ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆ.ಎಲ್ ರಾಹುಲ್ ಟೆಸ್ಟ್‌ಗೆ ಕಡೆಗಣನೆ: ಆಯ್ಕೆಯ ಪ್ರಕ್ರಿಯೆ ಬಗ್ಗೆ ಕಪಿಲ್‌ದೇವ್ ಕೆಂಡ

Kapil Dev Questions India After Defeat In 1st Test

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಭಾರತ ಹೀನಾಯವಾಗಿ ಸೋತಿದೆ. ಈ ಬಗ್ಗೆ ವಿಮರ್ಶೆಗಳು ಈಗ ಆರಂಭವಾಗಿದ್ದು ಟೀಮ್ ಇಂಡಿಯಾ ಎಡವಿದ್ದೆಲ್ಲಿ ಎಂಬ ಚರ್ಚೆಗಳು ನಡೆಯುತ್ತಿದೆ. ಈ ವಿಚಾರವಾಗಿ ಭಾರತದ ಮಾಜಿ ನಾಯಕ ಕಪಿಲ್‌ದೇವ್ ಹೇಳಿಕೆಯನ್ನು ನೀಡಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಸೋಲಿನ ಬೆನ್ನಲ್ಲೇ ಕಪಿಲ್ ದೇವ್ ಟೀಮ್ ಇಂಡಿಯಾದ ಮ್ಯಾನೇಜ್‌ಮೆಂಟ್‌ನ ನಿರ್ಧಾರಕ್ಕೆ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಪದೇ ಪದೇ ಆಡುವ ಬಳಗದಲ್ಲಿ ಬದಲಾವಣೆಯಾಗುತ್ತಿರುವ ವಿಚಾರವಾಗಿ ಅವರು ಮ್ಯಾನೇಜ್ಮೆಂಟನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ಕೆ.ಎಲ್ ರಾಹುಲ್ ಅವರನ್ನು ಆಯ್ಕೆ ಮಾಡದಿರುವ ಬಗ್ಗೆಯೂ ಕಪಿಲ್ ದೇವ್ ಕಟುಮಾತುಗಳನ್ನಾಡಿದ್ದಾರೆ.

ರಾಹುಲ್ ಕಡೆಗಣನೆ ಸರಿಯಲ್ಲ

ರಾಹುಲ್ ಕಡೆಗಣನೆ ಸರಿಯಲ್ಲ

ಕೆ.ಎಲ್ ರಾಹುಲ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಆದರೆ ಟೆಸ್ಟ್‌ ತಂಡಕ್ಕೆ ರಾಹುಲ್ ಆಯ್ಕೆಯಾಗದಿರುವುದಕ್ಕೆ ಕಪಿಲ್‌ದೇವ್ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ. ಆಟಗಾರರ ಫಾರ್ಮ್‌ಅನ್ನು ಗಮನದಲ್ಲಿಟ್ಟುಕೊಂಡು ತಂಡಕ್ಕೆ ಆಯ್ಕೆ ಮಾಡಬೇಕೆ ಹೊರತು ಫಾರ್ಮೆಟ್‌ಅನ್ನು ನೋಡಿಕೊಂಡು ಅಲ್ಲ ಎಂದು ಕಪಿಲ್ ಆಯ್ಕೆಯ ಮಾನದಂಡವನ್ನು ಕಟುಮಾತುಗಳಲ್ಲಿ ಟೀಕಿಸಿದ್ದಾರೆ.

ಪ್ರತಿ ಪಂದ್ಯದಲ್ಲೂ ಬದಲಾವಣೆ

ಪ್ರತಿ ಪಂದ್ಯದಲ್ಲೂ ಬದಲಾವಣೆ

ಆಡುವ ಬಳಗದಲ್ಲಿ ಪದೇ ಪದೇ ಬದಲಾವಣೆಯನ್ನು ಮಾಡಲಾಗುತ್ತಿದೆ. ಪ್ರತಿ ಪಂದ್ಯಕ್ಕೂ ತಂಡವನ್ನು ಬದಲಾಯಿಸಲಾಗುತ್ತಿದೆ. ಇದು ಆಟಗಾರರ ಪ್ರದರ್ಶನದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ ಎಂದು ಕಪಿಲ್‌ದೇವ್ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ಮಾಡಿಕೊಳ್ಳುತ್ತಿರುವ ಯಡವಟ್ಟಿನ ಬಗ್ಗೆ ತುಟಿಬಿಚ್ಚಿದ್ದಾರೆ.

