ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನೆನಪಿದೆಯಾ? ನಾನ್ ಹೇಳಿದ್ದೆ ಅಲ್ವಾ!: ಸೋಲಿನ ಬಳಿಕ ಭಾರತೀಯರ ಕಾಲೆಳೆದ ಕೆವಿನ್ ಪೀಟರ್‌ಸನ್

Kevin Pietersen teases Indian fan in Hindi after England win Chennai Test

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಸೋಲು ಕಂಡಿದೆ. ಈ ಸೋಲಿನ ಬಳಿಕ ಇಂಗ್ಲಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್‌ಸನ್ ಟ್ವಿಟ್ಟರ್‌ನಲ್ಲಿ ಟೀಮ್ ಇಂಡಿಯಾ ಹಾಗೂ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಕಾಲೆಳೆದಿದ್ದಾರೆ. ಹಿಂದಿಯಲ್ಲಿ ಟ್ವಿಟ್ ಮಾಡಿದ ಪೀಟರ್‌ಸನ್ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಗೆಲುವನ್ನು ಅತಿಯಾಗಿ ಸಂಭ್ರಮಿಸಲಾಯಿತು ಎಂಬರ್ಥದಲ್ಲಿ ಹೇಳಿದ್ದಾರೆ.

"ಇಂಡಿಯಾ, ನನ್ನ ಮಾತು ನೆನಪಿದೆಯಾ? ನಾನು ಮೊದಲೇ ಹೇಳಿದ್ದೆ, ಆಸ್ಟ್ರೇಲಿಯಾವನ್ನು ಆಸ್ಟ್ರೇಲಿಯಾದಲ್ಲಿ ಸೋಲಿಸಿದ್ದೀರಿ ಎಂಬ ಕಾರಣಕ್ಕೆ ಅತಿಯಾಗಿ ಸಂಭ್ರಮಿಸಬೇಡಿ" ಎಂದು ಕೆವಿನ್ ಪೀಟರ್‌ಸನ್ ಟ್ವೀಟ್ ಮಾಡಿದ್ದಾರೆ. ಹಿಂದಿಯಲ್ಲೇ ಟ್ವೀಟ್ ಮಾಡಿ ಭಾರತೀಯರ ಕಾಲೆಳೆದಿದ್ದಾರೆ ಕೆವಿನ್ ಪೀಟರ್‌ಸನ್.

ಯುರೋ ಮಿಲಿಯನ್ ಈ ವಾರ ಭಾರತೀಯರಿಗೆ ಯೂರೋ 144 ಮಿ. ಜಾಕ್‌ಪಾಟ್ ನೀಡಲಿದೆ!ಯುರೋ ಮಿಲಿಯನ್ ಈ ವಾರ ಭಾರತೀಯರಿಗೆ ಯೂರೋ 144 ಮಿ. ಜಾಕ್‌ಪಾಟ್ ನೀಡಲಿದೆ!

ಇನ್ನು ಕೆವಿನ್ ಪೀಟರ್‌ಸನ್ ಮಾಡಿದ ಈ ಟ್ವೀಟ್‌ಗೆ ಸಾಕಷ್ಟು ಪ್ರಮಾಣದಲ್ಲಿ ಪ್ರತಿಕ್ರಿಯೆಗಳು ಕೂಡ ವ್ಯಕ್ತವಾಗುತ್ತಿದೆ. "ನೀವು ಕೂಡ ಹೆಚ್ಚಾಗಿ ಸಂಭ್ರಮಿಸಬೇಡಿ ಸರ್, ಆ ಸರಣಿಯನ್ನು ಭಾರತ ಗೆದ್ದುಕೊಂಡಿತ್ತು ಎಂಬುದನ್ನು ನೆನಪಿಟ್ಟುಕೊಳ್ಳಿ" ಎಂದು ಅಭಿಮಾನಿಯೊಬ್ಬರು ಸರಿಯಾಗಿಯೇ ಪ್ರತ್ಯುತ್ತರವನ್ನು ನೀಡಿದ್ದಾರೆ.

ಇನ್ನು ಕಳೆದ ಜನವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸರಣಿಯನ್ನು ಗೆದ್ದ ಬಳಿಕ ಇಂಗ್ಲೆಂಡ್ ಮಾಜಿ ನಾಯಕ ಕೆವಿನ್ ಪೀಟರ್‌ಸನ್ ಟ್ವಿಟ್ಟರ್‌ನಲ್ಲಿ ಮೊದಲ ಬಾರಿಗೆ ಹಿಂದಿಯನ್ನು ಟ್ವೀಟ್ ಮಾಡಿ ಕೆಣಕ್ಕಿದ್ದರು. "ಈ ಐತಿಹಾಸಿಕ ಜಯವನ್ನು ವಿಲಕ್ಷಣತಂಡದ ವಿರುದ್ಧ ಸಾಧಿಸಿ ಸಂಭ್ರಮಿಸುತ್ತಿದ್ದೀರಿ. ಆದರೆ ನಿಜವಾದ ತಂಡ ಭಾರತಕ್ಕೆ ಕೆಲ ವಾರಗಳಲ್ಲೇ ಬಂದು ನಿಮ್ಮನ್ನು ನಿಮ್ಮ ಮನೆಯಲ್ಲೇ ಸೋಲಿಸಲಿದೆ. ಎಚ್ಚರವಾಗಿರಿ, ಎರಡು ವಾರಗಳಲ್ಲಿ ಗೆಚ್ಚು ಸಂಭ್ರಮಿಸುವ ಬಗ್ಗೆ ಎಚ್ಚರವಾಗಿರಿ" ಎಂದು ಪೀಟರ್‌ಸನ್ ಟ್ವೀಟ್‌ನಲ್ಲಿ ಬರೆದುಕೊಂಡಿದ್ದರು.

ಇದು ಇಂಗ್ಲೆಂಡ್ ವಿದೇಶಿ ನೆಲದಲ್ಲಿ ಸತತವಾಗಿ ಆಚರಿಸುತ್ತಿರುವ ಆರನೇ ಗೆಲುವಾಗಿದೆ. ಈ ಮೂಲಕ ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ 1-0 ಅಂತರದಿಂದ ವಿಜಯ ಸಾಧಿಸಿದ್ದಾರೆ. 1999ರ ಬಳಿಕ ಚೆನ್ನೈನಲ್ಲಿ ಟೀಮ್ ಇಂಡಿಯಾ ಕಾಣುತ್ತಿರುವ ಮೊದಲ ಸೋಲು ಇದಾಗಿದೆ.

Story first published: Tuesday, February 9, 2021, 20:15 [IST]
Other articles published on Feb 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X