ಟಿ20 ಕ್ರಿಕೆಟ್‌ನಲ್ಲಿ ಯಾರೂ ಮಾಡದ ದಾಖಲೆ ಮಾಡಿದ ಕಿರಾನ್ ಪೊಲಾರ್ಡ್: ಕ್ರಿಕೆಟ್ ಲೋಕಕ್ಕೆ ಅಚ್ಚರಿ

ಟಿ20 ಕ್ರಿಕೆಟ್‌ನಲ್ಲಿ ಕೆರಿಬಿಯನ್ ಆಟಗಾರರು ತಮ್ಮದೇ ಆದ ಪ್ರಾಬಲ್ಯ ಮೆರೆದಿದ್ದಾರೆ. ವಿಶ್ವದ ಯಾವುದೇ ಮೂಲೆಯಲ್ಲಿ ಟಿ20 ಫ್ರಾಂಚೈಸಿ ಟೂರ್ನಮೆಂಟ್ ನಡೆದ್ರೂ, ಅಲ್ಲಿ ವಿಂಡೀಸ್ ಆಟಗಾರರು ಆಡುವುದು ಸಹಜವಾಗಿದೆ. ಹೀಗಾಗಿ ಚುಟುಕು ಕ್ರಿಕೆಟ್‌ನಲ್ಲಿ ಅಭಿಮಾನಿಗಳಿಗೆ ಮನರಂಜನೆ ನೀಡುವುದರಲ್ಲಿ ಇಲ್ಲಿನ ಆಟಗಾರರು ಮೇಲುಗೈ ಸಾಧಿಸಿದ್ದಾರೆ. ಜೊತೆಗೆ ಹೊಸ ಹೊಸ ದಾಖಲೆ ಮಾಡುವುದರಲ್ಲೂ ಮುಂದಿದ್ದಾರೆ.

ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಮಾಜಿ ನಾಯಕ ಕಿರಾನ್ ಪೊಲಾರ್ಡ್ ಕೂಡ ಟಿ20 ಕ್ರಿಕೆಟ್‌ನಲ್ಲಿ ಹೊಸ ಮೈಲುಗಲ್ಲು ತಲುಪಿದ್ದಾರೆ. ದಿ ಹಂಡ್ರೆಡ್ ಟೂರ್ನಿಯಲ್ಲಿ ಲಂಡನ್ ಸ್ಪಿರಿಟ್ ಪರ ಆಡುವ ಮೂಲಕ ಹೊಸ ದಾಖಲೆ ಸೃಷ್ಟಿಸಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ 600ನೇ ಪಂದ್ಯವನ್ನಾಡಿದ ಕಿರಾನ್ ಪೊಲಾರ್ಡ್‌

ಟಿ20 ಕ್ರಿಕೆಟ್‌ನಲ್ಲಿ 600ನೇ ಪಂದ್ಯವನ್ನಾಡಿದ ಕಿರಾನ್ ಪೊಲಾರ್ಡ್‌

ಲಂಡನ್ ಸ್ಪಿರಿಟ್ ಪರ ಕಣಕ್ಕಿಳಿಯುವ ಮೂಲಕ ಟಿ20 ಫಾರ್ಮೆಟ್‌ನಲ್ಲಿ ಕಿರಾನ್ ಪೊಲಾರ್ಡ್‌ ಹೊಸ ದಾಖಲೆ ಬರೆದಿದ್ದು 600ನೇ ಪಂದ್ಯವನ್ನಾಡಿದ ವಿಶ್ವದ ಮೊದಲ ಆಟಗಾರ ಎಂಬ ಸಾಧನೆ ಮಾಡಿದ್ದಾರೆ. ಈ ಮೂಲಕ ತನ್ನ ವಿಂಡೀಸ್ ಸಹ ಆಟಗಾರರ ದಾಖಲೆಗಳನ್ನ ಹಿಂದಿಕ್ಕಿ ಹೊಸ ಮೈಲುಗಲ್ಲು ತಲುಪಿದ್ದಾರೆ.

600 ಟಿ20 ಪಂದ್ಯವನ್ನಾಡಿದ ಕಿರಾನ್ ಪೊಲಾರ್ಡ್‌ ತನ್ನ ಸಹ ಆಟಗಾರ ಡ್ವೇನ್ ಬ್ರಾವೋ (543 ಪಂದ್ಯಗಳು), ಶೋಯೆಬ್ ಮಲ್ಲಿಕ್ (472 ಪಂದ್ಯಗಳು), ಕ್ರಿಸ್‌ಗೇಲ್‌ (463 ಪಂದ್ಯಗಳು), ರವಿ ಬೋಪಾರ (426 ಪಂದ್ಯಗಳು) ದಾಖಲೆಯನ್ನ ಹಿಂದಿಕ್ಕಿದ್ದಾರೆ.

