ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಜಮ್ಮು-ಕಾಶ್ಮೀರ ವಿರುದ್ಧ ಗೆದ್ದ ಕರ್ನಾಟಕ, ಸತತ 3ನೇ ಬಾರಿ ಸೆ.ಫೈನಲ್‌ಗೆ ಎಂಟ್ರಿ

Karnataka vs Jammu and Kashmir, Ranji, 3rd Quarter-Final, match report

ಜಮ್ಮು, ಫೆಬ್ರವರಿ 25: ರಣಜಿ ಟ್ರೋಫಿ 3ನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ, ಜಮ್ಮು ಮತ್ತು ಕಾಶ್ಮೀರ ವಿರುದ್ಧ 167 ರನ್ ಭರ್ಜರಿ ಜಯ ಗಳಿಸಿದೆ. ಕೃಷ್ಣಮೂರ್ತಿ ಸಿದ್ಧಾರ್ಥ್ ಬ್ಯಾಟಿಂಗ್, ಕೃಷ್ಣಪ್ಪ ಗೌತಮ್ ಬೌಲಿಂಗ್ ಬೆಂಬಲದಿಂದ ರಾಜ್ಯ ತಂಡ ಇದು ಸತತ ಮೂರನೇ ಬಾರಿಗೆ ಸೆಮಿಫೈನಲ್‌ಗೆ ಪ್ರವೇಶಿಸಿದೆ.

ನ್ಯೂಜಿಲ್ಯಾಂಡ್ ವಿರುದ್ದ ವಿರಾಟ್ ಕೊಹ್ಲಿ ಪಡೆ ಧೂಳೀಪಟ: ಸೋಲಿಗೆ ನಾಲ್ಕು ಕಾರಣಗಳುನ್ಯೂಜಿಲ್ಯಾಂಡ್ ವಿರುದ್ದ ವಿರಾಟ್ ಕೊಹ್ಲಿ ಪಡೆ ಧೂಳೀಪಟ: ಸೋಲಿಗೆ ನಾಲ್ಕು ಕಾರಣಗಳು

ಜಮ್ಮುವಿನ ಗಾಂಧಿ ಮೆಮೋರಿಯಲ್ ಸೈನ್ಸ್ ಕಾಲೇಜ್‌ ಗ್ರೌಂಡ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕರ್ನಾಟಕ, ಕ್ರಿಷ್ಣಮೂರ್ತಿ ಸಿದ್ಧಾರ್ಥ್ 76, ಮನೀಶ್ ಪಾಂಡೆ 37, ಶ್ರೀನಿವಾಸ್ ಶರತ್ 26 ರನ್‌ನೊಂದಿಗೆ ಮೊದಲ ಇನ್ನಿಂಗ್ಸ್‌ನಲ್ಲಿ 206 ರನ್ ಬಾರಿಸಿತು.

ಸಚಿನ್ ದಾಖಲೆ: ಏಕದಿನ ಕ್ರಿಕೆಟ್ ಇತಿಹಾಸದ ಮೊದಲ ದ್ವಿಶತಕಕ್ಕೆ ದಶಕದ ಸಂಭ್ರಮಸಚಿನ್ ದಾಖಲೆ: ಏಕದಿನ ಕ್ರಿಕೆಟ್ ಇತಿಹಾಸದ ಮೊದಲ ದ್ವಿಶತಕಕ್ಕೆ ದಶಕದ ಸಂಭ್ರಮ

ಮೊದಲ ಇನ್ನಿಂಗ್ಸ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡ, ಶುಭಂ ಖಜೂರಿಯಾ 62, ಅಬ್ದುಲ್ ಸಮಾದ್ 43, ಶುಭಂ ಪಂಡಿರ್ 25 ಗಮನಾರ್ಹ ರನ್ ಕೊಡುಗೆಯಿಂದ 192 ರನ್ ಕಲೆ ಹಾಕಿತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕರ್ನಾಟಕ, ರವಿ ಕುಮಾರ್ ಸಮರ್ಥ್ 74, ದೇವದತ್ ಪಡಿಕ್ಕಲ್ 34, ಕೃಷ್ಣಮೂರ್ತಿ ಸಿದ್ಧಾರ್ಥ್ 98, ಮನೀಶ್ ಪಾಂಡೆ 35, ಶ್ರೀನಿವಾಸ್ ಶರತ್ 34 ರನ್ ಸೇರ್ಪಡೆಯೊಂದಿಗೆ 316 ರನ್ ಗಳಿಸಿತು.

