ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಯ್ಯದ್ ಮುಷ್ತಾಕ್ ಅಲಿ: ಪಂಜಾಬ್‌ ವಿರುದ್ಧ ಕರ್ನಾಟಕಕ್ಕೆ ಹೀನಾಯ ಸೋಲು

Karnataka vs Punjab, Quarter final 1: Punjab won by 9 wickets

ಅಹ್ಮದಾಬಾದ್: ಅಹ್ಮದಾಬಾದ್‌ನ ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ನಡೆದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯ ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಪಂಜಾಬ್‌ ವಿರುದ್ಧ 9 ವಿಕೆಟ್ ಹೀನಾಯ ಸೋಲು ಕಂಡಿದೆ. ಇದರೊಂದಿಗೆ ಟೂರ್ನಿಯಲ್ಲಿ ಕರ್ನಾಟಕದ ಸ್ಪರ್ಧೆ ಅಂತ್ಯಗೊಂಡಿದೆ.

'ಆಟಗಾರರು ಅವರಲ್ಲೇ ನಂಬಿಕೆಯಿಡುವಂತೆ ಮಾಡೋದಕ್ಕೆ ನನ್ನ ಆದ್ಯತೆ''ಆಟಗಾರರು ಅವರಲ್ಲೇ ನಂಬಿಕೆಯಿಡುವಂತೆ ಮಾಡೋದಕ್ಕೆ ನನ್ನ ಆದ್ಯತೆ'

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕರ್ನಾಟಕದಿಂದ ದೇವದತ್ ಪಡಿಕ್ಕಲ್ 11, ನಾಯಕ ಕರುಣ್ ನಾಯರ್ 12, ಅನಿರುದ್ಧ್ ಜೋಶಿ 27, ಶ್ರೇಯಸ್ ಗೋಪಾಲ್ 13, ಪ್ರವೀಣ್ ದೂಬೆ 9, ಅಭಿಮನ್ಯು ಮಿಥುನ್ 2 ರನ್‌ ಸೇರಿಸಿದರು. ಕರ್ನಾಟಕ 17.2 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 87 ರನ್ ಬಾರಿಸಿತ್ತು.

ಗುರಿ ಬೆನ್ನಟ್ಟಿದ ಪಂಜಾಬ್, ಅಭಿಷೇಕ್ ಶರ್ಮಾ 4, ಸಿಮ್ರನ್ ಸಿಂಗ್ ಅಜೇಯ 49, ನಾಯಕ ಮನ್‌ದೀಪ್‌ ಸಿಂಗ್ ಅಜೇಯ 35 ರನ್‌ನೊಂದಿಗೆ 12.4 ಓವರ್‌ಗೆ 1 ವಿಕೆಟ್ ಕಳೆದು 89 ರನ್ ಬಾರಿಸಿ ಗೆಲುವನ್ನಾಚರಿಸಿತು. ಈ ಜಯದೊಂದಿಗೆ ಪಂಜಾಬ್ ಸೆಮಿಫೈನಲ್‌ಗೆ ಪ್ರವೇಶಿಸಿದೆ.

ODI Super League: ಎರಡಕ್ಕೇರಿದ ಬಾಂಗ್ಲಾದೇಶ, ತಳ ಸೇರಿದ ಭಾರತODI Super League: ಎರಡಕ್ಕೇರಿದ ಬಾಂಗ್ಲಾದೇಶ, ತಳ ಸೇರಿದ ಭಾರತ

ಕರ್ನಾಟಕದ ಇನ್ನಿಂಗ್ಸ್‌ನಲ್ಲಿ ಪಂಜಾಬ್‌ನ ಸಂದೀಪ್ ಶರ್ಮಾ 2, ಅರ್ಷ್‌ದೀಪ್‌ ಸಿಂಗ್ 2, ಸಿದ್ಧಾರ್ಥ್ ಕೌಲ್ 3, ರಮಣ್‌ದೀಪ್‌ ಸಿಂಗ್ 2, ಮಯಾಂಕ್ ಮಾರ್ಕಂಡೆ 1 ವಿಕೆಟ್ ಪಡೆದರೆ, ಪಂಜಾಬ್ ಇನ್ನಿಂಗ್ಸ್‌ನಲ್ಲಿ ಕರ್ನಾಟಕದ ಅಭಿಮನ್ಯು ಮಿಥುನ್ 1 ವಿಕೆಟ್‌ನಿಂದ ಗಮನ ಸೆಳೆದರು.

Story first published: Tuesday, January 26, 2021, 15:48 [IST]
Other articles published on Jan 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X