ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೈಯದ್ ಮುಷ್ತಾಕ್ ಅಲಿ ಟ್ರೋಫಿಗೆ ಕರ್ನಾಟಕ ತಂಡ ಪ್ರಕಟ; ನಾಯಕ ಯಾರು, ಯಾರಿಗೆಲ್ಲಾ ಸ್ಥಾನ?

Karnatakas 20 mens squad announced for Syed Mushtaq Ali Trophy 2021-22

ನವೆಂಬರ್‌ 4ರಿಂದ ಆರಂಭವಾಗಲಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿಗೆ ಕರ್ನಾಟಕ ತಂಡ ಪ್ರಕಟವಾಗಿದ್ದು ಮನೀಷ್ ಪಾಂಡೆಗೆ ನಾಯಕ ಸ್ಥಾನ ಲಭಿಸಿದೆ.

ಟಿ20 ವಿಶ್ವಕಪ್: ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಕೊಹ್ಲಿ ಬೌಲಿಂಗ್; ಎಷ್ಟು ರನ್ ನೀಡಿದ್ರು ಗೊತ್ತಾ?ಟಿ20 ವಿಶ್ವಕಪ್: ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಕೊಹ್ಲಿ ಬೌಲಿಂಗ್; ಎಷ್ಟು ರನ್ ನೀಡಿದ್ರು ಗೊತ್ತಾ?

20 ಆಟಗಾರರ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದ್ದು, ಈ ತಂಡದಲ್ಲಿ ಆರಂಭಿಕ ಆಟಗಾರರಾದ ಮಯಾಂಕ್ ಅಗರ್ವಾಲ್ ಮತ್ತು ದೇವದತ್ ಪಡಿಕ್ಕಲ್ ಕೂಡ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಹಾಗೂ ಕೆಎಲ್ ರಾಹುಲ್ ಅಂತರರಾಷ್ಟ್ರೀಯ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ನಿರತರಾಗಿರುವ ಕಾರಣ ಈ ತಂಡದಿಂದ ಹೊರಗುಳಿಯಲಿದ್ದಾರೆ.

ಇನ್ನು ಕಳೆದ ಸಾಲಿನ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ವೇಳೆ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಮನೀಷ್ ಪಾಂಡೆ ಟೂರ್ನಿಯಿಂದ ಹೊರಬಿದ್ದಿದ್ದರು. ಹೀಗಾಗಿ ಕಳೆದ ಬಾರಿಯ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕರ್ನಾಟಕ ತಂಡವನ್ನು ಕರುಣ್ ನಾಯರ್ ನಾಯಕತ್ವವನ್ನು ವಹಿಸಿಕೊಂಡು ಮುನ್ನಡೆಸಿದ್ದರು. ಇನ್ನು 2020 - 21 ಆವೃತ್ತಿಯ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕರ್ನಾಟಕ ತಂಡದ ಉಪನಾಯಕ ಸ್ಥಾನವನ್ನು ಪಡೆದುಕೊಂಡಿದ್ದ ಪವನ್ ದೇಶಪಾಂಡೆ ಈ ಬಾರಿಯ ಸೈಯದ್ ಮುಷ್ತಾಕ್ ಅಲಿ ಟ್ರೋಫಿಗೆ ಪ್ರಕಟವಾಗಿರುವ ಕರ್ನಾಟಕ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಇನ್ನು ತಂಡದ ಪ್ರಮುಖ ಆಟಗಾರನಾಗಿದ್ದ ಅಭಿಮನ್ಯು ಮಿಥುನ್ ಇತ್ತೀಚೆಗಷ್ಟೆ ಎಲ್ಲಾ ಮಾದರಿಯ ಕ್ರಿಕೆಟ್‍ನಿಂದ ನಿವೃತ್ತಿ ಹೊಂದಿರುವ ಕಾರಣ ಈ ಬಾರಿಯ ಟ್ರೋಫಿಯಲ್ಲಿ ಅವರ ಅನುಪಸ್ಥಿತಿ ಇರಲಿದೆ.

ಟಿ20 ವಿಶ್ವಕಪ್: ಭಾರತದ ವಿರುದ್ಧ ಪಾಕಿಸ್ತಾನ ಗೆಲ್ಲುವ ಸಾಧ್ಯತೆ ಹೆಚ್ಚಿದೆ; ಕಾರಣ ಬಿಚ್ಚಿಟ್ಟ ಸೆಹ್ವಾಗ್!ಟಿ20 ವಿಶ್ವಕಪ್: ಭಾರತದ ವಿರುದ್ಧ ಪಾಕಿಸ್ತಾನ ಗೆಲ್ಲುವ ಸಾಧ್ಯತೆ ಹೆಚ್ಚಿದೆ; ಕಾರಣ ಬಿಚ್ಚಿಟ್ಟ ಸೆಹ್ವಾಗ್!

ಇನ್ನು ಈ ಬಾರಿಯ ಸೈಯದ್ ಮುಷ್ತಾಕ್ ಅಲಿ ಟ್ರೋಫಿಗೆ ಪ್ರಕಟವಾಗಿರುವ ಕರ್ನಾಟಕ ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ 20 ಆಟಗಾರರ ಪಟ್ಟಿ ಹಾಗೂ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕರ್ನಾಟಕ ತಂಡ ಪ್ರಶಸ್ತಿ ಗೆದ್ದಿರುವ ವರ್ಷಗಳ ಕುರಿತ ಮಾಹಿತಿ ಮುಂದೆ ಇದೆ ಓದಿ..

