ್ ಮಾಡಬೇಕು "ಎಂದು ಕಪಿಲ್ ದೇವ್ ರಾಯಲ್ ಕಲ್ಕತ್ತಾ ಗಾಲ್ಫ್ ಕೋರ್ಸ್‌ನಲ್ಲಿ ಮಾತನಾಡುತ್ತಾ ಹೇಳಿದರು.

Shreyas Iyer ತಂದ ಈ ದಿನಕ್ಕಾಗಿ ಕಾದು ಕುಳಿತಿದ್ದರು | Oneindia Kannada

ಹಾರ್ದಿಕ್ ಪಾಂಡ್ಯ ಮೇಲೆ ಹೆಚ್ಚು ಅವಲಂಬಿತವಾಗಿದ್ದೇ ತಪ್ಪಾಯ್ತ?
ಸ್ಟಾರ್ ಆಲ್‌ರೌಂಡರ್ ಎಂದುಕೊಂಡು ಹಾರ್ದಿಕ್ ಪಾಂಡ್ಯರನ್ನ ಪ್ರತಿ ಸರಣಿಗೂ ಆಯ್ಕೆ ಮಾಡುತ್ತಿದ್ದ ಆಯ್ಕೆಗಾರರು ಇದೀಗ ದೊಡ್ಡ ಪಾಠ ಕಲಿತಂತಿದೆ. ಪಾಂಡ್ಯ ಇತ್ತೀಚಿನ ದಿನಗಳಲ್ಲಿ ಬೌಲಿಂಗ್‌ನಲ್ಲೂ ಕಳೆಗುಂದಿದ್ದಾರೆ. ಸಂಪೂರ್ಣ ಬ್ಯಾಟ್ಸ್‌ಮನ್ ಎಂದು ಕೂಡ ತಂಡದಲ್ಲಿ ಇರಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಆಯ್ಕೆಗಾರರು ಉತ್ತಮ ಬ್ಯಾಟ್ಸ್‌ಮನ್ ಜೊತೆಗೆ ಟಿ20, ಏಕದಿನ ಫಾರ್ಮೆಟ್‌ನಲ್ಲಿ ಬೌಲಿಂಗ್ ಮಾಡುವ ಆಲ್‌ರೌಂಡರ್ ಹುಡುಕಾಟದಲ್ಲಿದ್ದಾರೆ. ಇದೇ ಕಾರಣಕ್ಕೆ ವೆಂಕಟೇಶ್ ಅಯ್ಯರ್ ನಂತಹ ಪ್ರತಿಭೆಗಳಿಗೆ ಮಣೆ ಹಾಕಲಾಗುತ್ತಿದೆ.

For Quick Alerts
ALLOW NOTIFICATIONS
For Daily Alerts
Story first published: Friday, November 26, 2021, 21:54 [IST]
Other articles published on Nov 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X