ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಒಂದೇ ಹೃದಯವನ್ನು ಮತ್ತೆ ಮತ್ತೆ ಕದಿಯುತ್ತಿದ್ದೀರಲ್ಲ ಕೌರ್?: ಅಭಿಮಾನಿ

Kaur Carries Unwell Mascot Off The Ground During ICC Womens World T20

ಗಯಾನಾ, ನವೆಂಬರ್ 13: ನವೆಂಬರ್ 9ರಂದು ಐಸಿಸಿ ಮಹಿಳಾ ವಿಶ್ವ ಟಿ20 ಪ್ರಾರಂಭವಾದಾಗಿನಿಂದಲೂ ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ ಕ್ರೀಡಾಭಿಮಾನಿಗಳ ಮೆಚ್ಚುಗೆ ಗಿಟ್ಟಿಸಿಕೊಳ್ಳುತ್ತಲೇ ಇದ್ದಾರೆ. ಪಂದ್ಯದ ಸಂದರ್ಭ ಅಸ್ವಸ್ಥ ಮಗುವನ್ನು ಮೈದಾನದಿಂದ ಹೊರಗೆ ಎತ್ತಿಕೊಂಡು ಹೋಗುವ ಮೂಲಕ ಮತ್ತೆ ಕೌರ್ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. (ಚಿತ್ರ ಕೃಪೆ: NaaginDance/Twitter)

ನಾಯಕ ವಿನಯ್ ಗೆ 100ನೇ ಪಂದ್ಯ, ಕರ್ನಾಟಕ ಉತ್ತಮ ಪ್ರದರ್ಶನನಾಯಕ ವಿನಯ್ ಗೆ 100ನೇ ಪಂದ್ಯ, ಕರ್ನಾಟಕ ಉತ್ತಮ ಪ್ರದರ್ಶನ

ಗಯಾನಾದ ಪ್ರಾವಿಡೆನ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯ ಇನ್ನೇನು ಆರಂಭವಾಗಲಿದೆ ಎನ್ನುವಾಗ ಮೈದಾನದಲ್ಲಿ ಅನಾರೋಗ್ಯಕ್ಕೀಡಾದ ಮಸ್ಕತ್ ನ ಪುಟಾಣಿಯೊಬ್ಬಳನ್ನು ಕೌರ್ ಎತ್ತಿಕೊಂಡು ಮೈದಾನದಿಂದ ಹೊರ ಸಾಗಿದ್ದಾರೆ. ಕೌರ್ ಈ ನಡೆಗೆ ಅಭಿಮಾನಿಗಳಿಂದ ಶ್ಲಾಘನೆ ವ್ಯಕ್ತವಾಗಿದೆ.

ಹೊಟ್ಟೆನೋವಿನ ಸಿಟ್ಟನ್ನು ಸಿಕ್ಸ್ ಚಚ್ಚಿ ತೀರಿಸಿಕೊಂಡ ಹರ್ಮನ್‌ಪ್ರೀತ್ ಕೌರ್ಹೊಟ್ಟೆನೋವಿನ ಸಿಟ್ಟನ್ನು ಸಿಕ್ಸ್ ಚಚ್ಚಿ ತೀರಿಸಿಕೊಂಡ ಹರ್ಮನ್‌ಪ್ರೀತ್ ಕೌರ್

ಬಿರುಸಿನ ಬ್ಯಾಟಿಂಗ್‌ಗಾಗಿ ಕ್ರಿಕೆಟ್ ಅಭಿಮಾನಿಗಳ ಹೃದಯ ಕದ್ದಿದ್ದ ಕೌರ್ ಪುಟಾಣಿಯೊಬ್ಬಳ ಅನಾರೋಗ್ಯಕ್ಕೆ ಸ್ಪಂದಿಸಿ ಸಹಾಯ ನೀಡುವ ಮೂಲಕ ಮತ್ತೆ ಅಭಿಮಾನಿಗಳ ಪ್ರೀತಿ ಗಿಟ್ಟಿಸಿಕೊಂಡರು. ಪುಟಾಣಿಗೆ ಕೌರ್ ಸಹಾಯ ಮಾಡುತ್ತಿರುವ ವಿಡಿಯೋ ಸಾಮಾಜಿಕ ತಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಭಾರತ-ಪಾಕ್ ಮುಖಾಮುಖಿ

