ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆಪಿಎಲ್ ಫಿಕ್ಸಿಂಗ್ ಹಗರಣ: ಕ್ರಿಕೆಟ್ ಮೈದಾನದಿಂದ ಸಿನಿಮಾ ರಂಗದವರೆಗೆ.!

Karnataka State cricket administrator arrested

ಕೆಪಿಎಲ್ ಸ್ಪಾಟ್‌ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಸಿಬಿ ಮತ್ತಷ್ಟು ಸ್ಪೋಟಕ ಮಾಹಿತಿಗಳನ್ನು ಬಹಿರಂಗ ಪಡಿಸಿದೆ. ಸೋಮವಾರ ಮಾಜಿ ರಣಜಿ ಆಟಗಾರ ಸುಧೀಂದ್ರ ಶಿಂದೆ ನಿವಾಸದ ಮೇಲೆ ಸಿಸಿಬಿ ದಾಳಿ ಮಾಡಿತ್ತು.ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆಲ ಮಹತ್ವದ ದಾಖಲೆಗಳನ್ನು ಸಿಸಿಬಿ ವಶಪಡಿಸಿಕೊಂಡಿತ್ತು.

ಪ್ರಕರಣದ ತನಿಖೆ ಬಗ್ಗೆ ಇವತ್ತು ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಮತ್ತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿಕೆಯನ್ನು ನೀಡಿದ್ದಾರೆ. ಶಿಂಧೆ ಪ್ರಕರಣದಲ್ಲಿ ಬಾಗಿಯಾಗಿದ್ದಾರೆ ಅನ್ನೋದಕ್ಕೆ ಸಾಕ್ಷಿ ಸಿಕ್ಕಿದೆ. ಈ ಸಾಕ್ಷಿಗಳ ಆಧಾರದಲ್ಲಿ ನಿನ್ನೆ ಶಿಂಧೆಯನ್ನು ಬಂಧಿಸಲಾಗಿದೆ ಎಂದು ಕಮಿಷನರ್ ಭಾಸ್ಕರ್ ರಾವ್ ಹೇಳಿದ್ದಾರೆ.

ಕೆಪಿಎಲ್ ಫಿಕ್ಸಿಂಗ್: ಬೆಳಗಾವಿ ಪ್ಯಾಂಥರ್ಸ್ ಕೋಚ್ ಸುಧೀಂದ್ರ ಶಿಂಧೆ ಬಂಧನಕೆಪಿಎಲ್ ಫಿಕ್ಸಿಂಗ್: ಬೆಳಗಾವಿ ಪ್ಯಾಂಥರ್ಸ್ ಕೋಚ್ ಸುಧೀಂದ್ರ ಶಿಂಧೆ ಬಂಧನ

ನಿನ್ನೆ ಸುಧೀಂದ್ರ ಶಿಂಧೆಯನ್ನು ಸಿಸಿಬಿ ವಶಕ್ಕೆ ಪಡೆದಿಕೊಂಡು ವಿಚಾರಣೆಗೆ ಒಳಪಡಿಸಿದೆ. ಈ ವಿಚಾರಣೆಯಲ್ಲಿ ಸಾಕಷ್ಟು ಸ್ಪೋಟಕ ವಿಚಾರಗಳು ಬೆಳಕಿಗೆ ಬಂದಿದೆ. ಕ್ರಿಕೆಟ್‌ ಲೋಕವನ್ನು ಬೆಚ್ಚಿ ಬೀಳಿಸಿದ್ದ ಈ ಪ್ರಕರಣ ಸಿನಿಮಾ ರಂಗವನ್ನೂ ಪ್ರವೇಶಿಸುವ ಸುಳಿವು ದೊರೆತಿದೆ. ಇದರ ಬೆನ್ನಿಗೆ ತನಿಖೆ ಅಂತ್ಯಗೊಳ್ಳುವವರೆಗೆ ಕೆಪಿಎಲ್ ಟೂರ್ನಿಯನ್ನು ರದ್ದುಗೊಳಿಸಲಾಗಿದೆ ಎಂದು ಕೆಎಸ್‌ಸಿಎ ಅಧಿಕೃತವಾಗಿ ಹೇಳಿದೆ.

ಕೆಪಿಎಲ್ ಆಟಗಾರರಿಗೆ ಕಮೀಷನರ್ ಆಫರ್

ಕೆಪಿಎಲ್ ಆಟಗಾರರಿಗೆ ಕಮೀಷನರ್ ಆಫರ್

ಪ್ರಕರಣದಲ್ಲಿ ಸಾಕಷ್ಟು ಆಟಗಾರರು ಭಾಗಿಯಾಗಿರುವ ಕುರಿತು ಮಾಹಿತಿಯಿದೆ. ಈಗಾಗಲೇ ಹಲವು ಆಟಗಾರರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ತನಿಖೆಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಆಟಗಾರರಿಗೆ ಅವಕಾಶವನ್ನು ಕಮೀಷನರ್ ನೀಡಿದ್ದಾರೆ. ಹಗರಣದಲ್ಲಿ ಯಾವುದೇ ರೀತಿಯಲ್ಲಾದರು ಸಂಪರ್ಕದಲ್ಲಿದ್ದರೆ ಅಂತಾ ಆಟಗಾರರು ಸಿಆರ್‌ಪಿಸಿ ಪ್ರಕಾರ ತಾವಾಗಿಯೇ ಮುಂದೆ ಬಂದು ತನಿಖೆಗೆ ಸಹಕಾರ ನೀಡುವಂತೆ ಹೇಳಿದ್ದಾರೆ. ಈ ಮೂಲಕ ಅರೆಸ್ಟ್‌ ಆಗುವುದರಿಂದ ಬಚಾವ್ ಆಗಬಹುದು ಎಂದು ತಿಳಿಸಿದ್ದಾರೆ.

