ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆನಿಸ್ ಬಾಲ್ ಕ್ರಿಕೆಟ್ ನಿಂದ ಟೀಂ ಇಂಡಿಯಾ ತನಕ ಖಲೀಲ್ ಪಯಣ

By Mahesh
Khaleel Ahmed pacer from Tonk to Team India ODI squad

ಬೆಂಗಳೂರು, ಸೆಪ್ಟೆಂಬರ್ 02: ಏಷ್ಯಾ ಕಪ್ 2018ಕ್ಕೆ ಟೀಂ ಇಂಡಿಯಾ ಪ್ರಕಟಿಸಲಾಗಿದ್ದು, 20 ವರ್ಷ ವಯಸ್ಸಿನ ಯುವ ವೇಗಿ ಖಲೀಲ್ ಅಹ್ಮದ್ ಆಯ್ಕೆ ಅನಿರೀಕ್ಷಿತ ಎನಿಸಿದೆ. ಆದರೆ, ಖಲೀಲ್ ಪ್ರತಿಭೆ ಬಗ್ಗೆ ಎರಡು ಮಾತಿಲ್ಲ. ಗಲ್ಲಿ ಕ್ರಿಕೆಟ್ ನಿಂದ ಟೀಂ ಇಂಡಿಯಾಕ್ಕೆ ಆಯ್ಕೆಯಾಗಿದ್ದರ ಪಯಣ ಇಲ್ಲಿದೆ...

ಒಂದು ಸೀಸನ್ ದೇಸಿ ಕ್ರಿಕೆಟ್ , ಎರಡು ಪ್ರಥಮ ದರ್ಜೆ ಪಂದ್ಯ ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಆಡಿದ ಅನುಭವವನ್ನು ಹೊಂದಿರುವ ಎಡಗೈ ವೇಗಿ ಖಲೀಲ್ ಅವರು ಯುಎಇಯಲ್ಲಿ ನಡೆಯಲಿರುವ ಏಷ್ಯಾ ಕಪ್ ನಲ್ಲಿ ಉತ್ತಮ ಪ್ರದರ್ಶನ ನೀಡುವ ಉತ್ಸಾಹದಲ್ಲಿದ್ದಾರೆ.

ರಾಜಸ್ಥಾನದಿಂದ 100 ಕಿಲೋ ಮೀಟರ್​ ದೂರದ ಸಣ್ಣ ಹಳ್ಳಿ ಟೊಂಕ್ ನಲ್ಲಿ ಜನಸಿದ ಖಲೀಲ್​ ಅಹ್ಮದ್ ಅವರ ತಂದೆ ಆಸ್ಪತ್ರೆಯೊಂದರಲ್ಲಿ ಕಾಂಪೌಂಡರ್​ ಆಗಿದ್ದಾರೆ.

ಖಲೀಲ್​ ಅವರು ಕ್ರಿಕೆಟ್ ಉತ್ಸಾಹಕ್ಕೆ ಆರಂಭದಲ್ಲಿ ಪ್ರೋತ್ಸಾಹ ನೀಡಿದವರು ತರಬೇತುದಾರ ಇಮ್ತಿಯಾಜ್​ ಅಲಿಖಾನ್​.

2016ರಲ್ಲಿ ವಿಶ್ವಕಪ್ ಟೂರ್ನಮೆಂಟ್ ನಲ್ಲಿ ಅಂಡರ್ 19 ತಂಡದಲ್ಲಿದ್ದ ಖಲೀಲ್ ಅವರು ಐಪಿಎಲ್ 2018ರ ಸನ್ ರೈಸರ್ಸ್ ಹೈದರಾಬಾದ್ ಪರ ಬೌಲಿಂಗ್ ಮಾಡಿದ್ದರು. ನಂತರ ಇಂಡಿಯಾ ಎ ಪರ ಆಡಿ, ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದರು.

ಖಲೀಲ್ ಸಾಧನೆ:
* ರಣಜಿ ಟ್ರೋಫಿಯಲ್ಲಿ ರಾಜಸ್ಥಾನ್ ಪರ ಎರಡು ಪಂದ್ಯಗಳಿಂದ 2 ವಿಕೆಟ್ 90 ವಿಕೆಟ್ ಸರಾಸರಿ.
* ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಮೆಂಟ್ 17ವಿಕೆಟ್ 15.52 ವಿಕೆಟ್ ಸರಾಸರಿ.
* 2018ರ 3 ಕೋಟಿ ರು ಗೆ ಸನ್ ರೈಸರ್ಸ್ ಹೈದರಾಬಾದ್ ತಂಡ ಸೇರಿದರು.

Story first published: Sunday, September 2, 2018, 17:18 [IST]
Other articles published on Sep 2, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X