ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಾಂಗ್ಲಾದೇಶ ವಿರುದ್ಧ 6 ವಿಕೆಟ್ ಉರುಳಿಸಿದ್ದರು ಕನ್ನಡಿಗ ಪ್ರಸಿದ್ಧ್ ಕೃಷ್ಣ!

Karnatakas Prasidh Krishna ready for the long international haul

ಬೆಂಗಳೂರು: ಸುಮಾರು 6 ವರ್ಷಗಳ ಹಿಂದಿನ ಕತೆಯಿದು. ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿರುವ ಕನ್ನಡಿಗ ಪ್ರಸಿದ್ಧ್ ಕೃಷ್ಣ ಹಿಂದೊಮ್ಮೆ ಬಾಂಗ್ಲಾದೇಶದ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ್ದರು ಅನ್ನೋದು ಗೊತ್ತೇ? 2015 ಸೆಪ್ಟೆಂಬರ್ ತಿಂಗಳ ತಣ್ಣಗಿನ ಮುಂಜಾವು ಅದು. ಪ್ರವಾಸ ಪಂದ್ಯಕ್ಕಾಗಿ ಬಂದಿದ್ದ ಬಾಂಗ್ಲಾದೇಶ 'ಎ' ವಿರುದ್ಧ ಮೈಸೂರಿನಲ್ಲಿ ಕರ್ನಾಟಕ ತಂಡ ಪಂದ್ಯವಾಡುತ್ತಿತ್ತು. ಆವತ್ತು ತಂಡದಲ್ಲಿ ವಿನಯ್ ಕುಮಾರ್, ಅಭಿಮನ್ಯು ಮಿಥುನ್ ಮತ್ತು ಶ್ರೀನಾಥ್ ಅರವಿಂದ್ ಅವರಂತ ಪ್ರಮುಖ ಆಟಗಾರರರಿರಲಿಲ್ಲ.

ವಿರಾಟ್ ಕೊಹ್ಲಿ ಹೇಳಿಕೆಗೆ ಇಂಗ್ಲೆಂಡ್ ಮಾಜಿ ಕ್ರಿಕೆಟರ್ ಡೇವಿಡ್ ಲಾಯ್ಡ್ ಕಿಡಿ!ವಿರಾಟ್ ಕೊಹ್ಲಿ ಹೇಳಿಕೆಗೆ ಇಂಗ್ಲೆಂಡ್ ಮಾಜಿ ಕ್ರಿಕೆಟರ್ ಡೇವಿಡ್ ಲಾಯ್ಡ್ ಕಿಡಿ!

ಅಂದು ಕರ್ನಾಟಕ ತಂಡದ ನಾಯಕರಾಗಿದ್ದ ಸಿಎಂ ಗೌತಮ್, 1 ಓವರ್‌ ಅಷ್ಟೇ ಎಸೆದಿದ್ದ ಚೆಂಡನ್ನು ಯುವ ಬೌಲರ್ ಪ್ರಸಿದ್ಧ್ ಕೃಷ್ಣ ಅವರತ್ತ ಎಸೆದರು. ಗೌತಮ್ ಅವರಿಂದ ಚೆಂಡು ಪಡೆದ ಕೃಷ್ಣ ಮೊದಲ ಎಸೆತದಲ್ಲೇ ಬಾಂಗ್ಲಾದೇಶದ ರೋನಿ ತಾಲುಕ್ದಾರ್ ಅವರ ವಿಕೆಟ್ ಉರುಳಿಸಿದ್ದರು!

ಕೃನಾಲ್-ಕರನ್ ಮಧ್ಯೆ ಮಾತಿನ ಚಕಮಕಿ, ಗಡ್ಡ ಎಳೆದ ಕೊಹ್ಲಿ: ವಿಡಿಯೋಕೃನಾಲ್-ಕರನ್ ಮಧ್ಯೆ ಮಾತಿನ ಚಕಮಕಿ, ಗಡ್ಡ ಎಳೆದ ಕೊಹ್ಲಿ: ವಿಡಿಯೋ

49 ರನ್‌ಗೆ 5 ವಿಕೆಟ್

49 ರನ್‌ಗೆ 5 ವಿಕೆಟ್

ಆವತ್ತು ಬಾಂಗ್ಲಾದೇಶ 'ಎ' ಮೊದಲ ಇನ್ನಿಂಗ್ಸ್‌ನಲ್ಲಿ 12 ಓವರ್‌ ಎಸೆದಿದ್ದ ಪ್ರಸಿದ್ಧ್ ಕೃಷ್ಣ 49 ರನ್‌ಗೆ 5 ವಿಕೆಟ್ ಮುರಿದಿದ್ದರು. ಬಾಂಗ್ಲಾದೇಶ ದ್ವಿತೀಯ ಇನ್ನಿಂಗ್ಸ್‌ನಲ್ಲಿ 15 ಓವರ್‌ ಎಸೆದು 1 ವಿಕೆಟ್ ಪಡೆದಿದ್ದರು. ಒಟ್ಟಿಗೆ ಆ ಪಂದ್ಯದಲ್ಲಿ 6 ವಿಕೆಟ್‌ಗಳು ಕೃಷ್ಣ ಪಾಲಾಗಿತ್ತು. ಪಂದ್ಯದಲ್ಲಿ ಕರ್ನಾಟಕ ತಂಡ 4 ವಿಕೆಟ್‌ಗಳ ಜಯ ಗಳಿಸಿತ್ತು.

ಸಂಕ್ಷಿಪ್ತ ಸ್ಕೋರ್‌ಕಾರ್ಡ್

ಸಂಕ್ಷಿಪ್ತ ಸ್ಕೋರ್‌ಕಾರ್ಡ್

* ಭಾರತಕ್ಕೆ ಪ್ರವಾಸ ಬಂದಿದ್ದ ಬಾಂಗ್ಲಾದೇಶ ಎ, ಮೈಸೂರಿನಲ್ಲಿ ಪಂದ್ಯ, 2015 ಸೆಪ್ಟೆಂಬರ್ 22-24.
* ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿದ್ದ ಬಾಂಗ್ಲಾ 'ಎ': 158/10 (38.4 Ov), 309/10 (76 Ov),
* ಕರ್ನಾಟಕ ತಂಡ: 287/10 (92.3 Ov), 185/6 (40.5 Ov, 40.5 ov target 181)

ಪಾದಾರ್ಪಣೆ ಪಂದ್ಯದಲ್ಲೇ ದಾಖಲೆ

ಪಾದಾರ್ಪಣೆ ಪಂದ್ಯದಲ್ಲೇ ದಾಖಲೆ

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಪಾದಾರ್ಪಣೆ ಮಾಡಿರುವ ಪ್ರಸಿದ್ಧ್ ಆರಂಭಿಕ ಪಂದ್ಯದಲ್ಲಿ 8.1 ಓವರ್‌ನಲ್ಲಿ 54 ರನ್ನಿಗೆ 4 ವಿಕೆಟ್ ಮುರಿದು ಗಮನ ಸೆಳೆದಿದ್ದರು. ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುವ ಕರ್ನಾಟಕದ ಪ್ರತಿಭೆಗೆ ಮುಂದೆ ಅತ್ಯುತ್ತಮ ಭವಿಷ್ಯವಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬಹುಕಾಲ ಮಿನುಗುವ ನಿರೀಕ್ಷೆ ಮೂಡಿಸಿದ್ದಾರೆ ಕೃಷ್ಣ.

Story first published: Thursday, March 25, 2021, 9:27 [IST]
Other articles published on Mar 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X