ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುಂಬೈ ಇಂಡಿಯನ್ಸ್‌ಗೆ ಪೊಲಾರ್ಡ್ ಸೇರಿದ ಕುತೂಹಲಕಾರಿ ಕತೆ ಹೇಳಿದ ಬ್ರಾವೋ!

Kieron Pollard was stunned by first contract offered by Mumbai Indians: Dwayne Bravo
Mumbai ತಂಡಕ್ಕೆ ಪೊಲ್ಲಾರ್ಡ್ ಸೇರಲು ಬ್ರಾವೊ ಕಾರಣ | Oneindia Kannada

ನವದೆಹಲಿ: 2010ರಲ್ಲಿ ಮುಂಬೈ ಇಂಡಿಯನ್ ತಂಡಕ್ಕೆ ಕೀರನ್ ಪೊಲಾರ್ಡ್ ಬಂದ ಸಂಗತಿಯ ಬಗ್ಗೆ ವೆಸ್ಟ್ ಇಂಡೀಸ್ ಆಲ್ ರೌಂಡರ್ ಡ್ವೇನ್ ಬ್ರಾವೋ ಮಾತನಾಡಿದ್ದಾರೆ. ಮುಂಬೈ ಇಂಡಿಯನ್ಸ್‌ಗೆ ಮೊದಲ ಬಾರಿ ಸಹಿ ಹಾಕುವಾಗ ಪೊಲಾರ್ಡ್ ದಂಗಾಗಿದ್ದರು ಎಂದು ಬ್ರಾವೋ ಹೇಳಿದ್ದಾರೆ. ಹಾಲಿ ಚಾಂಪಿಯನ್ಸ್ ಮುಂಬೈ ತಂಡ ಒಟ್ಟು 5 ಬಾರಿ ಟ್ರೋಫಿ ಗೆಲ್ಲುವಲ್ಲಿ ಪೊಲಾರ್ಡ್ ಕೊಡುಗೆಯೂ ಬಹಳಷ್ಟಿದೆ. ಆದರೆ ಪೊಲಾರ್ಡ್ ಎಂಐಗೆ ಬಂದಿದ್ಹೇಗೆಂದು ಬ್ರಾವೋ ಹೇಳಿದ್ದಾರೆ.

ICC Test Rankings: ವೃತ್ತಿ ಜೀವನದ ಅತ್ಯುತ್ತಮ ಸ್ಥಾನಕ್ಕೇರಿದ ಪಾಕ್ ಆಟಗಾರರುICC Test Rankings: ವೃತ್ತಿ ಜೀವನದ ಅತ್ಯುತ್ತಮ ಸ್ಥಾನಕ್ಕೇರಿದ ಪಾಕ್ ಆಟಗಾರರು

2008-2010ರ ವರೆಗೆ ಡ್ವೇನ್ ಬ್ರಾವೋ ಅವರು ಮುಂಬೈ ಇಂಡಿಯನ್ಸ್ ಪರ ಆಡಿದ್ದರು. ಆ ಬಳಿಕ ಬ್ರಾವೋ ಚೆನ್ನೈ ಸೂಪರ್ ಕಿಂಗ್ಸ್‌ಗೆ ತೆರಳಿದ್ದರು. ಆಗ ಎಂಐ ತಂಡ ಬ್ರಾವೋಗೆ ಬಲಿ ಆಟಗಾರರನ್ನು ಹುಡುಕುತ್ತಿತ್ತು. ಅಂದು ಎಂಐಗೆ ಬ್ರಾವೋ, ಪೊಲಾರ್ಡ್ ಅವರೊಂದಿಗೆ ಒಪ್ಪಂದ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದರಂತೆ.

ಹೇಳಿದ್ದು ಪೊಲಾರ್ಡ್, ಸೇರಿದ್ದು ಸ್ಮಿತ್!

ಹೇಳಿದ್ದು ಪೊಲಾರ್ಡ್, ಸೇರಿದ್ದು ಸ್ಮಿತ್!

