ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅದ್ಭುತ ಕ್ಯಾಚ್ ಮೂಲಕ ಕರುಣರತ್ನೆ ಔಟ್ ಮಾಡಿದ ಪೊಲಾರ್ಡ್: ವಿಡಿಯೋ

Kieron Pollard Takes A Juggling One-Handed Stunner To Remove Dimuth Karunaratne

ಆ್ಯಂಟಿಗುವಾ: ವೆಸ್ಟ್‌ ಇಂಡೀಸ್ ನಿಯಮಿತ ಓವರ್‌ಗಳ ಕ್ರಿಕೆಟ್‌ ತಂಡದ ನಾಯಕ ಕೀರನ್ ಪೊಲಾರ್ಡ್ ಸ್ಫೋಟಕ ಬ್ಯಾಟಿಂಗ್‌ ಮತ್ತು ಅದ್ಭುತ ಫೀಲ್ಡಿಂಗ್‌ಗಾಗಿ ಹೆಸರಾದವರು. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಉಪನಾಯಕರಾಗಿರುವ ಪೊಲಾರ್ಡ್ ಅಲ್ಲೂ ಮಿಂಚಿನ ವೇಗದ ಫೀಲ್ಡಿಂಗ್‌ಗೆ ಗಮನ ಸೆಳೆದಿದ್ದಿದೆ.

ವಿಜಯ್ ಹಜಾರೆ: ಮಯಾಂಕ್ ಅಗರ್ವಾಲ್ ದಾಖಲೆ ಸರಿಗಟ್ಟಿದ ಪೃಥ್ವಿ ಶಾವಿಜಯ್ ಹಜಾರೆ: ಮಯಾಂಕ್ ಅಗರ್ವಾಲ್ ದಾಖಲೆ ಸರಿಗಟ್ಟಿದ ಪೃಥ್ವಿ ಶಾ

ಗುರುವಾರ (ಮಾರ್ಚ್ 11) ಆ್ಯಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್‌ ಸ್ಟೇಡಿಯಂನಲ್ಲಿ ನಡೆದ, ಶ್ರೀಲಂಕಾ ವಿರುದ್ಧದ ಮೊದಲನೇ ಏಕದಿನ ಪಂದ್ಯದಲ್ಲೂ ಕೀರನ್ ಪೊಲಾರ್ಡ್ ಅದ್ಭುತ ಕ್ಯಾಚ್‌ಗಾಗಿ ಬೆರಗು ಮೂಡಿಸಿದ್ದಾರೆ. ಪೊಲಾರ್ಡ್ ಕ್ಯಾಚ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆರಂಭಿಕರಾಗಿ ಬಂದಿದ್ದ ಲಂಕಾ ನಾಯಕ ದಿಮುತ್ ಕರುಣರತ್ನೆ 52 ರನ್ ಬಾರಿಸಿ ಆಡುತ್ತಿದ್ದರು. 19.2ನೇ ಓವರ್‌ನಲ್ಲಿ ಪೊಲಾರ್ಡ್ ಎಸೆತಕ್ಕೆ ಕರುಣರತ್ನೆ ಲಾಂಗ್ ಆನ್‌ನತ್ತ ಬ್ಯಾಟ್ ಬೀಸಿದರು. ಆಗ ಪೊಲಾರ್ಡ್ ಒಮ್ಮೆ ಚೆಂಡನ್ನು ಕ್ಯಾಚ್ ಮಾಡಿ ಕೈ ಚೆಲ್ಲಿದ್ದರಾದರೂ ಮತ್ತೆ ಜಿಗಿದು ಆ ಕ್ಯಾಚನ್ನು ಪಡೆದುಕೊಂಡರು.

ಇದೇ ಪಂದ್ಯದಲ್ಲಿ ಪೊಲಾರ್ಡ್ ಮತ್ತು ಲಂಕಾ ಬ್ಯಾಟ್ಸ್‌ಮನ್‌ ದನುಷ್ಕ ಗುಣತಿಲಕ ಮಧ್ಯೆ ಸಣ್ಣ ವಿವಾದದ ಸಂಗತಿಯೂ ನಡೆದಿತ್ತು. 21.1ನೇ ಓವರ್‌ನಲ್ಲಿ ಗುಣತಿಲಕ ಅವರು ಅಬ್ಸ್ಟ್ರಾಕ್ಟಿಂಗ್‌ ದ ಫೀಲ್ಡ್ ಆಗಿ ಔಟ್ ಆದರು. ಈ ವೇಳೆ ಪೊಲಾರ್ಡ್ ಮತ್ತು ಗುಣತಿಲಕ ಮಧ್ಯೆ ಬಿಗು ವಾತಾವರಣ ನಿರ್ಮಾಣವಾಗಿತ್ತಾದರೂ ಪಂದ್ಯದ ಬಳಿಕ ಪೊಲಾರ್ಡ್ ಅವರು ಗುಣತಿಲಕ ಅವರಲ್ಲಿ ಕ್ಷಮೆಯಾಚಿಸಿ ಸಿಟ್ಟಿಗೆ ಕೊನೆ ಹಾಡಿದ್ದರು.

Story first published: Thursday, March 11, 2021, 19:13 [IST]
Other articles published on Mar 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X