ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ಕಾರಣದಿಂದಲೇ ಭಾರತವನ್ನು ವಿಶ್ವಕಪ್‌ನಲ್ಲಿ ಪಾಕಿಸ್ತಾನ ಇದುವರೆಗೂ ಸೋಲಿಸಲು ಆಗಿಲ್ಲ: ಕಪಿಲ್ ದೇವ್

T20 Worldcup 2021: Kapil Dev revealed the secret behind the success of India against Pakistan in WC matches

ಚುಟುಕು ಮಹಾಸಮರ ಎಂದೇ ಹೆಸರನ್ನು ಮಾಡಿರುವ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ 5 ವರ್ಷಗಳ ಬಳಿಕ ಮರಳಿ ಬಂದಿದ್ದು ಕಳೆದ ಭಾನುವಾರದಿಂದ ಆರಂಭವಾಗಿದೆ. ಭಾನುವಾರದಿಂದ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯಗಳು ಆರಂಭವಾಗಿದ್ದು ಇದರ ನಡುವೆಯೇ ಅಭ್ಯಾಸ ಪಂದ್ಯಗಳು ಕೂಡ ನಡೆಯುತ್ತಿವೆ. ಇನ್ನು ಟೂರ್ನಿಯ ಸೂಪರ್ 12 ಹಂತವು ಅಕ್ಟೋಬರ್ 23ರ ಶನಿವಾರದಂದು ಆರಂಭವಾಗಲಿದೆ.

ಟಿ20 ವಿಶ್ವಕಪ್: ಭಾರತದ ವಿರುದ್ಧ ಪಾಕಿಸ್ತಾನ ಗೆಲ್ಲುವ ಸಾಧ್ಯತೆ ಹೆಚ್ಚಿದೆ; ಕಾರಣ ಬಿಚ್ಚಿಟ್ಟ ಸೆಹ್ವಾಗ್!ಟಿ20 ವಿಶ್ವಕಪ್: ಭಾರತದ ವಿರುದ್ಧ ಪಾಕಿಸ್ತಾನ ಗೆಲ್ಲುವ ಸಾಧ್ಯತೆ ಹೆಚ್ಚಿದೆ; ಕಾರಣ ಬಿಚ್ಚಿಟ್ಟ ಸೆಹ್ವಾಗ್!

ಇನ್ನು ಟೂರ್ನಿಯಲ್ಲಿ ಟ್ರೋಫಿ ಗೆಲ್ಲಬಹುದಾದ ತಂಡಗಳ ಪಟ್ಟಿಯಲ್ಲಿ ಒಂದಾಗಿರುವ ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ತನ್ನ ಮೊದಲನೇ ಪಂದ್ಯವನ್ನು ಅಕ್ಟೋಬರ್ 24ರ ಭಾನುವಾರದಂದು ಆಡಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಬದ್ಧ ಎದುರಾಳಿ ಪಾಕಿಸ್ತಾನ ಎದುರಾಗಲಿದ್ದು ಇದೊಂದು ಹೈ ವೋಲ್ಟೇಜ್ ಪಂದ್ಯವಾಗಿರಲಿದೆ. ಇನ್ನು ಟೂರ್ನಿಯ ಅಭ್ಯಾಸ ಪಂದ್ಯಗಳಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳೆರಡೂ ಉತ್ತಮ ಪ್ರದರ್ಶನವನ್ನು ನೀಡಿರುವುದು ಈ ಬಾರಿಯ ಮುಖಾಮುಖಿ ಮತ್ತಷ್ಟು ಕುತೂಹಲವನ್ನು ಹೆಚ್ಚಿಸುವಲ್ಲಿ ಕಾರಣವಾಗಿದೆ.

ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಸಾಮಾನ್ಯ ಸರಣಿ ನಡೆಯುತ್ತಿದೆ ಎಂದರೆ ಸಾಕು ದೊಡ್ಡ ಮಟ್ಟದ ಸದ್ದು ನಿರ್ಮಾಣವಾಗಿ ಬಿಡುತ್ತದೆ. ಹೀಗಿರುವಾಗ ಈ ಎರಡೂ ತಂಡಗಳ ನಡುವೆ ವಿಶ್ವಕಪ್ ಪಂದ್ಯ ನಡೆಯುತ್ತಿದೆ ಎಂದರೆ ಅದರ ಪ್ರಭಾವ ಕ್ರಿಕೆಟ್ ಜಗತ್ತಿನಲ್ಲಿ ಸಾಮಾನ್ಯವಾಗಿರುವುದಿಲ್ಲ. ಈ ಎರಡೂ ತಂಡಗಳ ನಡುವೆ ನಡೆಯಲಿರುವ ಪಂದ್ಯವನ್ನು ವೀಕ್ಷಿಸುವುದಕ್ಕಾಗಿ ಕೆಲಸಗಳನ್ನು ಬದಿಗಿಟ್ಟು ಟಿವಿ ಮುಂದೆ ಕೂರುವ ಕೋಟ್ಯಂತರ ವೀಕ್ಷಕರಿದ್ದಾರೆ. ಕೇವಲ ಭಾರತ ಮತ್ತು ಪಾಕಿಸ್ತಾನ ದೇಶಗಳ ಕ್ರಿಕೆಟ್ ಅಭಿಮಾನಿಗಳು ಮಾತ್ರವಲ್ಲದೆ ವಿಶ್ವದಾದ್ಯಂತ ಇರುವ ಕ್ರಿಕೆಟ್ ವೀಕ್ಷಕರು ಈ ಪಂದ್ಯವನ್ನು ತಪ್ಪದೇ ವೀಕ್ಷಿಸುತ್ತಾರೆ. ಹೀಗೆ ಸದಾ ದೊಡ್ಡ ಮಟ್ಟದ ಕ್ರೇಜ್ ಹುಟ್ಟು ಹಾಕುವ ಭಾರತ ಮತ್ತು ಪಾಕಿಸ್ತಾನ ನಡುವಿನ ವಿಶ್ವಕಪ್ ಹಣಾಹಣಿಯ ಇತಿಹಾಸದಲ್ಲಿ ಒಂದೇ ಒಂದು ಬಾರಿ ಕೂಡ ಪಾಕಿಸ್ತಾನ ತಂಡ ಗೆಲುವನ್ನು ಸಾಧಿಸಿಯೇ ಇಲ್ಲ. ಪ್ರತಿ ಬಾರಿಯ ವಿಶ್ವಕಪ್ ಹಣಾಹಣಿ ಆರಂಭವಾಗುವಾಗ ಈ ಬಾರಿ ಭಾರತವನ್ನು ಸೋಲಿಸಿ ಇತಿಹಾಸ ನಿರ್ಮಿಸುತ್ತೇವೆ ಎಂಬ ಹೇಳಿಕೆಯನ್ನು ಪಾಕಿಸ್ತಾನ ನೀಡುತ್ತಾ ಬಂದಿದೆಯೇ ಹೊರತು ಪಂದ್ಯವನ್ನು ಗೆಲ್ಲುವಲ್ಲಿ ಮಾತ್ರ ಸಫಲವಾಗಿಲ್ಲ.

