ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಿಕ್ಸ್ ಚಚ್ಚಿ ತನ್ನ ಕಾರಿನ ಗಾಜನ್ನೇ ಪುಡಿ ಪುಡಿ ಮಾಡಿದ ಕೆವಿನ್ ಓಬ್ರಿಯನ್!

Kevin OBrien Smashes His Own Car Window With Massive Six

ಡಬ್ಲಿನ್: ಐರ್ಲೆಂಡ್ ಬ್ಯಾಟ್ಸ್‌ಮನ್ ಕೆವಿನ್ ಓಬ್ರಿಯನ್ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರಾದವರು. ಬಿರುಸಿನ ಬ್ಯಾಟಿಂಗ್‌ ಮೂಲಕ ಓಬ್ರಿಯನ್ ತನ್ನ ದೇಶಕ್ಕಾಗಿ ಅನೇಕ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಇದೇ ಓಬ್ರಿಯನ್ ಅಬ್ಬರದ ಬ್ಯಾಟಿಂಗ್‌ಗಾಗಿ ಮತ್ತೆ ಗಮನ ಸೆಳೆದಿದ್ದಾರೆ. ಡಬ್ಲಿನ್‌ನಲ್ಲಿ ನಡೆಯುತ್ತಿರುವ ದೇಸಿ ಟ್ವೆಂಟಿ ಟ್ವೆಂಟಿ ಟೂರ್ನಿಯೊಂದರಲ್ಲಿ ಕೆವಿನ್ ಭರ್ಜರಿ ಬ್ಯಾಟಿಂಗ್ ಮೂಲಕ ಎದುರಾಳಿ ತಂಡದ ಬೌಲರ್‌ಗಳ ಬೆವರಿಳಿಸಿದ್ದಾರೆ.

ಬಾಬರ್ ಅಝಾಮ್ ವಿರಾಟ್ ಕೊಹ್ಲಿನ ನೋಡಿ ಕಲೀಬೇಕು: ರಮೀಝ್ ರಾಜಾಬಾಬರ್ ಅಝಾಮ್ ವಿರಾಟ್ ಕೊಹ್ಲಿನ ನೋಡಿ ಕಲೀಬೇಕು: ರಮೀಝ್ ರಾಜಾ

ಗುರುವಾರ (ಆಗಸ್ಟ್ 27) ನಡೆದ ಟ್ವೆಂಟಿ ಟ್ವೆಂಟಿ 4ನೇ ಪಂದ್ಯದಲ್ಲಿ ಲೀನ್‌ಸ್ಟರ್ ಲೈಟ್ನಿಂಗ್ ಪ್ರತಿನಿಧಿಸಿದ್ದ ಕೆವಿನ್ ಓಬ್ರಿಯನ್ ಎದುರಾಳಿ ತಂಡ ನಾರ್ತ್‌ವೆಸ್ಟ್ ವಾರಿಯರ್ಸ್ ಬೌಲರ್‌ಗೆ ಹಿಂಸೆ ಅನ್ನಿಸುವ ಮಟ್ಟಿಗೆ ಸಿಕ್ಸ್-ಫೋರ್‌ ಬಾರಿಸಿದರು.

ಹತ್ರ ಬಂದ್ರೆ ಅಲರಾಮ್: ಯುಎಇ ಐಪಿಎಲ್‌ನ ಕುತೂಹಲಕಾರಿ ಸಂಗತಿಗಳಿವು!ಹತ್ರ ಬಂದ್ರೆ ಅಲರಾಮ್: ಯುಎಇ ಐಪಿಎಲ್‌ನ ಕುತೂಹಲಕಾರಿ ಸಂಗತಿಗಳಿವು!

ಡಬ್ಲಿನ್ ಮೈದಾನದ ಮೂಲೆ ಮೂಲೆಗೂ ಚೆಂಡನ್ನಟ್ಟಿದ ಓಬ್ರಿಯನ್ ಆಟದ ಪರಿಗೆ ಅವರ ಕಾರಿನ ಗಾಜೇ ಪುಡಿ ಪುಡಿಯಾಗಿದೆ.

ಬ್ಯಾಟಿಂಗ್ ಅಬ್ಬರ

ಬ್ಯಾಟಿಂಗ್ ಅಬ್ಬರ

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಲೀನ್‌ಸ್ಟರ್ ಲೈಟ್ನಿಂಗ್‌ನಿಂದ ಆರಂಭಿಕ ಬ್ಯಾಟ್ಸ್‌ಮನ್ ಕೆವಿನ್ ಓಬ್ರಿಯನ್ ಬ್ಯಾಟಿಂಗ್ ಅಬ್ಬರ ನಡೆಸಿದರು. ಕೇವಲ 37 ಎಸೆತಗಳನ್ನು ಎದುರಿಸಿದ ಓಬ್ರಿಯನ್ 82 ರನ್‌ಗಳ ಕೊಡುಗೆಯಿತ್ತರು. ಐರ್ಲೆಂಡ್ ಪರ ಓಬ್ರಿಯನ್ 148 ಏಕದಿನ ಪಂದ್ಯಗಳಲ್ಲಿ 3592 ರನ್, 96 ಟಿ20ಐ ಪಂದ್ಯಗಳಲ್ಲಿ 1672 ರನ್ ಗಳಿಸಿದ್ದಾರೆ.

