ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಹಿಳಾ ಟಿ20 ಚಾಲೆಂಜ್ ಆಡಲು ಹೊರಟ ಕನ್ನಡ ಕುವರಿ ಅನಘ

ಹರ್ಮನ್ ಪ್ರೀತ್ ಕೌರ್, ಸ್ಮೃತಿ ಮಂಧಾನ ಹಾಗೂ ಮಿಥಾಲಿ ರಾಜ್ ನೇತೃತ್ವದ ಮೂರು ತಂಡಗಳು ಮಹಿಳಾ ಟಿ20 ಚಾಲೆಂಜ್ ತಂಡಗಳು ಯುಎಇಗೆ ಬಂದಿಳಿದ್ದು, ಬಯೋ ಬಬ್ಬಲ್, ಕೊವಿಡ್ 19 ನಿಯಮಗಳನ್ನು ಪಾಲಿಸಲು ಮುಂದಾಗಿವೆ. ನವೆಂಬರ್ 4ರಿಂದ 9ರ ಮಧ್ಯೆ ಯುಎಇನಲ್ಲಿ ಟೂರ್ನಿ ನಡೆಯಲಿದ್ದು, ಐಪಿಎಲ್ 2020 ನಡುವೆ ಮಹಿಳಾ ಟಿ20 ಥ್ರಿಲ್ ನೀಡುವ ಸಾಧ್ಯತೆಯಿದೆ.

ಈ ನಡುವೆ ಕರ್ನಾಟಕದ ಯುವ ಪ್ರತಿಭೆ ಅನಘಾ ಮುರಳಿ ಪ್ರಸಾದ್ ದಿಗ್ಗಜರ ನಡುವೆ ಆಡುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಭಾರತ ಮಹಿಳಾ ತಂಡದ ಆಟಗಾರರ ಜೊತೆಗೆ ಈ ಟೂರ್ನಿಯಲ್ಲಿ ವಿದೇಶಿ ಕ್ರಿಕೆಟ್ ತಂಡದ ಪ್ರಮುಖ ಆಟಗಾರ್ತಿಯರು ಕೂಡ ಕಾಣಿಸಿಕೊಳ್ಳಲಿದ್ದಾರೆ. ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್ ಇಂಡೀಸ್, ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್ ತಂಡದ ಆಟಗಾರ್ತಿಯರು ನಾಲ್ಕು ಪಂದ್ಯಗಳ ಟೂರ್ನಿಯಲ್ಲಿ ಭಾಗಿಯಾಗಲಿದ್ದಾರೆ.

ಐಪಿಎಲ್ 2020: ವಿಮೆನ್ಸ್ ಟಿ20 ಚಾಲೆಂಜ್‌ಗೆ ಮೂರು ತಂಡಗಳನ್ನು ಪ್ರಕಟಿಸಿದ ಬಿಸಿಸಿಐಐಪಿಎಲ್ 2020: ವಿಮೆನ್ಸ್ ಟಿ20 ಚಾಲೆಂಜ್‌ಗೆ ಮೂರು ತಂಡಗಳನ್ನು ಪ್ರಕಟಿಸಿದ ಬಿಸಿಸಿಐ

ರವೀಂದ್ರ ಜಡೇಜ ಅವರನ್ನು ಮಾನಸಿಕ ಗುರುವಾಗಿ ಪರಿಗಣಿಸಿರುವ ಕನ್ನಡ ಕುವರಿ ಅನಘ ಅವರು ಸ್ಟಾರ್ ನಾಯಕಿ ಮಿಥಾಲಿ ರಾಜ್ ಅವರ ವೆಲೋಸಿಟಿ ತಂಡಲ್ಲಿದ್ದಾರೆ. ಮಿಥಾಲಿ ರಾಜ್, ಶೆಫಾಲಿ ವರ್ಮಾ, ವೇದಾ ಕೃಷ್ಣಮೂರ್ತಿ, ಇಂಗ್ಲೆಂಡಿನ ಡೆನಿಯಲ್ ವಾಟ್ ಜೊತೆ ಆಡಲು ಅನಘ ಸಿದ್ಧವಾಗುತ್ತಿದ್ದಾರೆ. ಅನಘ ಅವರ ಕ್ರಿಕೆಟ್ ಬಗ್ಗೆ ಇಲ್ಲಿದೆ ಮಾಹಿತಿ...

