ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬರೋಡಾ ವಿರುದ್ಧ ಭರ್ಜರಿ ಜಯ ಗಳಿಸಿದ ಕರ್ನಾಟಕ ಕ್ವಾ.ಫೈನಲ್‌ಗೆ ಲಗ್ಗೆ

Karnataka vs Baroda, Round 9, Elite Group A and B - Match report

ಬೆಂಗಳೂರು, ಫೆಬ್ರವರಿ 14: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ರಣಜಿ ಟ್ರೋಫಿ, ಎಲೈಟ್ ಗ್ರೂಪ್ 'ಎ' ಮತ್ತು 'ಬಿ' 9ನೇ ಸುತ್ತಿನ ಪಂದ್ಯದಲ್ಲಿ ಕರ್ನಾಟಕ ತಂಡ, ಬರೋಡಾ ವಿರುದ್ಧ ಭರ್ಜರಿ 8 ವಿಕೆಟ್ ಜಯ ಗಳಿಸಿದೆ. ಇದರೊಂದಿಗೆ ರಾಜ್ಯ ತಂಡ ಕ್ವಾಟರ್ ಫೈನಲ್‌ಗೆ ಲಗ್ಗೆಯಿಟ್ಟಿದೆ.

ಭಾರತ vs ಕಿವೀಸ್, 0, 0, 1: ಟೆಸ್ಟ್‌ಗೂ ಮುನ್ನ ಸಮಸ್ಯೆಯ ಸುಳಿಯಲ್ಲಿ ಭಾರತ!ಭಾರತ vs ಕಿವೀಸ್, 0, 0, 1: ಟೆಸ್ಟ್‌ಗೂ ಮುನ್ನ ಸಮಸ್ಯೆಯ ಸುಳಿಯಲ್ಲಿ ಭಾರತ!

ನಾಯಕ ಕರುಣ್ ನಾಯರ್, ಅಭಿಮನ್ಯು ಮಿಥುನ್ ಬ್ಯಾಟಿಂಗ್ (ಬೌಲಿಂಗ್‌ ಕೂಡ) ಬೆಂಬಲ, ಪ್ರಸಿದ್ಧ್ ಕೃಷ್ಣ, ರೋನಿತ್ ಮೋರೆ, ಕೃಷ್ಣಪ್ಪ ಗೌತಮ್ ಬೌಲಿಂಗ್ ಸಹಾಯದಿಂದ ರಾಜ್ಯ ತಂಡ ಸುಲಭ ಗೆಲುವು ದಾಖಲಿಸಿತು. ಗ್ರೂಪ್‌ 'ಎ' ಮತ್ತು 'ಬಿ'ಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ಕರ್ನಾಟಕ, 31 ಅಂಕ ಕಲೆ ಹಾಕಿದೆ. ಮೊದಲ ಸ್ಥಾನದಲ್ಲಿ ಬೆಂಗಾಲ್ (32 ಅಂಕ) ಇದೆ.

ಕ್ರಿಕೆಟ್ ಇತಿಹಾಸದಲ್ಲಿ ಯಾರೂ ಮಾಡದ ಸಾಧನೆ ಮಾಡಲಿದ್ದಾರೆ ರಾಸ್ ಟೇಯ್ಲರ್ಕ್ರಿಕೆಟ್ ಇತಿಹಾಸದಲ್ಲಿ ಯಾರೂ ಮಾಡದ ಸಾಧನೆ ಮಾಡಲಿದ್ದಾರೆ ರಾಸ್ ಟೇಯ್ಲರ್

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಬರೋಡಾ, ಅಹ್ಮದ್‌ನೂರ್ ಪಠಾಣ್ 45, ದೀಪಕ್ ಹೂಡ 20 ರನ್‌ನೊಂದಿಗೆ 33.5ನೇ ಓವರ್‌ಗೆ 85 ರನ್‌ ಬಾರಿಸಿ ಇನ್ನಿಂಗ್ಸ್‌ ಮುಗಿಸಿತು. ಕರ್ನಾಟಕ ಮೊದಲ ಇನ್ನಿಂಗ್ಸ್‌ನಲ್ಲಿ ಕೃಷ್ಣಮೂರ್ತಿ ಸಿದ್ಧಾರ್ಥ್ 29, ಕರುಣ್ ನಾಯರ್ 47, ಶ್ರೀನಿವಾಸ್ ಶರತ್ 34, ಅಭಿಮನ್ಯು ಮಿಥುನ್ 40 ರನ್‌ನೊಂದಿಗೆ 233 ರನ್‌ ಕಲೆ ಹಾಕಿ ಮುನ್ನಡೆ ಸಾಧಿಸಿತು.

ದ್ವಿತೀಯ ಇನ್ನಿಂಗ್ಸ್‌ನಲ್ಲಿ ಬರೋಡಾ, ಅಹ್ಮದ್‌ನೂರ್ ಪಠಾಣ್ 90, ದೀಪಕ್ ಹೂಡಾ 50, ಅಭಿಮನ್ಯು ರಜಪೂತ್ 52, ಪಾರ್ಥ್ ಕೊಹ್ಲಿ 42 ರನ್‌ ಸೇರ್ಪಡೆಯೊಂದಿಗೆ 296 ರನ್ ಗಳಿಸಿದರೆ, ಕರ್ನಾಟಕ, ರವಿ ಕುಮಾರ್ ಸಮರ್ಥ್ 25, ಕರುಣ್ ನಾಯರ್ 71, ಕೃಷ್ಣಮೂರ್ತಿ ಸಿದ್ಧಾರ್ತ್ 29 ರನ್‌ನೊಂದಿಗೆ 150 ರನ್‌ ಪೇರಿಸಿ ಗೆಲುವನ್ನಾಚರಿಸಿತು.

ಐಪಿಎಲ್ 2020ಕ್ಕೆ ನೂತನ ಲೋಗೋ ಬಿಡುಗಡೆಗೊಳಿಸಿದ ಆರ್‌ಸಿಬಿಐಪಿಎಲ್ 2020ಕ್ಕೆ ನೂತನ ಲೋಗೋ ಬಿಡುಗಡೆಗೊಳಿಸಿದ ಆರ್‌ಸಿಬಿ

ಕರ್ನಾಟಕದಿಂದ ಅಭಿಮನ್ಯು ಮಿಥುನ್ 3+1, ಪ್ರಸಿದ್ಧ್ ಕೃಷ್ಣ 2+4, ರೋನಿತ್ ಮೋರೆ ೦+3, ಕೃಷ್ಣಪ್ಪ ಗೌತಮ್ 3+2 ವಿಕೆಟ್‌ನೊಂದಿಗೆ ಗಮನ ಸೆಳೆದರೆ, ಬರೋಡಾದಿಂದ ಸೋಯೆಬ್ ಸುಪಾರಿಯಾ 5, ಅಭಿಮನ್ಯು ರಜಪೂತ್ 2, ಭಾರ್ಗವ್ ಭಟ್‌ 2+2 ವಿಕೆಟ್ ಪಡೆದರು. ಕರುಣ್ ನಾಯರ್ ಪಂದ್ಯಶ್ರೇಷ್ಠರೆನಿಸಿದರು.

Story first published: Friday, February 14, 2020, 17:47 [IST]
Other articles published on Feb 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X