ಮುಂದಿನ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌‌ಗೆ ಎದುರಾಗಲಿರುವ ಸಂಕಷ್ಟವನ್ನು ಬಿಚ್ಚಿಟ್ಟ ರೋಹಿತ್ ಶರ್ಮಾಮುಂದಿನ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌‌ಗೆ ಎದುರಾಗಲಿರುವ ಸಂಕಷ್ಟವನ್ನು ಬಿಚ್ಚಿಟ್ಟ ರೋಹಿತ್ ಶರ್ಮಾ

ಹೀಗೆ ಭಾರತದ ವಿರುದ್ಧ ವಿಶ್ವಕಪ್ ಸಮರದಲ್ಲಿ ಎಲ್ಲಾ ಪಂದ್ಯಗಳನ್ನು ಸೋತಿರುವ ಪಾಕಿಸ್ತಾನದ ಹಿಂದಿನ ವಿಫಲತೆಗೆ ಕಾರಣವೇನು ಎಂಬುದನ್ನು ಭಾರತದ ಮಾಜಿ ನಾಯಕ, ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಈ ಕೆಳಕಂಡಂತೆ ತಿಳಿಸಿದ್ದಾರೆ.

ಎಲ್ಲಾ ಒತ್ತಡ ಮತ್ತು ಉತ್ಸಾಹದ ಮೇಲೆ ಅವಲಂಬಿತವಾಗಿರುತ್ತದೆ

ಎಲ್ಲಾ ಒತ್ತಡ ಮತ್ತು ಉತ್ಸಾಹದ ಮೇಲೆ ಅವಲಂಬಿತವಾಗಿರುತ್ತದೆ

"ಪಂದ್ಯದ ಗೆಲುವು ಮತ್ತು ಸೋಲು ಒತ್ತಡ ಹಾಗೂ ಉತ್ಸಾಹದ ಮೇಲೆ ಅವಲಂಬಿತವಾಗಿರುತ್ತದೆ. ಹೆಚ್ಚಿನ ಒತ್ತಡದೊಂದಿಗೆ ಪಂದ್ಯವನ್ನಾಡಿದರೆ ಖಂಡಿತವಾಗಿಯೂ ಆ ಪಂದ್ಯದಲ್ಲಿ ಸೋಲನುಭವಿಸಬೇಕಾಗುತ್ತದೆ. ಆದರೆ ಉತ್ಸಾಹದೊಂದಿಗೆ ಪಂದ್ಯವನ್ನಾಡಿದರೆ ಆ ಪಂದ್ಯವನ್ನು ಗೆಲ್ಲುವ ಸಾಧ್ಯತೆ ಆ ತಂಡಗಳಿಗೆ ಹೆಚ್ಚಿರುತ್ತದೆ" ಎಂದು ಕಪಿಲ್ ದೇವ್ ಹೇಳಿದ್ದಾರೆ. ಈ ಮೂಲಕ ಭಾರತ ಪಾಕಿಸ್ತಾನ ವಿರುದ್ಧದ ವಿಶ್ವಕಪ್ ಪಂದ್ಯಗಳಲ್ಲಿ ಒತ್ತಡವನ್ನು ಮೈಮೇಲೆ ಎಳೆದುಕೊಳ್ಳದೇ ಉತ್ಸಾಹದೊಂದಿಗೆ ಪ್ರದರ್ಶನ ನೀಡಿದ್ದರಿಂದಲೇ ಗೆಲುವನ್ನು ಸಾಧಿಸಿದೆ ಹಾಗೂ ಮತ್ತೊಂದೆಡೆ ಪಾಕಿಸ್ತಾನ ತಂಡ ಒತ್ತಡದೊಂದಿಗೆ ಮೈದಾನದಲ್ಲಿ ಆಟವನ್ನು ಆಡುವ ಕಾರಣದಿಂದಾಗಿ ಸೋಲನ್ನು ಅನುಭವಿಸಿದೆ ಎಂದು ಕಪಿಲ್ ದೇವ್ ವಿವರಿಸಿದ್ದಾರೆ.