ಫೋರ್/ಸಿಕ್ಸರ್‌ಗಳು

ಫೋರ್/ಸಿಕ್ಸರ್‌ಗಳು

36ರ ಹರೆಯದ ಓಬ್ರಿಯನ್ ಬ್ಯಾಟ್‌ನಿಂದ 4 ಫೋರ್‌ಗಳು, 8 ಸಿಕ್ಸರ್‌ಗಳು ಸಿಡಿದವು. ಕೆವಿನ್ ಆಕರ್ಷಕ ಬ್ಯಾಟಿಂಗ್‌ನಿಂದ ಲೀನ್‌ಸ್ಟರ್ ಲೈಟ್ನಿಂಗ್ ತಂಡ 12 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 124 ರನ್ ಕಲೆ ಹಾಕಿತ್ತು. ಮಳೆಯ ಕಾರಣ ಪಂದ್ಯವನ್ನು ಡಕ್ವರ್ಥ್ ಲೂಯಿಸ್ ನಿಯಮದಂತೆ 12 ಓವರ್‌ಗೆ ಕಡಿತಗೊಳಿಸಲಾಗಿತ್ತು.

ವಾರಿಯರ್ಸ್‌ಗೆ ಸೋಲು

ವಾರಿಯರ್ಸ್‌ಗೆ ಸೋಲು

ಲೀನ್‌ಸ್ಟರ್ ಲೈಟ್ನಿಂಗ್ ನೀಡಿದ್ದ 129 ರನ್ ಗುರಿ (ಡಿಎಲ್‌ ನಿಯಮ) ಬೆನ್ನಟ್ಟಿದ ನಾರ್ತ್ ವೆಸ್ಟ್ ವಾರಿಯರ್ಸ್‌ನಿಂದ ವಿಲಿಯಂ ಪೋರ್ಟರ್ಫೀಲ್ಡ್ 50 ರನ್ (30 ಎಸೆತ), ಗ್ರಹಾಂ ಕೆನಡಿ 17, ಸ್ಟುವರ್ಟ್ ಥಾಂಪ್ಸನ್ 12 ರನ್ ಸೇರಿಸಿದ್ದು ಬಿಟ್ಟರೆ ಉಳಿದವರೆಲ್ಲರೂ ಬೆರಳೆಣಿಕೆಯ ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ವಾರಿಯರ್ಸ್ 12 ಓವರ್‌ನಲ್ಲಿ 8 ವಿಕೆಟ್ ಕಳೆದು 104 ರನ್ ಪೇರಿಸಿ 24 ರನ್‌ನಿಂದ ಸೋತಿತು.

ಸಿಮಿ ಸಿಂಗ್ 3 ವಿಕೆಟ್

ಸಿಮಿ ಸಿಂಗ್ 3 ವಿಕೆಟ್

ಲೀನ್‌ಸ್ಟರ್ ಲೈಟ್ನಿಂಗ್ ಇನ್ನಿಂಗ್ಸ್‌ನಲ್ಲಿ ನಾರ್ತ್ ವೆಸ್ಟ್ ವಾರಿಯರ್ಸ್ ಗ್ರಹಾಂ ಹ್ಯೂಮ್ 18 ರನ್‌ಗೆ 3 ವಿಕೆಟ್ ಪಡೆದರೆ, ನಾರ್ತ್ ವೆಸ್ಟ್ ವಾರಿಯರ್ಸ್ ಇನ್ನಿಂಗ್ಸ್‌ನಲ್ಲಿ ಸಿಮಿ ಸಿಂಗ್ 11 ರನ್‌ಗೆ 3, ಟೈರನ್ ಕೇನ್ ಮತ್ತು ಪೀಟರ್ ಚೇಸ್ ತಲಾ 2 ವಿಕೆಟ್‌ನೊಂದಿಗೆ ಗಮನ ಸೆಳೆದರು.ಅಂದ್ಹಾಗೆ ಸಿಮಿ ಸಿಂಗ್ ಮೂಲತಃ ಭಾರತದವರು. ಪಂಜಾಬ್ ಅವರ ಹುಟ್ಟೂರು.

Story first published: Friday, August 28, 2020, 21:28 [IST]
Other articles published on Aug 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X