ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುಂದೊಂದು ದಿನ ಈತ ಭಾರತಕ್ಕೆ ವಿಶ್ವಕಪ್ ಗೆದ್ದು ತರುತ್ತಾನೆ: ಎಸ್‌. ಶ್ರೀಶಾಂತ್

Kartik Tyagi Can Be A World Cup Winner With Team India: S Sreesanth

ಭಾರತದಲ್ಲಿ ನಡೆಯುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಿಂದ ಸಾಕಷ್ಟು ಪ್ರತಿಭೆಗಳು ಅನಾವರಣಗೊಂಡಿದ್ದಾರೆ ಹಾಗೂ ಈಗಲೂ ಆಗುತ್ತಿದ್ದಾರೆ. ಇತ್ತೀಚೆಗಷ್ಟೆ ಮುಂಬೈ ಇಂಡಿಯನ್ಸ್‌ ವಿರುದ್ಧ ರಾಜಸ್ಥಾನ್ ರಾಯಲ್ಸ್ ಪರ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದ ಯುವ ವೇಗಿ ಕಾರ್ತಿಕ್ ತ್ಯಾಗಿ ವಿಶ್ವ ಕ್ರಿಕೆಟ್‌ನಲ್ಲಿ ಮಿಂಚು ಹರಿಸಲಿದ್ದಾರೆ ಎಂದು ಭಾರತದ ವೇಗಿ ಕೇರಳ ಬೌಲರ್ ಎಸ್‌. ಶ್ರೀಶಾಂತ್ ಭವಿಷ್ಯ ನುಡಿದಿದ್ದಾರೆ.

ಆಡಿದ ಮೊದಲ ಪಂದ್ಯದ ಮೂಲಕವೇ ಎಲ್ಲರ ಗಮನ ಸೆಳೆದಿರುವ ಯುವ ವೇಗಿ ಹೆಸರು ಕಾರ್ತಿಕ್ ತ್ಯಾಗಿ, ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯದ ಮೂಲಕ ರಾಜಸ್ಥಾನ್‌ ರಾಯಲ್ಸ್ ಪರ ಪದಾರ್ಪಣೆ ಮಾಡಿ ಮಿಂಚಿದ್ದರು. ಕಾರ್ತಿಕ್‌ ರನ್ನಿಂಗ್ ಅನ್ನು ಇಂಗ್ಲೆಂಡ್ ಆಲ್​ರೌಂಡರ್ ಬೆನ್ ಸ್ಟೋಕ್ಸ್ ಬ್ರೇಟ್ ಲೀಗೆ ಹೋಲಿಸಿದ್ದರು.

 ಕೆಲ CSK ಬ್ಯಾಟ್ಸ್‌ಮನ್ಸ್ ತಮ್ಮ ಸ್ಥಾನವನ್ನ ಸರ್ಕಾರಿ ಕೆಲಸ ಅಂದುಕೊಂಡಿದ್ದಾರೆ: ವೀರೇಂದ್ರ ಸೆಹ್ವಾಗ್ ಕೆಲ CSK ಬ್ಯಾಟ್ಸ್‌ಮನ್ಸ್ ತಮ್ಮ ಸ್ಥಾನವನ್ನ ಸರ್ಕಾರಿ ಕೆಲಸ ಅಂದುಕೊಂಡಿದ್ದಾರೆ: ವೀರೇಂದ್ರ ಸೆಹ್ವಾಗ್

ಕಳೆದ ವರ್ಷದ ಆರಂಭದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ 19 ವಯೋಮಿತಿ ವಿಶ್ವಕಪ್‌ ಟೂರ್ನಿಯಲ್ಲಿ ಕಾರ್ತಿಕ್‌ ತ್ಯಾಗಿ ಭಾರತ ತಂಡದ ಆಧಾರ ಸ್ಥಂಭವಾಗಿದ್ದರು. ಕಳೆದ ಡಿಸೆಂಬರ್‌ನಲ್ಲಿ ನಡೆದಿದ್ದ ಐಪಿಎಲ್‌ ಹರಾಜಿನಲ್ಲಿ ಕಾರ್ತಿಕ್‌ ತ್ಯಾಗಿ ಅವರನ್ನು ರಾಜಸ್ಥಾನ್‌ ರಾಯಲ್ಸ್ ಖರೀದಿಸಿತ್ತು. ಮುಂಬೈ ಇಂಡಿಯನ್ಸ್ ವಿರುದ್ಧ ಮಾಡಿದ ಮೊದಲನೇ ಓವರ್‌ನಲ್ಲಿ ಕ್ವಿಂಟನ್‌ ಡಿ ಕಾಕ್‌ ಅವರ ವಿಕೆಟ್‌ ಅನ್ನು ತ್ಯಾಗಿ ಪಡೆದಿದ್ದರು.

ಕ್ರಿಕೆಟ್‌ಅಡಿಕ್ಟರ್‌.ಕಾಮ್‌ ಜತೆ ಮಾತನಾಡಿದ ಶ್ರೀಶಾಂತ್‌, "ಅಂತಹ ಪ್ರಯತ್ನವಿಲ್ಲದ ವೇಗದಲ್ಲಿ ಯಾರಾದರೂ ಬೌಲಿಂಗ್ ಮಾಡುವುದನ್ನು ನೋಡುವುದು ಅದ್ಭುತವಾಗಿದೆ. ನಾನು ವಾರ್ವಿಕ್‌ಶೈರ್‌ ಪರ ಆಡುವಾಗ ಅಲಾನ್‌ ಡೊನಾಲ್ಡ್‌ ಇದೇ ರೀತಿ ನನಗೆ ಹೇಳಿದ್ದರು. ಪ್ರಯತ್ನವಿಲ್ಲದ ವೇಗ ಬ್ಯಾಟ್ಸ್‌ಮನ್‌ಗೆ ಅಚ್ಚರಿ ಮೂಡಿಸುತ್ತದೆ. ಕಾರ್ತಿಕ್‌ ತ್ಯಾಗಿ ಕಠಿಣ ಪರಿಶ್ರಮ ಪಡುವ ಕ್ರಿಕೆಟಿಗ," ಎಂದು ಶ್ಲಾಘಿಸಿದರು.

ಇದೇ ವೇಳೆ ಕಾರ್ತಿಕ್ ತ್ಯಾಗಿಗೆ ಶ್ರೀಶಾಂತ್ ಸಲಹೆಯೊಂದನ್ನು ಸಹ ನೀಡಿದರು. ಬೌಲಿಂಗ್ ರನ್ನಿಂಗ್ ಬಳಿಕ ಸ್ಪಲ್ಪ ಜಂಪ್ ಪಡೆದು, ಕ್ರೀಸ್​ನ್ನು ಸರಿಯಾಗಿ ಬಳಸಿಕೊಳ್ಳಬೇಕು. ಇದನ್ನು ತಿದ್ದಿಕೊಂಡರೆ ಯುವ ವೇಗಿ ಇನ್ನಷ್ಟು ಅತ್ಯುತ್ತಮ ಬೌಲರ್ ಆಗಲಿದ್ದಾರೆ ಎಂದರು.

Story first published: Friday, October 9, 2020, 10:09 [IST]
Other articles published on Oct 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X