'ನನಗೆ ಬದಲಿ ಆಟಗಾರ ಮುಂಬೈಗೆ ಬೇಕಿತ್ತು. ನಾನವರಿಗೆ ಕೀರನ್ ಪೊಲಾರ್ಡ್ ಹೆಸರು ನೀಡಿದೆ. ಪೊಲಾರ್ಡ್ ಅವರನ್ನು ಸಂಪರ್ಕಿಸಲು ಅವರು ಪ್ರಯತ್ನಿಸುವಾಗ ಅವರು ಕ್ಲಬ್‌ ಒಂದಕ್ಕೆ ಆಡುತ್ತಿದ್ದರು. ಹೀಗಾಗಿ ನಾನು ಡ್ವೇನ್ ಸ್ಮಿತ್ ಹೆಸರು ಶಿಫಾರಸು ಮಾಡಿದೆ. ಸ್ಮಿತ್ ನನಗೆ ಬದಲಿ ಆಟಗಾರನಾಗಿ ಎಂಐ ಸೇರಿಕೊಂಡರು,' ಎಂದು ಕ್ರಿಕ್‌ಬಝ್ ಜೊತೆ ಬ್ರಾವೋ ಹೇಳಿದರು.

200,000 ಡಾಲರ್ ಒಪ್ಪಂದ

200,000 ಡಾಲರ್ ಒಪ್ಪಂದ

'ಅದೇ ವರ್ಷ ಚಾಂಪಿಯನ್ಸ್ ಲೀಗ್‌ ನಡೆಯುತ್ತಿದ್ದ ಸಮಯ. ನಾನು ರಾಹುಲ್ ಸಂಘ್ವಿ ಅವರಿಗೆ ಕರೆ ಮಾಡಿದೆ. ಪೊಲಾರ್ಡ್ ಇಲ್ಲಿದ್ದಾರೆ. ಟೂರ್ನಿ ಆರಂಭವಾಗುವ ಮುನ್ನ ಬನ್ನಿ ಆತನೊಂದಿಗೆ ಸಹಿ ಮಾಡಿಸಿಕೊಳ್ಳಿ ಎಂದೆ. ರಾಹುಲ್ ಮತ್ತು ರಾಬಿನ್ ಸಿಂಗ್ ಮುಂಬೈ ತೊರೆದು ಹೈದರಾಬಾದ್‌ಗೆ ಬಂದರು. ನನಗಿನ್ನೂ ನೆನಪಿದೆ, ಅವರು ಅಂದು 200,000 ಡಾಲರ್ (1,47,11,840 ರೂ.)ಗೆ ಒಪ್ಪಂದ ಮಾಡಿಸಲು ಬಂದಿದ್ದರು,' ಎಂದು ಬ್ರಾವೋ ವಿವರಿಸಿದ್ದಾರೆ.

ದಂಗಾಗಿದ್ದ ಕೀರನ್ ಪೊಲಾರ್ಡ್

ದಂಗಾಗಿದ್ದ ಕೀರನ್ ಪೊಲಾರ್ಡ್

ಮಾತು ಮುಂದುವರೆಸಿದ ಬ್ರಾವೋ, 'ಆಗ ಬಂದ ಪೊಲಾರ್ಡ್, ರಾಹುಲ್-ಮತ್ತು ರಾಬಿನ್ ಜೊತೆಗೆ ಮಾತನಾಡಿದರು. ಈಗ ಟ್ರಿನಿಡಾಡ್‌ನಿಂದ ಯಾರೊಬ್ಬರೊ ಬರುತ್ತಿದ್ದಾರೆ ವಾವ್. ಡ್ವೇನ್ ನೀನು ಸೀರಿಯಸ್ ಆಗಿದ್ದೀಯ ತಾನೆ? ಎಂದು ಪೊಲಾರ್ಡ್ ದಂಗಾಗಿ ನನ್ನನ್ನು ಪ್ರಶ್ನಿಸಿದ್ದರು,' ಎಂದಿದ್ದಾರೆ. 34ರ ಹರೆಯದ ಪೊಲಾರ್ಡ್ ಮುಂಬೈ ಪರ 150.87ರ ಸ್ಟ್ರೈಕ್‌ ರೇಟ್‌ನಂತೆ 3,191 ರನ್ ಗಳಿಸಿದ್ದಾರೆ, 63 ವಿಕೆಟ್‌ ಕೂಡ ಮುರಿದಿದ್ದಾರೆ.

Story first published: Thursday, May 13, 2021, 18:39 [IST]
Other articles published on May 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X