ಇದಾಗಿದ್ದು ಭಾನುವಾರ (ನವೆಂಬರ್ 11) ಭಾರತ ಮತ್ತು ಪಾಕಿಸ್ತಾನ ತಂಡಗಳ ಪಂದ್ಯದ ವೇಳೆ. ಪಂದ್ಯ ಆರಂಭಕ್ಕೂ ಮುನ್ನ ಎರಡೂ ದೇಶಗಳ ರಾಷ್ಟ್ರಗೀತೆ ಹಾಡಲಾಗುತ್ತದೆ. ಈ ವೇಳೆ ಇತ್ತಂಡಗಳ ಆಟಗಾರರ ಜೊತೆ ಮೈದಾನದಲ್ಲಿದ್ದ ಮಸ್ಕತ್ ನ ಪುಟಾಣಿ ಅನಾರೋಗ್ಯದಿಂದ ಬಳಲಿದಳು.

ಕೈಯಾರೆ ಎತ್ತಿಕೊಂಡರು

ಮಗು ಅನಾರೋಗ್ಯ ಸಮಸ್ಯೆಗೀಡಾಗಿರುವುದನ್ನು ಅರಿತ ಹರ್ಮನ್‌ಪ್ರೀತ್ ಪುಟಾಣಿಯನ್ನು ಹಿಡಿದು ನಿಂತು ರಾಷ್ಟ್ರಗೀತೆ ಮುಗಿಯೋವರೆಗೂ ಕಾದರು. ಗೀತೆ ಮುಗಿಯುತ್ತಲೇ ಮಗುವನ್ನು ಕೈಯಾರೆ ಎತ್ತಿಕೊಂಡು ಬಂದವರೆ, ಚಿಕಿತ್ಸೆಗಾಗಿ ಇನ್ನೊಬ್ಬರ ಕೈಗೆ ಹಸ್ತಾಂತರಿಸಿದರು. ಕೌರ್ ಅವರ ಹಿಂದಿನ ಅದ್ಭುತ ಬ್ಯಾಟಿಂಗ್ ಕಂಡಿದ್ದ ಅಭಿಮಾನಿಗಳು ಕೌರ್‌ ಅವರ ಅನುಕಂಪದ ಹೃದಯಕ್ಕೂ ಮನ ಸೋತಿದ್ದಾರೆ.

ಟೂರ್ನಿಯಲ್ಲಿ ಎರಡನೇ ಜಯ

ಬಿ ಗ್ರೂಪ್‌ನಲ್ಲಿ ರುವ ಭಾರತ ಆರಂಭಿಕ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಜಯ ಸಾಧಿಸಿತ್ತು. ಈ ವೇಳೆ ಅಬ್ಬರದ ಬ್ಯಾಟಿಂಗ್ ನಡೆಸಿದ್ದ ಕೌರ್ ಟಿ20 ಕ್ರಿಕೆಟ್ ನಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯೆ ಕೀರ್ತಿಗೂ ಪಾತ್ರರಾಗಿದ್ದರು. ಪಾಕಿಸ್ತಾನ ವಿರುದ್ಧ ಪಂದ್ಯದಲ್ಲೂ ಭಾರತ 7 ವಿಕೆಟ್ ಗೆಲುವನ್ನಾಚರಿಸಿತ್ತು.

ಒಂದೇ ಹೃದಯವನ್ನು ಕದಿಯುತ್ತಿದ್ದೀರಿ

ನ್ಯೂಜಿಲ್ಯಾಂಡ್ ವಿರುದ್ಧ ಕೌರ್ ಹೊಟ್ಟೆನೋವಿನ ಸಮಸ್ಯೆಯ ನಡುವೆಯೂ ಅಬ್ಬರದ ಬ್ಯಾಟಿಂಗ್ ನಡೆಸಿ ಅಭಿಮಾನಿಗಳ ಮನ ಗೆದ್ದಿದ್ದರು. ಪುಟಾಣಿಗೆ ಕೌರ್ ನೆರವಾಗಿದ್ದನ್ನು ಕಂಡ ಅಭಿಮಾನಿಯೊಬ್ಬರು 'ನಮಗಿರೋದು ಒಂದೇ ಹೃದಯ. ಅದನ್ನೇ ಮತ್ತೆ ಮತ್ತೆ ಕದಿಯುತ್ತಿದ್ದೀರಲ್ಲ?' ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.

Story first published: Wednesday, November 14, 2018, 1:26 [IST]
Other articles published on Nov 14, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X