ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕರ್ನಾಟಕ ತಂಡಕ್ಕೆ 69ರನ್‌ಗಳ ಭರ್ಜರಿ ಜಯ, ಫೈನಲ್ ಪ್ರವೇಶ

By Manjunatha
Karnataka won by 65 runs against India A

ಧರ್ಮಶಾಲಾ, ಮಾರ್ಚ್‌ 07: ಆಲ್‌ರೌಂಡರ್ ಪವನ್ ದೇಶಪಾಂಡೆ ಮತ್ತು ಆರ್.ಸಮರ್ಥ್ ಅವರ ಭರ್ಜರಿ ಬ್ಯಾಟಿಂಗ್‌ನಿಂದಾಗಿ ಭಾರತ ಎ ತಂಡದ ವಿರುದ್ಧ ಭಾರಿ ಮೊತ್ತ ಕಲೆ ಹಾಕಿದ ಭಾರತ ದೇವಧರ್‌ ಟ್ರೋಫಿಯ ಎರಡನೇ ಪಂದ್ಯವನ್ನು ಅನಾಯಾಸವಾಗಿ ಜಯಿಸಿದೆ. ಆಡಿದ ಎರಡೂ ಪಂದ್ಯ ಗೆಲ್ಲುವ ಮೂಲಕ ಫೈನಲ್ ಪ್ರವೇಶಿಸಿದೆ.

ಧರ್ಮಶಾಲಾ ನಲ್ಲಿ ನಡೆದ ದೇವಧರ್‌ ಟ್ರೋಫಿಯ ಎರಡನೇ ಪಂದ್ಯದಲ್ಲಿ ಕರ್ನಾಟಕ ತಂಡವು ಯುವಕರೇ ಹೆಚ್ಚಿಗಿರುವ ಭಾರತ ಎ ತಂಡದ ವಿರುದ್ಧ 65 ರನ್‌ಗಳ ಅಂತರದಿಂದ ಭರ್ಜರಿ ಜಯ ಗಳಿಸಿದೆ. ಮಾರ್ಚ್‌ 8 ರಂದು ಭಾರತ ಬಿ ತಂಡದ ವಿರುದ್ಧ ಫೈನಲ್ ಪಂದ್ಯ ನಡೆಯಲಿದೆ. ರನ್ ರೇಟ್ ಆಧಾರದಲ್ಲಿ ಭಾರತ ಬಿ ತಂಡವು ಫೈನಲ್ ಪ್ರವೇಶಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕರ್ನಾಟಕ 4 ವಿಕೆಟ್ ನಷ್ಟಕ್ಕೆ 339 ರನ್ ಗಳಿಸಿತು. ಅತ್ಯುತ್ತಮ ಆಟವಾಡಿದ ಪವನ್ ದೇಶಪಾಂಡೆ ಕೇವಲ 85 ಎಸೆತದಲ್ಲಿ 95 ರನ್ ಗಳಿಸಿದರು. ಆರ್.ಸಮರ್ಥ್‌ 85 ರನ್ ಗಳಿಸಿದರು. ಕೀಪರ್ ಗೌತಮ್ 49 ರನ್ ಗಳಿಸಿ ನಟೌಟ್ ಆಗಿ ಉಳಿದರು.

ಭಾರತ ಎ ತಂಡ ಉತ್ತಮ ಹೋರಾಟ ನಡೆಸಿತಾದರೂ ಕರ್ನಾಟಕದ ಅನುಭವಿ ಬೌಲರ್‌ಗಳ ಮುಂದೆ ಅವರ ಆಟ ಸಾಗಲಿಲ್ಲ. ಕಿರಿಯರ ವಿಶ್ವಕಪ್ ವಿಜೇತ ತಂಡದ ನಾಯಕ ಪೃಥ್ವಿ ಶಾ 40 ರನ್ ಗಳಿಸಿ ಭರವಸೆ ಮೂಡಿಸಿದರು. ಕಳೆದ ಬಾರಿಯ ವಿಶ್ವಕಪ್ ವಿಜೇತ ತಂಡದ ನಾಯಕ ಉನ್ಮುಕ್ತ್ ಚಾಂದ್ 80 ರನ್ ಗಳಿಸಿದರು.
'
ಮತ್ತೊಬ್ಬ ಕಿರಿಯರ ತಂಡದಿಂದ ಬಂದ ಪ್ರತಿಭೆ ಇಶಾನ್ ಕಿಶನ್ 73 ರನ್ ಗಳಿಸಿದರು. ಶುಬ್‌ಮನ್ ಗಿಲ್ ಅವರು 25 ರನ್ ಗಳಿಸಿದರು. ಇವರ ಹೊರತಾಗಿ ಇನ್ನಾವ ಆಟಗಾರರು ಹೆಚ್ಚು ಕಾಲ ಸ್ಕ್ರೀಸ್‌ನಲ್ಲಿ ನಿಲ್ಲಿಲ್ಲ.

ಕರ್ನಾಟಕ ತಂಡದ ಪರ ಕೆ.ಗೌಥಮ್ 4 ವಿಕೆಟ್ ಗಳಿಸಿ ಮಿಂಚಿದರು, ರೋನಿತ್ ಮೊರೆ 3 ವಿಕೆಟ್ ಗಳಿಸಿದರು, ಶ್ರೇಯಸ್ ಗೋಪಾಲ್ 2 ವಿಕೆಟ್ ಮತ್ತು ಪ್ರಸಿದ್ಧ ಕೃಷ್ಣ 1 ವಿಕೆಟ್ ಗಳಿಸಿದರು.

Story first published: Wednesday, March 7, 2018, 11:33 [IST]
Other articles published on Mar 7, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X