ಅನೇಕ ಟಿ20 ಲೀಗ್‌ಗಳಲ್ಲಿ ಭಾಗಿಯಾಗುವ ಬಿಗ್ ಹಿಟ್ಟರ್

ಅನೇಕ ಟಿ20 ಲೀಗ್‌ಗಳಲ್ಲಿ ಭಾಗಿಯಾಗುವ ಬಿಗ್ ಹಿಟ್ಟರ್

ವಿಂಡೀಸ್ ಮಾಜಿ ಆಲ್‌ರೌಂಡರ್ ಕಿರಾನ್ ಪೊಲಾರ್ಡ್ ವಿಶ್ವದ ಅನೇಕ ಟಿ20 ಲೀಗ್‌ಗಳಲ್ಲಿ ಭಾಗಿಯಾಗಿದ್ದಾರೆ. ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಮುಂಬೈ ಇಂಡಿಯನ್ಸ್, ಬಿಗ್ ಬ್ಯಾಷ್ ಲೀಗ್‌ನಲ್ಲಿ ಅಡಿಲೇಡ್ ಸ್ಟ್ರೈಕರ್ಸ್ ಮತ್ತು ಮೆಲ್ಬೋರ್ನ್ ರೆನೆಗೇಡ್ಸ್, ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (ಬಿಪಿಎಲ್) ನಲ್ಲಿ ಢಾಕಾ ಗ್ಲಾಡಿಯೇಟರ್ಸ್ ಮತ್ತು ಢಾಕಾ ಡೈನಮೈಟ್ಸ್, ಕರಾಚಿ ಕಿಂಗ್ಸ್, ಮುಲ್ತಾನ್ ಸುಲ್ತಾನ್ಸ್ ಮತ್ತು ಪಾಕಿಸ್ತಾನ್ ಸೂಪರ್ ಲೀಗ್, ಟ್ರಿನ್‌ಬಾಗೊದಲ್ಲಿ ಪೇಶಾವರ್ ಝಲ್ಮಿಯನ್ನು ಪ್ರತಿನಿಧಿಸಿದ್ದಾರೆ. ಕೆರಿಬಿಯನ್ ಪ್ರೀಮಿಯರ್ ಲೀಗ್ (CPL) ನಲ್ಲಿ ನೈಟ್ ರೈಡರ್ಸ್ ತಂಡದ ಪರ ಆಡಿದ್ದಾರೆ.

ಏಷ್ಯಾ ಕಪ್‌ 2022: ದೀರ್ಘಾವಧಿಯಿಂದ ತಂಡದಲ್ಲಿದ್ದವರನ್ನ ಹಿಂದಿಕ್ಕಿ ಸ್ಥಾನ ಪಡೆದ ಅಲ್ಪಾವಧಿ 3 ಆಟಗಾರರು

ದಿ ಹಂಡ್ರೆಡ್‌ನಲ್ಲೂ ಪೊಲಾರ್ಡ್ ಮಿಂಚು

ದಿ ಹಂಡ್ರೆಡ್‌ನಲ್ಲೂ ಪೊಲಾರ್ಡ್ ಮಿಂಚು

ಲಂಡನ್ ಸ್ಪಿರಿಟ್ ಪರ ಕಳೆದ ಪಂದ್ಯದಲ್ಲಿ ಮ್ಯಾಂಚೆಸ್ಟರ್ ಒರಿಜಿನಲ್ಸ್ ವಿರುದ್ಧ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ನಂತರ ಪೊಲಾರ್ಡ್ ಈ ಮೈಲಿಗಲ್ಲನ್ನು ತಲುಪಿದ್ದಾರೆ. ಅವರು 11 ಎಸೆತಗಳಲ್ಲಿ 4 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 34 ರನ್ ಗಳಿಸಿ ತಂಡದ ಸ್ಕೋರ್ ಅನ್ನು 100 ರಿಂದ 160/6ಕ್ಕೆ ಕೊಂಡೊಯ್ದರು.

