ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಹಿಳಾ ಟಿ20 ವಿಶ್ವಕಪ್: ಭಾರತಕ್ಕೆ ಹೆಮ್ಮೆ ತಂದ ಬಾಲಿವುಡ್‌ ನಟಿ ಕರೀನಾ!

Kareena Kapoor unveils ICC Woments's T20 World cup trophy | FILMIBEAT KANNADA
Kareena Kapoor Khan unveils ICC Women’s T20 World Cup trophy

ಮೆಲ್ಬರ್ನ್, ನವೆಂಬರ್ 1: ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ ಶುಕ್ರವಾರ (ನವೆಂಬರ್ 1) ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್, ಐಸಿಸಿ ಮಹಿಳಾ ಟಿ20 ವಿಶ್ವಕಪ್‌ ಟ್ರೋಫಿಯನ್ನು ಅನಾವರಣಗೊಳಿಸಿದ್ದಾರೆ. ಮಹಿಳಾ ಟಿ20 ವಿಶ್ವಕಪ್ ಟೂರ್ನಿ 2020ರ ಫೆಬ್ರವರಿ 21ರಂದು ಆರಂಭಗೊಳ್ಳಲಿದೆ. ಮಾರ್ಚ್ 8ರಂದು ಫೈನಲ್ ನಡೆಯಲಿದೆ. ಅಂದ್ಹಾಗೆ ಇಂಥ ಗೌರವಾನ್ವಿತ ಕಾರ್ಯಕ್ರಮಕ್ಕೆ ಆಹ್ವಾನ ಪಡೆದುಕೊಂಡ ಭಾರತದ ಮೊದಲ ನಟಿ ಕರೀನಾ.

ಅನುಷ್ಕಾ ಶರ್ಮಾ ಕೆಂಗಣ್ಣಿಗೆ ಬೆದರಿ ಯೂ ಟರ್ನ್ ಹೊಡೆದ ಇಂಜಿನಿಯರ್!ಅನುಷ್ಕಾ ಶರ್ಮಾ ಕೆಂಗಣ್ಣಿಗೆ ಬೆದರಿ ಯೂ ಟರ್ನ್ ಹೊಡೆದ ಇಂಜಿನಿಯರ್!

'2020ರ ಫೆಬ್ರವರಿ 21ರಂದು ಪ್ರಾರಂಭಗೊಳ್ಳಲಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಗೆ ಬಾಲಿವುಡ್ ನಟಿ ಕರೀನಾ ಕಪೂರ್ ಕ್ಷಣಗಣನೆ ಶುರುವಿಟ್ಟಿದ್ದಾರೆ,' ಮೆಲ್ಬರ್ನ್ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಚರಣೆ (ಮಾರ್ಚ್ 8) ದಿನ ಕರೀನಾ ಜೊತೆ ಇನ್ಯಾರು ಸೇರಿಕೊಳ್ಳಲಿದ್ದಾರೆ?,' ಎಂದು 'ಟಿ20 ವಿಶ್ವಕಪ್' ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದೆ.

ಬಾಂಗ್ಲಾದೇಶ ಮಹಿಳಾ ತಂಡ ಸ್ಕಾಟ್ಲೆಂಡ್‌ ಸೋಲಿಸಿ ಟಿ20 ವಿಶ್ವಕಪ್‌ಗೆ ಈಗಾಲೇ ಅರ್ಹತೆ ಗಿಟ್ಟಿಸಿಕೊಂಡಿದೆ. ಫಲಿತಾಂಶವಾಗಿ ಬಾಂಗ್ಲಾ ತಂಡ ಹಾಲಿ ಚಾಂಪಿಯನ್ಸ್ ಆಸ್ಟ್ರೇಲಿಯಾ ಜೊತೆ ಗ್ರೂಪ್ 'ಎ'ಯಲ್ಲಿ ಸ್ಪರ್ಧೆಗಿಳಿಯಲಿದೆ. ಗ್ರೂಪ್‌ 'ಎ'ನಲ್ಲಿ ಭಾರತ, ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ತಂಡಗಳು ಇವೆ.

ಮಾಸ್ಕ್‌ ಧರಿಸಿಕೊಂಡೇ ಮೈದಾನಕ್ಕೆ ಇಳಿದ ಬಾಂಗ್ಲಾದೇಶ ಕ್ರಿಕೆಟಿಗರುಮಾಸ್ಕ್‌ ಧರಿಸಿಕೊಂಡೇ ಮೈದಾನಕ್ಕೆ ಇಳಿದ ಬಾಂಗ್ಲಾದೇಶ ಕ್ರಿಕೆಟಿಗರು

ಸುಮಾರು 12 ವರ್ಷಗಳಿಗೆ ಹಿಂದೆ ಮಹಿಳಾ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯ ಆಡಿದ್ದ ಥೈಲ್ಯಾಂಡ್‌ ಕೂಡ ಈ ಬಾರಿಯ ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳುವ ಮೂಲಕ ಇತಿಹಾಸ ನಿರ್ಮಿಸಿದೆ. ಥೈಲ್ಯಾಂಡ್‌ ತಂಡ ಗ್ರೂಪ್‌ 'ಬಿ'ಯಲ್ಲಿದೆ. ಈ ವಿಭಾಗದಲ್ಲಿ ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನ ತಂಡಗಳಿವೆ.

Story first published: Friday, November 1, 2019, 18:59 [IST]
Other articles published on Nov 1, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X