2021-22 ಸೈಯದ್ ಮುಷ್ತಾಕ್ ಅಲಿ ಟ್ರೋಫಿಗೆ ಪ್ರಕಟವಾಗಿರುವ ಕರ್ನಾಟಕ ತಂಡ

2021-22 ಸೈಯದ್ ಮುಷ್ತಾಕ್ ಅಲಿ ಟ್ರೋಫಿಗೆ ಪ್ರಕಟವಾಗಿರುವ ಕರ್ನಾಟಕ ತಂಡ

2021-22ನೇ ಸಾಲಿನ ಸೈಯದ್ ಮುಷ್ತಾಕ್ ಅಲಿ ಟ್ರೋಫಿಗೆ 20 ಆಟಗಾರರ ಕರ್ನಾಟಕ ತಂಡ ಪ್ರಕಟವಾಗಿದ್ದು, ಈ ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ ಆಟಗಾರರ ಪಟ್ಟಿ ಇಲ್ಲಿದೆ: ಮನೀಶ್ ಪಾಂಡೆ (ನಾಯಕ), ಮಯಾಂಕ್ ಅಗರ್ವಾಲ್, ದೇವದತ್ ಪಡಿಕ್ಕಲ್, ಸಿದ್ಧಾರ್ಥ್ ಕೆವಿ, ರೋಹನ್ ಕದಮ್, ಅನಿರುದ್, ಅಭಿನವ್ ಮನೋಹರ್, ಕರುಣ್ ನಾಯರ್, ಶರತ್, ನಿಹಾಲ್ ಉಳ್ಳಾಲ್, ಶ್ರೇಯಸ್, ಗೌತಮ್, ಸುಚಿತ್, ಪ್ರವಿನ್ ದುಬೆ, ಕರಿಯಪ್ಪ, ಪ್ರಸಿದ್, ಪ್ರತೀಕ್ ವೈಶಕ್, ದರ್ಶನ್ ಎಂಬಿ ಮತ್ತು ವಿದ್ಯಾಧರ್ ಪಾಟೀಲ್.

ಮೂರನೇ ಟ್ರೋಫಿಯತ್ತ ಕರ್ನಾಟಕದ ಚಿತ್ತ

ಮೂರನೇ ಟ್ರೋಫಿಯತ್ತ ಕರ್ನಾಟಕದ ಚಿತ್ತ

ಸೈಯದ್ ಮುಷ್ತಾಕ್ ಅಲಿ ಟೂರ್ನಿ ಆರಂಭವಾದ ಮೊದಲ 10 ಆವೃತ್ತಿಗಳಲ್ಲಿ ಫೈನಲ್ ಪ್ರವೇಶಿಸುವಲ್ಲಿ ಎಡವಿದ್ದ ಕರ್ನಾಟಕ ತಂಡ ನಂತರ ಸತತವಾಗಿ 2 ಆವೃತ್ತಿಗಳಲ್ಲಿ ಟ್ರೋಫಿಯನ್ನು ಎತ್ತಿ ಹಿಡಿಯುವುದರ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿತ್ತು. ಹೌದು, 2018-19 ಮತ್ತು 2019-20ನೇ ಸಾಲಿನ ಸೈಯದ್ ಮುಷ್ತಾಕ್ ಅಲಿ ಟ್ರೋಫಿಗಳನ್ನು ಕರ್ನಾಟಕ ತಂಡ ಗೆದ್ದು ಬೀಗಿತ್ತು. ಇನ್ನು 2020-21ನೇ ಸಾಲಿನ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮೊದಲನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಸೋಲನುಭವಿಸಿದ್ದ ಕರ್ನಾಟಕ ಟಾಪ್ 4 ಹಂತವನ್ನು ಪ್ರವೇಶಿಸುವಲ್ಲಿ ಎಡವಿ ಟೂರ್ನಿಯಿಂದ ಹೊರಬಿದ್ದಿತ್ತು.

Rohit Sharma ನಾಯಕನಾಗಿ Kohliಯನ್ನು ಬಳಸಿಕೊಂಡಿದ್ದು ಹೀಗೆ | Oneindia Kannada
ಕರ್ನಾಟಕ ತಂಡದ ಪಂದ್ಯಗಳ ಪಟ್ಟಿ

ಕರ್ನಾಟಕ ತಂಡದ ಪಂದ್ಯಗಳ ಪಟ್ಟಿ

2021-22ನೇ ಸಾಲಿನ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕರ್ನಾಟಕ ಸೆಣಸಾಡಲಿರುವ ಪಂದ್ಯಗಳ ಮಾಹಿತಿ ಈ ಕೆಳಕಂಡಂತಿದೆ.

ಪಂದ್ಯ 1: ಕರ್ನಾಟಕ vs ಮುಂಬೈ ( ನವೆಂಬರ್‌ 4 )

ಪಂದ್ಯ 2: ಕರ್ನಾಟಕ vs ಛತ್ತೀಸ್ ಗಢ ( ನವೆಂಬರ್‌ 5 )

ಪಂದ್ಯ 3: ಕರ್ನಾಟಕ vs ಸರ್ವಿಸಸ್ ( ನವೆಂಬರ್‌ 6 )

ಪಂದ್ಯ 4: ಕರ್ನಾಟಕ vs ಬರೋಡಾ ( ನವೆಂಬರ್‌ 8 )

ಪಂದ್ಯ 5: ಕರ್ನಾಟಕ vs ಪ. ಬಂಗಾಳ ( ನವೆಂಬರ್‌ 9 )

Story first published: Thursday, October 21, 2021, 9:44 [IST]
Other articles published on Oct 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X