ಕ್ಲಬ್ ಮೂಲಕ ಶಿಂಧೆ ಫಿಕ್ಸಿಂಗ್

ಕ್ಲಬ್ ಮೂಲಕ ಶಿಂಧೆ ಫಿಕ್ಸಿಂಗ್

ಸೋಷಿಯಕ್ ಕ್ಲಬ್ ಹೆಸರಿನಲ್ಲಿ ಬಂಧಿತ ಸುಧೀಂದ್ರ ಶಿಂಧೆ ಕ್ಲಬ್‌ ನಡೆಸುತ್ತಿದ್ದರು. ಈ ಕ್ಲಬ್‌ನ ಬಹುತೇಕ ಆಟಗಾರರು ಕೆಪಿಎಲ್‌ನಲ್ಲಿ ಭಾಗಿಯಾಗಿದ್ದಾರೆ. ಈ ಕ್ಲಬ್‌ಗೆ ಇದೇ ಪ್ರಕರಣದಲ್ಲಿ ಈ ಹಿಂದೆಯೇ ಬಂಧಿತನಾಗಿರುವ ಅಷ್ಪಾಕ್ ಅಲಿ ಸ್ಪಾನ್ಸರ್ ಮಾಡುತ್ತಿದ್ದ. ಇವರಿಬ್ರು ಆಟಗಾರರ ಜೊತೆ ಸೇರಿ ಪಂದ್ಯಗಳನ್ನು ಫಿಕ್ಸ್‌ ಮಾಡುತ್ತಿದ್ದ ವಿಚಾರ ತನಿಖೆಯಲ್ಲಿ ಬಹಿರಂಗವಾಗಿದೆ.

ಕೆಎಸ್‌ಸಿಎ ಸಂಸ್ಥೆಗೇ ಉರುಳಾಗುತ್ತಾ ಕೆಪಿಎಲ್ ಫಿಕ್ಸಿಂಗ್ ಹಗರಣ

ಹನಿ ಟ್ರ್ಯಾಪ್‌ನಲ್ಲಿ ಸ್ಯಾಂಡಲ್‌ವುಡ್ ನಟಿಯರು

ಹನಿ ಟ್ರ್ಯಾಪ್‌ನಲ್ಲಿ ಸ್ಯಾಂಡಲ್‌ವುಡ್ ನಟಿಯರು

ಇಡೀ ಸ್ಪಾಟ್‌ ಫಿಕ್ಸಿಂಗ್ ಪ್ರಕರಣವನ್ನು ಹನಿ ಟ್ರ್ಯಾಪ್ ಜಾಲದ ಮೂಲಕ ನಡೆಸಲಾಗಿತ್ತು ಅನ್ನೋದು ತನಿಖೆಯ ಆರಂಭದಲ್ಲೇ ಬೆಳಕಿಗೆ ಬಂದಿತ್ತು. ಇದಕ್ಕಾಗಿ ಸ್ಯಾಂಡಲ್‌ವುಡ್ ನಟಿಯರನ್ನು ಬಳಸಿಕೊಳ್ಳಲಾಗಿದೆ ಎನ್ನಲಾಗ್ತಿದೆ. ಹೀಗಾಗಿ ಕೋನದಲ್ಲೂ ಪ್ರಕರಣದ ತನಿಖೆ ನಡೆಯುತ್ತಿದೆ.

ಕ್ರಿಕೆಟ್ ಅಂಗಳದಿಂದ ಸಿನಿಮಾ ರಂಗದವರೆಗೆ ತನಿಖೆ!

ಕ್ರಿಕೆಟ್ ಅಂಗಳದಿಂದ ಸಿನಿಮಾ ರಂಗದವರೆಗೆ ತನಿಖೆ!

ಹನಿ ಟ್ರ್ಯಾಪ್ ಮಾತ್ರವಲ್ಲದೆ ಮ್ಯಾಚ್‌ ಬಳಿಕ ಆಫ್ಟರ್ ಮ್ಯಾಚ್ ಪಾರ್ಟಿಯಲ್ಲಿ ಸಿನಿಮಾ ನಟ ನಟಿಯರು ಭಾಗಿಯಾಗಿದ್ದಾರೆ. ಅಂತಹ ನಟ ನಟಿಯರಿಗೂ ಈ ಫಿಕ್ಸಿಂಗ್ ಪ್ರಕರಣದಲ್ಲಿ ನಂಟಿರುವ ಕುರಿತು ಅನುಮಾನಗಳಿವೆ. ಕೆಲವೇ ಕೆಲ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರೂ ಅವರ ಐಷಾರಾಮಿ ಜೀವನ ಪೊಲೀಸರಿಗೆ ಅನುಮಾನ ತರಿಸಿದ್ದು ಅವರನ್ನೂ ತನಿಖೆಗೊಳಪಡಿಸುವ ಸಿದ್ಧತೆಯಲ್ಲಿದ್ದಾರೆ ಪೊಲೀಸರು.

Story first published: Wednesday, December 4, 2019, 13:33 [IST]
Other articles published on Dec 4, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X