ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

1990ರಿಂದ ಯಾರೂ ಮುರಿಯಲಾಗದಿದ್ದ ವಿಶೇಷ ದಾಖಲೆಯನ್ನು ಮುರಿದ ಕೃನಾಲ್ ಪಾಂಡ್ಯ

Karnal Pandya broke the special record that no one has broken since 1990

ಕೃನಾಲ್ ಪಾಂಡ್ಯ ಮಂಗಳವಾರ ( ಮಾರ್ಚ್ 23 ) ಅಂತಾರಾಷ್ಟ್ರೀಯ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದಾರೆ. ಆಡಿದ ಮೊದಲನೇ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿಯೇ ಕೃನಾಲ್ ಪಾಂಡ್ಯ ದಾಖಲೆಯ ಅರ್ಧಶತಕ ಸಿಡಿಸಿ ಹೊಸ ಮೈಲಿಗಲ್ಲನ್ನು ನಿರ್ಮಿಸಿದ್ದಾರೆ. ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಕೃನಾಲ್ ಪಾಂಡ್ಯ 31 ಎಸೆತಗಳಲ್ಲಿ ಅಜೇಯ 58 ರನ್ ಸಿಡಿಸಿದರು.

ಪದಾರ್ಪಣೆ ಮಾಡಿದ ಮೊದಲನೇ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ವೇಗವಾಗಿ ಅರ್ಧಶತಕ ಸಿಡಿಸಿದ ಆಟಗಾರ ಎಂಬ ದಾಖಲೆ ಪಟ್ಟಿಯಲ್ಲಿ ಕೃನಾಲ್ ಪಾಂಡ್ಯ ಸೇರಿಕೊಂಡಿದ್ದಷ್ಟೆ ಅಲ್ಲದೆ ಇದರ ಜತೆಗೆ ಮತ್ತೊಂದು ವಿಶೇಷ ದಾಖಲೆಯನ್ನು ನಿರ್ಮಿಸಿದ್ದಾರೆ. ಹೌದು ಚೊಚ್ಚಲ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಅತಿ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿದ ಆಟಗಾರ ಎಂಬ ಖ್ಯಾತಿಗೆ ಕೃನಾಲ್ ಪಾಂಡ್ಯ ಪಾತ್ರರಾಗಿದ್ದಾರೆ.

ಈ ವಿಶೇಷವಾದ ದಾಖಲೆಯನ್ನು ನಿರ್ಮಿಸುವುದರ ಮೂಲಕ 31 ವರ್ಷಗಳ ಹಿಂದೆ ಇಂಗ್ಲೆಂಡ್‌ನ ಜಾನ್ ಮೊರಿಸ್ ನಿರ್ಮಿಸಿದ್ದ ದಾಖಲೆಯನ್ನು ಸರಿಗಟ್ಟಿದ್ದಾರೆ. 1990ರಲ್ಲಿ ನ್ಯೂಜಿಲೆಂಡ್ ವಿರುದ್ಧ ತನ್ನ ವೃತ್ತಿ ಜೀವನದ ಮೊದಲ ಅಂತಾರಾಷ್ಟ್ರೀಯ ಏಕದಿನ ಪಂದ್ಯವಾಡಿದ್ದ ಜಾನ್ ಮೊರಿಸ್ 140.00 ಸ್ಟ್ರೈಕ್ ರೇಟ್ ಗಳಿಸುವುದರ ಮೂಲಕ ಹೊಸ ದಾಖಲೆ ನಿರ್ಮಿಸಿದ್ದರು. ಮೊರಿಸ್ ಅವರ ಈ ದಾಖಲೆಯನ್ನು ಮಂಗಳವಾರದಂದು ( ಮಾರ್ಚ್ 23 ) ಕೃನಾಲ್ ಪಾಂಡ್ಯ ಬರೋಬ್ಬರಿ 187.10 ಸ್ಟ್ರೈಕ್ ರೇಟ್ ಗಳಿಸುವುದರ ಮೂಲಕ ಮುರಿದು ಹಾಕಿದ್ದಾರೆ.

ಚೊಚ್ಚಲ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಅತಿ ಹೆಚ್ಚು ಸ್ಟ್ರೈಕ್ ರೇಟ್ ಗಳಿಸಿದ ಆಟಗಾರರ ಪಟ್ಟಿ ಈ ಕೆಳಕಂಡಂತಿದೆ.
1. ಕೃನಾಲ್ ಪಾಂಡ್ಯ : 187.10 (2021)*
2. ಜಾನ್ ಮೊರಿಸ್ : 140.00 ( 1990 )
3. ರೋಲ್ಯಾಂಡ್ ಬುಚರ್ : 136.84 ( 1980 )
4. ಬೆನ್ ಹಾಲಿಯೋಕ್ : 131.25 (1997)
5. ಲ್ಯೂಕ್ ರೈಟ್ : 128.20 ( 2007 )

Story first published: Tuesday, March 23, 2021, 23:02 [IST]
Other articles published on Mar 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X