ಭಾರತ vs ಪಾಕ್ ಪಂದ್ಯದಲ್ಲಿ ಉತ್ತಮ ಆಟವಾಡುವ ಯುವ ಕ್ರಿಕೆಟಿಗ ವಿಶ್ವಮಟ್ಟದ ಹೆಸರು ಮಾಡುತ್ತಾನೆ

ಭಾರತ vs ಪಾಕ್ ಪಂದ್ಯದಲ್ಲಿ ಉತ್ತಮ ಆಟವಾಡುವ ಯುವ ಕ್ರಿಕೆಟಿಗ ವಿಶ್ವಮಟ್ಟದ ಹೆಸರು ಮಾಡುತ್ತಾನೆ


"ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ವಿಶ್ವಕಪ್ ಪಂದ್ಯದಲ್ಲಿ ಯಾವುದೇ ಯುವ ಆಟಗಾರ ಉತ್ತಮ ಪ್ರದರ್ಶನ ನೀಡಿದರೆ ಸಾಕು ಆ ಒಂದು ಪಂದ್ಯದಿಂದ ಆತ ಕ್ರಿಕೆಟ್ ಜಗತ್ತಿನಾದ್ಯಂತ ಒಳ್ಳೆಯ ಹೆಸರು ಪಡೆದುಕೊಂಡು ಗುರುತಿಸಿಕೊಳ್ಳುತ್ತಾನೆ. ಅದೇ ಓರ್ವ ಹಿರಿಯ ಆಟಗಾರ ಈ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿ ಮಂಕಾದರೆ ಆತ ತನ್ನ ಖ್ಯಾತಿಗೆ ಧಕ್ಕೆ ತಂದುಕೊಳ್ಳುತ್ತಾನೆ" ಎಂದು ಕಪಿಲ್ ದೇವ್ ಹೇಳಿಕೆ ನೀಡಿದ್ದಾರೆ.

ರಿಷಬ್ ಪಂತ್ ಗೆ ಧೋನಿಯಿಂದ ಸಖತ್ ಕ್ಲಾಸ್:ವಿಡಿಯೋ ವೈರಲ್ | Oneindia Kannada
ಭಾರತ ಮತ್ತು ಪಾಕಿಸ್ತಾನ ವಿಶ್ವಕಪ್ ಮುಖಾಮುಖಿಯ ಫಲಿತಾಂಶ

ಭಾರತ ಮತ್ತು ಪಾಕಿಸ್ತಾನ ವಿಶ್ವಕಪ್ ಮುಖಾಮುಖಿಯ ಫಲಿತಾಂಶ

ಬದ್ಧ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಡೆದಿರುವ ಏಕದಿನ ಮತ್ತು ಟಿ ಟ್ವೆಂಟಿ ವಿಶ್ವಕಪ್ ಪಂದ್ಯಗಳ ಮುಖಾಮುಖಿಯ ಫಲಿತಾಂಶ ಈ ಕೆಳಕಂಡಂತಿದೆ.


ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಇದುವರೆಗೂ ಒಟ್ಟು 7 ಏಕದಿನ ವಿಶ್ವಕಪ್ ಪಂದ್ಯಗಳು ನಡೆದಿದ್ದು ಎಲ್ಲಾ ಪಂದ್ಯಗಳಲ್ಲಿಯೂ ಭಾರತ ತಂಡ ಜಯ ಸಾಧಿಸಿದೆ.


ಇನ್ನು ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಇದುವರೆಗೂ ಒಟ್ಟು 5 ಟಿ ಟ್ವೆಂಟಿ ವಿಶ್ವಕಪ್ ಪಂದ್ಯಗಳು ನಡೆದಿದ್ದು ಭಾರತ ತಂಡ 4 ಪಂದ್ಯಗಳಲ್ಲಿ ಜಯ ಗಳಿಸಿದೆ ಹಾಗೂ ಒಂದು ಪಂದ್ಯ ಟೈ ಆಗಿದೆ. ಆದರೆ ಪಾಕಿಸ್ತಾನ ಮಾತ್ರ ಯಾವುದೇ ಪಂದ್ಯದಲ್ಲಿಯೂ ಕೂಡ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿಲ್ಲ.

Story first published: Thursday, October 21, 2021, 9:44 [IST]
Other articles published on Oct 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X