"ಇದು ಸ್ವತಃ ಒಂದು ಸಾಧನೆಯಾಗಿದೆ, ಯಾವುದೇ ಸ್ವರೂಪದಲ್ಲಿ 600 ಪಂದ್ಯಗಳನ್ನ ಆಡುವುದು ಸುಲಭವಲ್ಲ. ನಾನು ಈ ಅವಧಿಯಲ್ಲಿ ಇಷ್ಟು ಆಟಗಳನ್ನು ಆಡಲು ಅಥವಾ ಈ ಸ್ವರೂಪವನ್ನು ಆಡಲು ಎಂದಿಗೂ ಹೊರಟಿಲ್ಲ, ಆದರೆ ಇದು ಅದಾಗೇ ಬಂದ ಸಂಗತಿಯಾಗಿದೆ ಮತ್ತು ನಾನು ಇಲ್ಲಿಯವರೆಗೆ ಅದನ್ನು ಆನಂದಿಸಿದ್ದೇನೆ. ನಾನು ಮುಂದೆ ಹೋಗುವಾಗ ಏನಾಗುತ್ತದೆ ಎಂದು ನೋಡೋಣ. ನಾನು ಪ್ರಯತ್ನಿಸುವುದನ್ನು ಮುಂದುವರಿಸುತ್ತೇನೆ ಮತ್ತು ಕಷ್ಟಪಟ್ಟು ಕೆಲಸ ಮಾಡುತ್ತೇನೆ ಮತ್ತು ನನ್ನ ಮುಖದಲ್ಲಿ ನಗುವಿನೊಂದಿಗೆ ಕ್ರಿಕೆಟ್ ಆಡುವುದನ್ನು ಆನಂದಿಸುತ್ತೇನೆ. ದೇಹವು ಫಿಟ್‌ ಆಗಿರುವವರೆಗೆ, ನಾನು ಎಷ್ಟು ಪಂದ್ಯಗಳನ್ನ ಆಡಬಹುದು ಎಂದು ನೋಡಲಿದ್ದೇನೆ'' ಎಂದು ಪೊಲಾರ್ಡ್ ಆಟದ ನಂತರ ಇಎಸ್‌ಪಿಎನ್ ಕ್ರಿಕ್‌ಇನ್‌ಫೋಗೆ ಹೇಳಿದರು.

Asia Cup 2022: ಏಷ್ಯಾಕಪ್‌ಗಾಗಿ 2 ವಾರಗಳ ಮುಂಚೆಯೇ ಅಭ್ಯಾಸ ಆರಂಭಿಸಲಿದ್ದಾರೆ ವಿರಾಟ್ ಕೊಹ್ಲಿ

Virat Kohli ತಮ್ಮ ನೂರನೇ ಪಂದ್ಯವನ್ನು Pakistan ವಿರುದ್ಧ ಆಡಲಿದ್ದಾರೆ | *Cricket | OneIndia Kannada
600 ಟಿ20 ಪಂದ್ಯಗಳನ್ನಾಡಿರುವ ಪೊಲಾರ್ಡ್ ಅಂಕಿ-ಅಂಶ

600 ಟಿ20 ಪಂದ್ಯಗಳನ್ನಾಡಿರುವ ಪೊಲಾರ್ಡ್ ಅಂಕಿ-ಅಂಶ

ಟಿ20 ಕ್ರಿಕೆಟ್‌ನಲ್ಲಿ 600 ಪಂದ್ಯಗಳಲ್ಲಿ 31.34ರ ಸರಾಸರಿಯಲ್ಲಿ ಬ್ಯಾಟ್ ಬೀಸಿರುವ ಪೊಲಾರ್ಡ್ 151.22ರ ಸ್ಟ್ರೈಕ್‌ರೇಟ್‌ನಲ್ಲಿ 11,723 ರನ್ ಕಲೆಹಾಕಿದ್ದಾರೆ. 56 ಅರ್ಧಶತಕ ಹಾಗೂ 1 ಶತಕ ಸಹ ಸಿಡಿಸಿರುವ ಪೊಲಾರ್ಡ್‌ ಬರೋಬ್ಬರಿ 783 ಸಿಕ್ಸರ್ ಹಾಗೂ 738 ಬೌಂಡರಿ ಕಲೆಹಾಕಿದ್ದಾರೆ.

ಇನ್ನು ಬೌಲಿಂಗ್‌ನಲ್ಲಿ ಮಿಂಚಿರುವ ಬಿಗ್ ಹಿಟ್ಟರ್ 600 ಪಂದ್ಯಗಳಲ್ಲಿ 25.00ರ ಸರಾಸರಿಯಲ್ಲಿ, 8.21 ಎಕಾನಮಿಯಲ್ಲಿ 309 ವಿಕೆಟ್ ಉರುಳಿಸಿದ್ದಾರೆ. ಬೆಸ್ಟ್ ಬೌಲಿಂಗ್‌ನಲ್ಲಿ 15ರನ್‌ಗೆ 4 ವಿಕೆಟ್ ಪಡೆದಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, August 9, 2022, 19:43 [IST]
Other articles published on Aug 9, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X