ನ್ಯೂಜಿಲೆಂಡ್ ಬಗ್ಗೆ ಮೆಚ್ಚುಗೆ

ನ್ಯೂಜಿಲೆಂಡ್ ಬಗ್ಗೆ ಮೆಚ್ಚುಗೆ

ಕಪಿಲ್ ದೇವ್ ಈ ಸಂದರ್ಭದಲ್ಲಿ ನ್ಯೂಜಿಲೆಂಡ್ ತಂಡದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ನ್ಯೂಜಿಲೆಂಡ್ ಆಟಗಾರು ಏಕದಿನ ಮತ್ತು ಟೆಸ್ಟ್ ಸರಣಿಯಲ್ಲಿ ಅದ್ಭುತ ರೀತಿಯಲ್ಲಿ ಆಡಿದ್ದಾರೆ. ಏಕದಿನ ಮತ್ತು ಟೆಸ್ಟ್‌ನಲ್ಲಿ ಸೋಲನ್ನು ಕಾಣದೆ ಮುನ್ನಗ್ಗುತ್ತಿದ್ದಾರೆ ಎಂದಿದ್ದಾರೆ ಕಪಿಲ್ ದೇವ್.

ಆಟಗಾರರಿಗೆ ಅಭದ್ರತೆ

ಆಟಗಾರರಿಗೆ ಅಭದ್ರತೆ

ಆಟಗಾರರಿಗೆ ಒಂದು ನಿಗದಿತ ಕ್ರಮಾಂಕವನ್ನು ನೀಡಬೇಕು. ಪ್ರತೀ ಪಂದ್ಯದಲ್ಲೂ ತಂಡವನ್ನು ಬದಲಾವಣೆಯನ್ನು ಮಾಡಲಾಗುತ್ತಿದೆ. ಹೀಗಾಗಿ ತಮ್ಮ ಸ್ಥಾನದ ಬಗ್ಗೆ ಆಟಗಾರರಿಗೆ ಅಭದ್ರತೆ ಕಾಡುತ್ತದೆ. ಇದು ಆಟಗಾರರ ಪ್ರದರ್ಶನದ ಮೇಲೆ ಪ್ರಭಾವ ಬೀರುತ್ತದೆ ಎಂದು ಕಪಿಲ್ ದೇವ್ ಹೇಳಿಕೆಯನ್ನು ನೀಡಿದ್ದಾರೆ.

ಆಟಗಾರಲ್ಲಿ ವಿಶ್ವಾಸ ಮೂಡಿಸಬೇಕು

ಆಟಗಾರಲ್ಲಿ ವಿಶ್ವಾಸ ಮೂಡಿಸಬೇಕು

ತಾವು ಆಡುತ್ತಿದ್ದಾಗ ಮತ್ತು ಈಗ ಸಾಕಷ್ಟು ಬದಲಾವಣೆಗಳನ್ನು ನೋಡುತ್ತಿದ್ದೇವೆ, ಈಗ ಅದೇನಾಗುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ. ಒಂದು ತಂಡವನ್ನು ಕಟ್ಟುವಾಗ ಆಟಗಾರರಲ್ಲಿ ವಿಶ್ವಾಸವನ್ನು ತುಂಬುವ ಕೆಲವನ್ನು ಮಾಡಬೇಕು. ಆದರೆ ಪದೆ ಪದೆ ತಂಡವನ್ನು ಬದಲಾವಣೆ ಮಾಡುವುದು ಒಳ್ಳೆಯ ಲಕ್ಷಣವಲ್ಲ ಎಂದು ಟೀಕಿಸಿದ್ದಾರೆ.

Story first published: Tuesday, February 25, 2020, 13:25 [IST]
Other articles published on Feb 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X