ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಿರಾನ್ ಪೊಲಾರ್ಡ್‌ - ರೋಹಿತ್ ಶರ್ಮಾ ನಡುವೆ ಬಿರುಕು ಮೂಡಿದ್ಯಾ?: ಪೊಲಾರ್ಡ್ ಪೋಸ್ಟ್ ವೈರಲ್

Kieron Pollard Shares Cryptic Post On Instagram: Polly Post Viral

ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯ ಅಂತಿಮ ಲೀಗ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ ಪ್ಲೇ ಆಫ್‌ ಪ್ರವೇಶಿಸಿದೆ. ಇದರ ನಡುವೆ ಮುಂಬೈ ಆಲ್‌ರೌಂಡರ್ ಕಿರಾನ್ ಪೊಲಾರ್ಡ್‌ರ ಇನ್‌ಸ್ಟಾಗ್ರಾಮ್‌ ಪೋಸ್ಟ್‌ ಸಖತ್ ಗೊಂದಲ ಸೃಷ್ಟಿಸಿದೆ.

ಪ್ರಸಕ್ತ ಆವೃತ್ತಿಯಲ್ಲಿ ಪ್ಲೇ ಆಫ್ ತಲುಪಿದ ಮೊದಲ ತಂಡವಾಗಿರುವ ಮುಂಬೈ ಇಂಡಿಯನ್ಸ್ ಅಂತಿಮ ಪಂದ್ಯದಲ್ಲಿ ಜಸ್ಪ್ರಿತ್ ಬುಮ್ರಾ, ಹಾರ್ದಿಕ್ ಪಾಂಡ್ಯ, ಮತ್ತು ಟ್ರೆಂಟ್ ಬೌಲ್ಟ್ ಅವರಂತಹ ಕೆಲವು ಪ್ರಮುಖ ಆಟಗಾರರಿಗೆ ಅವರು ವಿಶ್ರಾಂತಿ ನೀಡಿತ್ತು.

 ಟೀಮ್ ಇಂಡಿಯಾಕ್ಕೆ ರೋಹಿತ್ ಶರ್ಮಾ ಏಕೆ ಆಯ್ಕೆಯಾಗಿಲ್ಲ: ಕಾರಣ ತಿಳಿಸಿದ ಮೈಕಲ್ ವಾನ್ ಟೀಮ್ ಇಂಡಿಯಾಕ್ಕೆ ರೋಹಿತ್ ಶರ್ಮಾ ಏಕೆ ಆಯ್ಕೆಯಾಗಿಲ್ಲ: ಕಾರಣ ತಿಳಿಸಿದ ಮೈಕಲ್ ವಾನ್

ಎದುರಾಳಿಯ ಪ್ರಮುಖ ಆಟಗಾರರ ಅನುಪಸ್ಥಿತಿಯ ಲಾಭ ಪಡೆದುಕೊಂಡ ಸನ್‌ರೈಸರ್ಸ್ ಹೈದ್ರಾಬಾದ್ ವಿಕೆಟ್ ಕಳೆದುಕೊಳ್ಳದೆ 150 ರನ್‌ಗಳ ಗುರಿಯನ್ನು ಬೆನ್ನಟ್ಟಿತು. ಈ ಫಲಿತಾಂಶವು ಮುಂಬೈಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ಯಾವುದೇ ವ್ಯತ್ಯಾಸ ತಂದುಕೊಡದಿದ್ದರೂ, ನಾಕೌಟ್ ಹಂತಗಳಲ್ಲಿ ಎಂಐ ಅವರ ಗೆಲುವಿನ ವೇಗವನ್ನು ಕಳೆದುಕೊಳ್ಳಬಹುದು.

ಸೋಲಿನ ಕೆಲವೇ ಗಂಟೆಗಳ ನಂತರ, ಪೊಲಾರ್ಡ್ ಸಾಮಾಜಿಕ ಮಾಧ್ಯಮದಲ್ಲಿ ಬಹಳ ರಹಸ್ಯವಾದ ಪೋಸ್ಟ್ ಅನ್ನು ಹಂಚಿಕೊಂಡಿರುವುದು ಪೊಲಾರ್ಡ್ ಮತ್ತು ನಾಯಕ ರೋಹಿತ್ ಶರ್ಆ ನಡುವೆ ಸಂಭವನೀಯ ಬಿರುಕು ಮೂಡಿದ್ಯಾ ಎಂಬ ಅನುಮಾನಗಳಿಗೆ ಕಾರಣವಾಗಿದೆ.



ಹ್ಯಾಮ್‌ಸ್ಟ್ರಿಂಗ್(ಮಂಡಿರಜ್ಜು) ಸಮಸ್ಯೆಯಿಂದ ಬಳಲುತ್ತಿದ್ದ ರೋಹಿತ್ ಎಸ್‌ಆರ್‌ಹೆಚ್ ವಿರುದ್ಧ ಮುನ್ನಡೆಸಲು ಮರಳಿದರು. ರೋಹಿತ್‌ರ ಯಾವುದೋ ಒಂದು ನಿರ್ಧಾರ ಇಬ್ಬರ ನಡುವೆ ವೈಮನಸ್ಸಿಗೆ ಕಾರಣವಾಗಿದ್ಯಾ ಎಂದು ಅಭಿಮಾನಿಗಳು ಪೊಲಾರ್ಡ್ ಪೋಸ್ಟ್‌ಗೆ ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಪೊಲಾರ್ಡ್ ಮತ್ತು ವೆಸ್ಟ್ ಇಂಡೀಸ್ ಟೆಸ್ಟ್ ನಾಯಕ ಜೇಸನ್ ಹೋಲ್ಡರ್ ನಡುವೆ ಸಮಸ್ಯೆಗಳು ಹೆಚ್ಚುತ್ತಿವೆ ಎಂದು ಆರೋಪಿಸಿದ್ದಾರೆ.

Story first published: Thursday, November 5, 2020, 9:42 [IST]
Other articles published on Nov 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X