ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ 2019: ಭಾರತದ ಆಲ್ ರೌಂಡರ್ ಕೇದಾರ್ ಜಾಧವ್ ಫುಲ್ ಫಿಟ್!

Kedar Jadhav declared fit for World Cup 2019

ನವದೆಹಲಿ, ಮೇ 18: ಇಂಗ್ಲೆಂಡ್ ಮತ್ತು ವೇಲ್ಸ್ ನಲ್ಲಿ ನಡೆಯಲಿರುವ 2019ರ ವಿಶ್ವಕಪ್ ನಲ್ಲಿ ಪಾಲ್ಗೊಳ್ಳುತ್ತಾರೋ ಇಲ್ಲವೋ ಎಂಬ ಅನುಮಾನ ಮೂಡಿಸಿದ್ದ ಭಾರತದ ಆಲ್ ರೌಂಡರ್ ಕೇದಾರ್ ಜಾಧವ್ ಗಾಯದಿಂದ ಚೇತರಿಸಿಕೊಂಡಿದ್ದಾರೆ. ಅವರು ಫಿಟ್ ಆಗಿರುವುದಾಗಿ ಬಿಸಿಸಿಐ ಘೋಷಿಸಿದೆ.

ವಿಶ್ವಕಪ್‌ 2019: ಭಾರತ ತಂಡದ ಶಕ್ತಿಯ ಗುಟ್ಟು ಬಿಚ್ಚಿಟ್ಟ ರಾಹುಲ್ ದ್ರಾವಿಡ್ವಿಶ್ವಕಪ್‌ 2019: ಭಾರತ ತಂಡದ ಶಕ್ತಿಯ ಗುಟ್ಟು ಬಿಚ್ಚಿಟ್ಟ ರಾಹುಲ್ ದ್ರಾವಿಡ್

34ರ ಹರೆಯದ ಜಾಧವ್, ಇತ್ತೀಚೆಗಷ್ಟೇ ಮುಕ್ತಾಯಗೊಂಡ ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ಪರ ಆಡುವಾಗ ಭುಜದ ಗಾಯಕ್ಕೀಡಾಗಿದ್ದರು. ಈಗವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಮೇ 22ರಂದು ಇಂಗ್ಲೆಂಡ್‌ಗೆ ತೆರಳುವ ಭಾರತ ತಂಡದೊಂದಿಗೆ ವಿಮಾನ ಹತ್ತಲಿದ್ದಾರೆ ಎಂದು ಬಿಸಿಸಿಐ ಮಾಹಿತಿ ನೀಡಿದೆ.

ಕಳೆದ ವಾರ ಜಾಧವ್ ದೈಹಿಕ ಪರೀಕ್ಷೆಗೆ ಒಳಗಾಗಿದ್ದರು. ಅದಾಗಿ ಇನ್ನೊಂದಿಷ್ಟು ಅಭ್ಯಾಸದಲ್ಲಿ ಪಾಲ್ಗೊಂಡ ಬಳಿಕ ಮುಂಬೈ ಕ್ರಿಕೆಟ್ ಅಸೋಸಿಯೇಶನ್ (ಎಂಸಿಎ) ನಲ್ಲಿ ಪ್ಯಾಟ್ರಿಕ್ ಫರ್ಹರ್ತ್ ಅವರಿಂದ ಗುರುವಾರ (ಮೇ 16) ಮತ್ತೆ ಫಿಟ್‌ನೆಸ್ ಪರೀಕ್ಷೆಗೆ ಒಳಗಾದರು. ಫಿಟ್‌ನೆಸ್‌ ಪರೀಕ್ಷೆಯಲ್ಲಿ ಜಾಧವ್ ಪಾಸಾಗಿದ್ದರಿಂದ ಬಿಸಿಸಿಐ ಆಯ್ಕೆ ಸಮಿತಿ ಮೇಲಿನ ಹೊರೆ ಕಡಿಮೆಯಾದಂತಾಗಿದೆ.

ವಿಶ್ವಕಪ್ ಬ್ಯಾಟಿಂಗ್ ಕ್ರಮಾಂಕದ ಚರ್ಚೆ: ಬಾಯ್ಬಿಚ್ಚಿದ ಕೆಎಲ್ ರಾಹುಲ್ವಿಶ್ವಕಪ್ ಬ್ಯಾಟಿಂಗ್ ಕ್ರಮಾಂಕದ ಚರ್ಚೆ: ಬಾಯ್ಬಿಚ್ಚಿದ ಕೆಎಲ್ ರಾಹುಲ್

40 ಏಕದಿನ ಇನ್ನಿಂಗ್ಸ್‌ಗಳಲ್ಲಿ ಕೇದಾರ್ ಜಾಧವ್ 43.48ರ ಸರಾಸರಿಯಂತೆ 1174 ರನ್ ಗಳಿಸಿದ್ದಾರೆ. ಇದರಲ್ಲಿ 2 ಶತಕ ಮತ್ತು 5 ಅರ್ಧ ಶತಕಗಳು ಸೇರಿವೆ. 102.53 ಸ್ಟೈಕ್ ರೇಟ್‌ ಹೊಂದಿರುವ ಜಾಧವ್ 36 ಇನ್ನಿಂಗ್ಸ್‌ಗಳಲ್ಲಿ 27 ವಿಕೆಟ್‌ಗಳನ್ನೂ ಪಡೆದುಕೊಂಡಿದ್ದಾರೆ.

Story first published: Saturday, May 18, 2019, 13:03 [IST]
Other articles published on May 18, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X