ಐಪಿಎಲ್‌ನಿಂದ ಭಾರತದಲ್ಲಿ ಕ್ರಿಕೆಟ್‌ ಬೆಳವಣಿಗೆ: ಶಾಹಿದ್ ಅಫ್ರಿದಿಐಪಿಎಲ್‌ನಿಂದ ಭಾರತದಲ್ಲಿ ಕ್ರಿಕೆಟ್‌ ಬೆಳವಣಿಗೆ: ಶಾಹಿದ್ ಅಫ್ರಿದಿ

ಅಂತಿಮ ಇನ್ನಿಂಗ್ಸ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದಿಂದ ಅಂಥ ಬ್ಯಾಟಿಂಗ್ ಕಾಣಲಿಲ್ಲ. ಶುಭಂ ಖಜೂರಿಯಾ 30, ಶುಭಂ ಪಂಡಿರಿ 31, ಅಕಿಬ್ ನಬಿ 26, ಉಮರ್ ನಝಿರ್ ಮಿರ್ 24 ರನ್‌ನಿಂದ 163 ರನ್ ಪೇರಿಸಿತು. ಜಮ್ಮು ಕಾಶ್ಮೀರ ಬೌಲರ್‌ ಅಕಿಬ್ ನಬಿ 3+0, ಮುಜ್ತಬ ಯೂಸುಫ್ 3+1, ನಾಯಕ ಪರ್ವೇಜ್ ರಸೂಲ್ 3+3, ಅಬಿದ್ ಮುಷ್ತಾಕ್ 6 ವಿಕೆಟ್‌ನಿಂದ ಗಮನ ಸೆಳೆದರು.

ಭಾರತ vs ಕೀವಿಸ್: ಮೊದಲ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾಗೆ 10 ವಿಕೆಟ್‌ಗಳ ಸೋಲುಭಾರತ vs ಕೀವಿಸ್: ಮೊದಲ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾಗೆ 10 ವಿಕೆಟ್‌ಗಳ ಸೋಲು

ಕರ್ನಾಟಕದಿಂದ ಪ್ರಸಿದ್ಧ್ ಕೃಷ್ಣ 4+1, ಕೃಷ್ಣಪ್ಪ ಗೌತಮ್ 1+7, ರೋನಿತ್ ಮೋರೆ 2+1, ಜಗದೀಶ್ ಸುಚಿತ್ 2+1 ವಿಕೆಟ್‌ನಿಂದ ಮಿಂಚಿದರು. ಕೃಷ್ಣಮೂರ್ತಿ ಸಿದ್ಧಾರ್ಥ್ ಪಂದ್ಯಶ್ರೇಷ್ಠರೆನಿಸಿದರು. ರಾಜ್ಯ ತಂಡ ಶನಿವಾರ (ಫೆಬ್ರವರಿ 29) ನಡೆಯುವ 2ನೇ ಸೆಮಿಫೈನಲ್‌ನಲ್ಲಿ ಬೆಂಗಾಲ್ ವಿರುದ್ಧ ಕಾದಾಡಲಿದೆ. ಮೊದಲ ಸೆಮಿಫೈನಲ್‌ನಲ್ಲಿ ಗುಜರಾತ್-ಸೌರಾಷ್ಟ್ರ ತಂಡಗಳು ಮೈದಾನಕ್ಕಿಳಿಯಲಿವೆ.

Story first published: Monday, February 24, 2020, 16:23 [IST]
Other articles published on Feb 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X