ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

SMAT ಸೂಪರ್ ಲೀಗ್, ನೆಚ್ಚಿನ ತಂಡವಾಗಿ ಕರ್ನಾಟಕ ಎಂಟ್ರಿ

Karnataka squad for Syed Mushtaq Ali Trophy super league

ಬೆಂಗಳೂರು, ನವೆಂಬರ್ 20: ಸೈಯದ್ ಮುಷ್ತಾಕ್ ಅಲಿ ಟ್ರೋಫಿ(SMAT) ಮ್ಯಾರಥಾನ್ ಲೀಗ್ ಹಂತ ಮುಗಿಸಿ ಸೂಪರ್ ಲೀಗ್ ಹಂತ ಮುಟ್ಟಿದೆ. ಸೂಪರ್ ಲೀಗ್ ಹಂತಕ್ಕಾಗಿ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದ್ದು, ಮನೀಶ್ ಪಾಂಡೆ ನಾಯಕರಾಗಿದ್ದಾರೆ.

ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಮುಂಬೈ, ಬರೋಡಾ, ರಾಜಸ್ಥಾನ, ಪಂಜಾಬ್, ಹರ್ಯಾಣ ಹಾಗೂ ಜಾರ್ಖಂಡ್ ತಂಡಗಳು ಸೂಪರ್ ಲೀಗ್ ಹಂತಕ್ಕೆ ಅರ್ಹತೆ ಪಡೆದುಕೊಂಡಿವೆ.

38 ತಂಡಗಳು 126 ಗ್ರೂಪ್ ಹಂತದ ಪಂದ್ಯಗಳ ನಂತರ 10 ತಂಡಗಳು ಸೂಪರ್ ಲೀಗ್ ಹಂತದಲ್ಲಿ ಸೆಣಸಲಿವೆ. ಹಾಲಿ ಚಾಂಪಿಯನ್ ಕರ್ನಾಟಕ ತಂಡ ಎ ಗುಂಪಿನಲ್ಲಿ ಅತಿ ಹೆಚ್ಚು ಅಂಕಗಳಿಸಿದರೂ ಬರೋಡಾ ವಿರುದ್ಧ ಸೋಲು ಕಂಡಿದ್ದರಿಂದ 2ನೇ ಸ್ಥಾನಿಯಾಗಿ ಮುಂದಿನ ಹಂತಕ್ಕೇರಿದೆ.

ಮಹಾರಾಷ್ಟ್ರ ಮಣಿಸಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಎತ್ತಿದ ಕರ್ನಾಟಕಮಹಾರಾಷ್ಟ್ರ ಮಣಿಸಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಎತ್ತಿದ ಕರ್ನಾಟಕ

ನವೆಂಬರ್ 21 ರಿಂದ 27ರ ತನಕ ಸೂರತ್ ನಲ್ಲಿ ಸೂಪರ್ ಲೀಗ್ ಹಂತದ ಪಂದ್ಯಗಳು ನಡೆಯಲಿದ್ದು, ಎರಡು ಗುಂಪಿನಲ್ಲಿ ತಲಾ 5 ತಂಡಗಳು ಪರಸ್ಪರ ಸೆಣೆಸಲಿದ್ದು, ಎರಡು ತಂಡದಿಂದ ಟಾಪ್ 4 ತಂಡಗಳು ಸೆಮಿಫೈನಲ್ ನಲ್ಲಿ ಎದುರಾಗಲಿವೆ.

ಸೂಪರ್ ಲೀಗ್ ಎ ಗುಂಪು
ಬರೋಡಾ (ಎ1)
ರಾಜಸ್ಥಾನ (ಬಿ2)
ಮಹಾರಾಷ್ಟ್ರ(ಸಿ1)
ಹರ್ಯಾಣ(ಡಿ2)
ದೆಹಲಿ(ಇ1)

ಸೂಪರ್ ಲೀಗ್ ಬಿ ಗುಂಪು
ಕರ್ನಾಟಕ (ಎ2)
ತಮಿಳುನಾಡು (ಬಿ1)
ಪಂಜಾಬ್ (ಸಿ2)
ಮುಂಬೈ(ಡಿ1)
ಜಾರ್ಖಂಡ್(ಇ2)

ಕರ್ನಾಟಕ ತಂಡ:
ಮನೀಶ್ ಪಾಂಡೆ(ನಾಯಕ), ಕರುಣ್ ನಾಯರ್(ಉಪ ನಾಯಕ), ದೇವದತ್ ಪಡಿಕ್ಕಲ್, ರೋಹನ್ ಕದಂ, ಪವನ್ ದೇಶಪಂಡೆ, ಲವನೀತ್ (ವಿಕೆಟ್ ಕೀಪರ್), ಶ್ರೇಯಸ್ ಗೋಪಾಲ್, ಜೆ ಸುಚೀತ್, ಪ್ರವೀಣ್ ದುಬೇ, ಅಭಿಮನ್ಯು ಮಿಥುನ್, ಕೌಶಿಕ್, ರೋನಿತ್ ಮೋರೆ, ಮನೋಜ್ ಭಾಂಡಗೆ, ಅನಿರುಧ್ ಜೋಶಿ. (ಕೆ ಗೌತಮ್ ಗಾಯಾಳುವಾಗಿದ್ದಾರೆ).

Story first published: Wednesday, November 20, 2019, 20:53 [IST]
Other articles published on Nov 20, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X