ನನ್ನ ಕ್ರಿಕೆಟ್ ಕಲಿಕೆಗೆ ಇದು ಸದವಾಕಾಶ

ನನ್ನ ಕ್ರಿಕೆಟ್ ಕಲಿಕೆಗೆ ಇದು ಸದವಾಕಾಶ

ಯುಎಇಗೆ ಬುಧವಾರದಂದು ವಿಮಾನ ಏರುವುದಕ್ಕೂ ಮುನ್ನ ಮುಂಬೈನ ಹೋಟೆಲ್ ನಲ್ಲಿ ಕ್ವಾರಂಟೈನಲ್ಲಿದ್ದಾಗ ಡೆಕ್ಕನ್ ಕ್ರಾನಿಕಲ್ ಜೊತೆ ಮಾತನಾಡಿ ತಮ್ಮ ಸಂತಸ ಹಂಚಿಕೊಂಡಿದ್ದಾರೆ. ಹಿರಿಯರು ಅನೇಕರು ಇರುವ ತಂಡಕ್ಕೆ ಆಯ್ಕೆಯಾಗಿರುವುದು ನನ್ನ ಪುಣ್ಯ. ನನ್ನ ಕ್ರಿಕೆಟ್ ಕಲಿಕೆಗೆ ಒಳ್ಳೆ ಅವಕಾಶ ಸಿಕ್ಕಿದೆ. ಈ ಬಾರಿ ಬೇರೆ ದೇಶದ ಆಟಗಾರರನ್ನು ನೋಡಿ ಕಲಿಯಬಹುದು. ಸಿಕ್ಕ ಅವಕಾಶದಲ್ಲಿ ಉತ್ತಮ ಸಾಧನೆ ಮಾಡುವ ಭರವಸೆ ಇದೆ ಎಂದಿದ್ದಾರೆ.

ಇತರೆ ಕ್ರೀಡೆಗಳಲ್ಲೂ ಪ್ರವೀಣೆ

ಇತರೆ ಕ್ರೀಡೆಗಳಲ್ಲೂ ಪ್ರವೀಣೆ

ಕ್ರಿಕೆಟ್ ಅಲ್ಲದೆ ಈಜು, ಲಾನ್ ಟೆನಿಸ್ ಆಟದಲ್ಲೂ ಅನಘ ಪರಿಣತಿ ಹೊಂದಿದ್ದಾರೆ. 5 ವರ್ಷ ವಯಸ್ಸಿನಲ್ಲಿದ್ದಾಗ ಟೆನಿಸ್ ಆಡಲು ಶುರು ಮಾಡಿದೆ ಜೊತೆಗೆ ಈಜು ಕಲಿಕೆ ಮುಂದುವರೆಯಿತು. ಗಲ್ಲಿಯಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದಾಗ, ನನ್ನ ತಂದೆಯ ಸ್ನೇಹಿತರೊಬ್ಬರು ನನ್ನ ಕ್ರಿಕೆಟ್ ಆಟದ ಶೈಲಿ ಕಂಡು ಸರಿಯಾದ ಕೋಚಿಂಗ್ ಕೊಡಿಸುವಂತೆ ಸಲಹೆ ನೀಡಿದರು. ನಂತರ ನನ್ನ ಕ್ರಿಕೆಟ್ ಆಟ ಶುರುವಾಯಿತು. ಟಾನ್ಸೆಂಡ್ ಪಿಯುಸಿ ಕಾಲೇಜಿಗೆ ಈಗಷ್ಟೇ ಎಂಟ್ರಿ ಕೊಟ್ಟಿರುವ ಅನಘ ಸದ್ಯ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಆಡುತ್ತಿದ್ದಾರೆ

