ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕರ್ನಾಟಕ vs ತಮಿಳುನಾಡು ರಣಜಿ: ಮೊದಲ ಇನ್ನಿಂಗ್ಸ್‌ನಲ್ಲಿ ಕರ್ನಾಟಕ ಆಲೌಟ್

 karnataka allout for 336 runs in 1st innings against tamilnadu

ರಣಜಿ ಮೊದಲ ಮೊದಲ ಸುತ್ತಿನ ಪಂದ್ಯಗಳು ನಿನ್ನೆಯಿಂದ ಆರಂಭವಾಗಿದೆ. ಮೊದಲ ಪಂದ್ಯದಲ್ಲಿ ಕರ್ನಾಟಕ ಮತ್ತು ತಮಿಳುನಾಡು ಮುಖಾಮುಖಿಯಾಗಿದ್ದು ಎರಡೂ ತಂಡಗಳು ಸಮಬಲದ ಹೋರಾಟ ಪ್ರದರ್ಶಿಸಿದೆ. ಮೊದಲ ದಿನದಂತ್ಯಕ್ಕೆ ಕರ್ನಾಟಕ 6 ವಿಕೆಟ್ ಕಳೆದುಕೊಂಡು 259 ರನ್ ಗಳಿಸಿತ್ತು. ಇವತ್ತು ಆಟ ಮುಂದುವರಿಸಿದ ಕರ್ನಾಟಕ ಮೊದಲ ಇನ್ನಿಂಗ್ಸ್‌ನಲ್ಲಿ 336 ರನ್‌ಗಳಿಗೆ ಆಲ್‌ಔಟ್‌ ಆಗಿದೆ.

ಕರ್ನಾಟಕ ತಂಡದ ಪರವಾಗಿ ದೇವ್‌ದತ್‌ ಪಡಿಕ್ಕಲ್ (78) ಪವನ್ ದೇಶ್‌ಪಾಂಡೆ(65), ಹಾಗೂ ಕೆ.ಗೌತಮ್(51) ಅರ್ಧ ಶತಕದ ಕೊಡುಗೆ ನೀಡಿದ್ದಾರೆ. ಈ ಮೂಲಕ ಕರ್ನಾಟಕ ಮುನ್ನೂರರ ಗಡಿದಾಟುವಲ್ಲಿ ಯಶಸ್ವಿಯಾಗಿದೆ.

ತಮಿಳುನಾಡು ಪರವಾಗಿ ರವಿಚಂದ್ರನ್ ಅಶ್ವಿನ್ ನಾಲ್ಕು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದಂತೆ ಕೃಷ್ಣಮೂರ್ತಿ ವಿಘ್ನೇಶ್ ಮತ್ತು ಮಣಿಮರನ್ ಸಿದ್ಧಾರ್ಥ್ ತಲಾ ಎರಡು ವಿಕೆಡ್ ಪಡೆಯುವಲ್ಲಿ ಯಶಸ್ವಿಯಾದರೆ ಬಾಬಾ ಅಪರಾಜಿತ್ ಒಂದು ವಿಕೆಟ್ ಪಡೆದಿದ್ದಾರೆ.

ತಮಿಳುನಾಡಿನ ದಿಂಡಿಗಲ್ ಎನ್‌ಆರ್‌ಪಿ ಕಾಲೇಜು ಮೈದಾನದಲ್ಲಿ ಪಂದ್ಯ ನಡೆಯುತ್ತಿದೆ. ಸೀಮಿತ ಓವರ್‌ಗಳಲ್ಲಿ ಚಾಂಪಿಯನ್ ಆಗಿರುವ ಕರ್ನಾಟಕ ಇದೀಗ ರಣಜಿ ಟ್ರೋಪಿಯನ್ನೂ ಮುಡಿಗೇರಿಸಿಕೊಳ್ಳುವ ತವಕದಲ್ಲಿದೆ. ಉತ್ತಮ ಫಾರ್ಮ್‌ನಲ್ಲಿರುವ ಕರ್ನಾಟಕದ ಆಟಗಾರರು ರಣಜಿಯಲ್ಲೂ ಅದೇ ಫಾರ್ಮ್‌ನ್ನು ಮುಂದುವರೆಸುವ ವಿಶ್ವಾಸ ಮೂಡಿಸಿದ್ದಾರೆ.

ಕರ್ನಾಟಕ (ಆಡುವ 11 ಬಳಗ); ಮಯಾಂಕ್ ಅಗರ್ವಾಲ್, ಕರುಣ್ ನಾಯರ್ (ನಾಯಕ), ದೇವದತ್ ಪಡಿಕ್ಕಲ್, ದೇಗಾ ನಿಸ್ಚಲ್, ಶರತ್ ಬಿ.ಆರ್ (ವಿಕೆಟ್ ಕೀಪರ್), ಕೃಷ್ಣಪ್ಪ ಗೌತಮ್, ರೋನಿಟ್ ಮೋರ್, ಡೇವಿಡ್ ಮಥಿಯಾಸ್, ಶ್ರೇಯಸ್ ಗೋಪಾಲ್, ವಿ ಕೌಶಿಕ್, ಪವನ್ ದೇಶಪಾಂಡೆ

ತಮಿಳುನಾಡು (ಆಡುವ 11 ಬಳಗ): ಮುರಳಿ ವಿಜಯ್, ಅಭಿನವ್ ಮುಕುಂದ್, ಬಾಬಾ ಅಪರಾಜಿತ್, ವಿಜಯ್ ಶಂಕರ್ (ನಾಯಕ), ದಿನೇಶ್ ಕಾರ್ತಿಕ್, ಎನ್ ಜಗದೀಸನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಮುರುಗನ್ ಅಶ್ವಿನ್, ಕೃಷ್ಣಮೂರ್ತಿ ವಿಘ್ನೇಶ್, ಮಣಿಮಾರನ್ ಸಿದ್ಧಾರ್ಥ್

Story first published: Tuesday, December 10, 2019, 12:49 [IST]
Other articles published on Dec 10, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X