ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಐದೇ ನಿಮಿಷ ಟೈಮು ಕೊಡು', ಮದುಮಗಳಲ್ಲಿ ಫುಟ್ಬಾಲಿಗ ವಿನಂತಿ!

Kerala Groom Asks ‘Five Minutes’ From Bride, Leaves Marriage To Play 7s Football!

ತಿರುವನಂತಪುರಂ, ಜನವರಿ 29: ನಮ್ಮ ನಮ್ಮ ಮದುವೆಯ ದಿನವಿದು ಅಂತಿಟ್ಟುಕೊಳ್ಳೋಣ. ಆಫೀಸು, ಪ್ರಮುಖ ಮೀಟಿಂಗ್, (ಕೆಲವೊಮ್ಮೆ) ಎಕ್ಸಾಮ್ ಏನೇ ಇದ್ದರೂ ಅದರ ಗೊಡವೆಯೇ ಇಲ್ಲದೆ ಮದುವೆ ಮಂಟಪದಲ್ಲಿ ಮದುಮಗಳಿಗೆ ಅಂಟಿ ಕೂತುಬಿಡೋ ಜೋಶಿನೋರು ನಾವು. ಆದರೆ ಇಲ್ಲೊಂದು ಅಪರೂಪದ ಘಟನೆಯಿದೆ.

ಟಿ20 ವಿಶ್ವಕಪ್ 2020ರ ವೇಳಾಪಟ್ಟಿ ಪ್ರಕಟ: ಕಠಿಣ ಗ್ರೂಪ್‌ನಲ್ಲಿ ಕೊಹ್ಲಿ ಬಳಗ!ಟಿ20 ವಿಶ್ವಕಪ್ 2020ರ ವೇಳಾಪಟ್ಟಿ ಪ್ರಕಟ: ಕಠಿಣ ಗ್ರೂಪ್‌ನಲ್ಲಿ ಕೊಹ್ಲಿ ಬಳಗ!

ಇದಾಗಿದ್ದು ದೇವರನಾಡು ಎಂದು ಕರೆಯಲ್ಪಡುವ ಕೇರಳದಲ್ಲಿ. ಮಳಪ್ಪುರಂ ಸೆವೆನ್ಸ್ ಲೀಗ್ ಟೂರ್ನಿಯಲ್ಲಿನ ಫೀಫಾ ಮಂಜೆರಿ ತಂಡದ ಆಟಗಾರ ರಿದ್ವಾನ್, ಮದುವೆಯ ದಿನವೂ ತಂಡದ ನೆರವಿಗೆ ಧಾವಿಸುವ ಮೂಲಕ ಸುದ್ದಿಯಾಗಿದ್ದಾರೆ. ಇದೇ ಕಾರಣಕ್ಕೆ ರಿದ್ವಾನ್ ಭಾರತದ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಮೆಚ್ಚುಗೆಗೆ ಪಾತ್ರವಾಗಿದೆ.

ಫೀಫಾ ಮಂಜೆರಿ ತಂಡದ ಡಿಫೆಂಡರ್ ರಿದ್ವಾನ್ ಅವರ ಮದುವೆಯ ದಿನ ರಾತ್ರಿ ಮಳಪ್ಪುರಂ 7s ಲೀಗ್ ಕೂಡ ನಡೆಯುತ್ತಿತ್ತು. ಫೀಫಾ ಮಂಜೆರಿ ತಂಡ ಮೈದಾನಕ್ಕಿಳಿದಿತ್ತು. ಆಟದ ವೇಳೆ ತಂಡಕ್ಕೆ ಡಿಫೆಂಡರ್‌ನ ಅಗತ್ಯ ಬಿತ್ತು, ಅದು ರಿದ್ವಾನ್ ಗಮನಕ್ಕೂ ಬಂತು.

Kerala Groom Asks ‘Five Minutes’ From Bride, Leaves Marriage To Play 7s Football!

ನಾವಾಗಿದ್ದರೂ ಈ ಅಮೂಲ್ಯ ಒಂದು ದಿನ ಮದುವೆಯೇ ಮುಖ್ಯ. ಇವತ್ತು ಆಟದ ಗುಂಗೇ ಬೇಡ ಅಂದುಕೊಳ್ಳುತ್ತಿದ್ದೆವೋ ಏನೋ. ಆದರೆ ರಿದ್ವಾನ್ ಮದುವೆಯ ಸಂದರ್ಭದ ಮಧ್ಯೆಯೂ ತಂಡದ ಬೆಂಬಲಕ್ಕೆ ನಿಂತರು. ಮದುಮಗಳಲ್ಲಿ 'ಕ್ಷಮಿಸು, ನಂಗೆ ಐದೇ ನಿಮಿಷ ಸಮಯ ಕೊಡು' ಎಂದು ವಿನಂತಿಸಿದ ರಿದ್ವಾನ್ ಸೀದಾ ಮೈದಾನಕ್ಕೆ ಓಡಿದರು! (ಮೇಲಿನ ಚಿತ್ರದಲ್ಲಿ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಮಾಡಿರುವ ಟ್ವೀಟ್ ಗಮನಿಸಬಹುದು)

ಮಹಿಳಾ ಏಕದಿನ 2ನೇ ಪಂದ್ಯ: ಕಿವೀಸ್ ವಿರುದ್ಧ ಭಾರತ 8 ವಿಕೆಟ್ ಜಯಭೇರಿಮಹಿಳಾ ಏಕದಿನ 2ನೇ ಪಂದ್ಯ: ಕಿವೀಸ್ ವಿರುದ್ಧ ಭಾರತ 8 ವಿಕೆಟ್ ಜಯಭೇರಿ

ಖುಷಿಯ ಸಂಗತಿಯೆಂದರೆ ರಿದ್ವಾನ್ ನೆರವಿನೊಂದಿಗೆ ಫೀಫಾ ಮಂಜೆರಿ ಆ ಪಂದ್ಯದಲ್ಲಿ ಜಯ ಸಾಧಿಸಿತು. ಆದರೆ ರಿದ್ವಾನ್ ಮನೆಗೆ ಬಂದಾಗ ಅಲ್ಲಿನ ಪರಿಸ್ಥಿತಿ ಸುಲಭವಾಗಿ ನಿಭಾಯಿಸುವಂತಿರಲಿಲ್ಲ. ರಿದ್ವಾನ್ ನಡೆ ಮದುಮಗಳು ಮತ್ತು ಅವಳ ಕುಟುಂಬಸ್ಥರ ಕಣ್ಣು ಕೆಂಪಗಾಗಿಸಿತ್ತು.

Story first published: Tuesday, January 29, 2019, 17:53 [IST]
Other articles published on Jan 29, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X