ಐಪಿಎಲ್ 2020 ನೆಚ್ಚಿನ ತಂಡ, ಆಟಗಾರ ಆಯ್ಕೆ ಮಾಡಿದ ಮಿಥಾಲಿ ರಾಜ್

ಹೆರಾನ್ ಕ್ರಿಕೆಟ್ ಕ್ಲಬ್ ಕೋಚ್

ಹೆರಾನ್ ಕ್ರಿಕೆಟ್ ಕ್ಲಬ್ ಕೋಚ್

ಹೆರಾನ್ ಕ್ರಿಕೆಟ್ ಕ್ಲಬ್ ಕೋಚ್ ಕೆ ಮುರಳೀಧರ್ ಅವರು ಮೊದಲಿಗೆ ಅನಘ ಪ್ರತಿಭೆ ಗುರುತಿಸಿ ಕೋಚಿಂಗ್ ನೀಡಿದರು. 2 ವಾರದ ತರಬೇತಿ ನಂತರ ಕರ್ನಾಟಕ ಅಂಡರ್ 16 ತಂಡಕ್ಕೆ ಆಡಿದ ಅನಘ ಒಂದು ವರ್ಷದ ಬಳಿಕ ಅಂಡರ್ 19 ತಂಡಕ್ಕೆ ಸೇರಿದ ಸಾಧನೆ ಮಾಡಿದರು. ಅಂಡರ್ 23 ಮಟ್ಟದಲ್ಲೂ ಆಡಿ ಬೆಸ್ಟ್ ಎಡಗೈ ಸ್ಪಿನ್ನರ್ ಎನಿಸಿಕೊಂಡರು.

ನಂತರ ಲಾಕ್ಡೌನ್ ಅವಧಿಯಲ್ಲಿ ಸಿಕ್ಸ್ ಅಕಾಡೆಮಿಯಲ್ಲಿ ಜೆಸ್ವಂತ್ ಅವರ ಮಾರ್ಗದರ್ಶನದಲ್ಲಿ ಆಲ್ ರೌಂಡರ್ ಆಗಿ ರೂಪುಗೊಳ್ಳಲು ಬೇಕಾದ ಕೌಶಲ್ಯ ಪಡೆದುಕೊಂಡರು. ಬೌಲಿಂಗ್, ಬ್ಯಾಟಿಂಗ್ ಹಾಗೂ ಫೀಲ್ಡಿಂಗ್ ಬಗ್ಗೆ ಗಮನ ಹರಿಸಿ ನಡೆಸಿದ ಪರಿಶ್ರಮ ಈಗ ಫಲ ನೀಡಿದೆ.

ರವೀಂದ್ರ ಜಡೇಜ ಮಾನಸಿಕ ಗುರು

ರವೀಂದ್ರ ಜಡೇಜ ಮಾನಸಿಕ ಗುರು

ಟೀಂ ಇಂಡಿಯಾ ಆಲ್ ರೌಂಡರ್ ರವೀಂದ್ರ ಜಡೇಜ ಮಾನಸಿಕ ಗುರುವಾಗಿ ಅನಘ ಪರಿಗಣಿಸಿದ್ದಾಳೆ, ಜಡೇಜರಂತೆ ಅನಘ ಕೂಡಾ ಎಡಗೈ ಬ್ಯಾಟಿಂಗ್ ಮಾಡುತ್ತಾಳೆ. ಚಿಕ್ಕಂದಿನಿಂದ ಎಷ್ಟೋ ಪ್ರಶಸ್ತಿಗಳನ್ನು ಗೆದ್ದಿದ್ದಾಳೆ. ಟಿ20 ಚಾಲೆಂಜ್ ತಂಡಕ್ಕೆ ಆಯ್ಕೆಯಾಗಿರುವುದು ದೊಡ್ಡ ಬಹುಮಾನವಾಗಿದೆ ಎಂದು ಅನಘ ಅವರ ತಂದೆ ಮುರಳಿ ಪ್ರಸಾದ್ ಸಂತಸ ವ್ಯಕ್ತಪಡಿಸಿದ್ದಾರೆ.
ಅನಘಾಳ ಕ್ರಿಕೆಟ್ ಆಸೆಗೆ ನೆರವಾಗಲು ಎಂಎನ್ ಸಿ ಕಂಪನಿ ಕೆಲಸವನ್ನು ಪ್ರಸಾದ್ ತೊರೆದಿದ್ದಾರೆ. ಅನಘಾ ಅವರ ತಾಯಿ ಆಯುರ್ವೇದ ವೈದ್ಯೆಯಾಗಿದ್ದಾರೆ.

RCB ಪುಟಿದೇಳಲಿದೆ ಎಂದ ಕೊಹ್ಲಿ ಅಭಿಮಾನಿ ಮಹಿಳಾ ಕ್ರಿಕೆಟರ್

Story first published: Thursday, October 22, 2020, 17:56 [IST]
Other articles published on Oct 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X