ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆರ್‌ ಅಶ್ವಿನ್ ಬದಲು ಕನ್ನಡಿಗ ಕೆಎಲ್ ರಾಹುಲ್‌ ಕಿಂಗ್ಸ್‌ XI ಪಂಜಾಬ್ ನಾಯಕ!?

Ashwin move to Delhi Capitals has been finalised | Oneindia Kannada
Kings XI Punjab and R Ashwin have decided to part ways amicably: Ness Wadia

ಬೆಂಗಳೂರು, ನವೆಂಬರ್ 7: ಕಿಂಗ್ಸ್ XI ಪಂಜಾಬ್ ಫ್ರಾಂಚೈಸಿ ಮತ್ತು ಮಾಜಿ ನಾಯಕ ಆರ್‌ ಅಶ್ವಿನ್ ಸೌಹಾರ್ದಯುತವಾಗಿ ಬೇರೆಯಾಗಲು ನಿರ್ಧರಿಸಿರುವುದಾಗಿ ಕಿಂಗ್ಸ್ XI ಪಂಜಾಬ್ ಸಹ ಮಾಲಕ ನೆಸ್ ವಾಡಿಯಾ ಬುಧವಾರ (ನವೆಂಬರ್ 6) ತಿಳಿಸಿದ್ದಾರೆ. ಹೀಗಾಗಿ ಸ್ಟೈಲಿಷ್ ಪ್ಲೇಯರ್, ಕನ್ನಡಿಗ ಕೆಎಲ್ ರಾಹುಲ್‌ಗೆ ಕೆXIಪಿ ನಾಯಕತ್ವ ಲಭಿಸುವ ಸಾಧ್ಯತೆಯಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭೋತ್ಸವಕ್ಕೆ ಅಂತ್ಯ ಹಾಡಿದ ಬಿಸಿಸಿಐ!ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭೋತ್ಸವಕ್ಕೆ ಅಂತ್ಯ ಹಾಡಿದ ಬಿಸಿಸಿಐ!

ಅನುಭವಿ ಸ್ಪಿನ್ನರ್ ಅಶ್ವಿನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಡೆಲ್ಲಿ ಕ್ಯಾಪಿಟಲ್ಸ್ ಆಸಕ್ತಿ ತಾಳಿದೆ. ಹೀಗಾಗಿ ಕಿಂಗ್ಸ್ ಇಲೆವೆನ್ ಪಂಜಾಬ್‌ ತಂಡ ಕಳೆದ 2 ತಿಂಗಳಿನಿಂದಲೂ ಡೆಲ್ಲಿ ಜೊತೆ ಚೌಕಾಸಿ ನಡೆಸುತ್ತಿತ್ತು. ಆದರೆ ಈಗಿನ ಮಾಹಿತಿ ಪ್ರಕಾರ ದೆಹಲಿಯಲ್ಲದೆ ಇನ್ನೂ ಕೆಲ ತಂಡಗಳು ಅಶ್ವಿನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಆಸಕ್ತಿ ತಳೆದಿವೆ ಎನ್ನಲಾಗಿದೆ.

ಐಪಿಎಲ್‌ನಲ್ಲಿ ಅತೀ ಪ್ರಮುಖ ನಿರ್ಧಾರಕ್ಕೆ ಮುಂದಾಗಿದೆ ಆಡಳಿತ ಸಮಿತಿ!ಐಪಿಎಲ್‌ನಲ್ಲಿ ಅತೀ ಪ್ರಮುಖ ನಿರ್ಧಾರಕ್ಕೆ ಮುಂದಾಗಿದೆ ಆಡಳಿತ ಸಮಿತಿ!

'ನನಗೆ ಗೊತ್ತು. ಈ ವಿಚಾರದ ಬಗ್ಗೆ ಸಾಕಷ್ಟು ಗಾಳಿ ಸುದ್ದಿಗಳು ಕೇಳಿ ಬರುತ್ತಿವೆ. ಆದರೆ ನಾವೀಗಲೂ ಈ ಬಗ್ಗೆ ಚರ್ಚಿಸುತ್ತಿದ್ದೇವೆ. ಅಶ್ವಿನ್ ಉತ್ತಮ ಆಟಗಾರ, ಬಹುಮುಖ ಪ್ರತಿಭೆ. ಡೆಲ್ಲಿ ಸೇರಿದಂತೆ ಯಾವುದೇ ಇತರ ತಂಡ ಅಶ್ವಿನ್ ಅವರನ್ನು ತಮ್ಮ ಬಣಕ್ಕೆ ಸೇರಿಸಿಕೊಳ್ಳಬಹುದು. ನಾವಿದನ್ನು ಶೀಘ್ರ ತಿಳಿಸುತ್ತೇವೆ,' ಎಂದು ವಾಡಿಯಾ ಪಿಟಿಐಗೆ ತಿಳಿಸಿದ್ದಾರೆ.

ಮ್ಯಾಚ್ ಫಿಕ್ಸಿಂಗ್: ಬಳ್ಳಾರಿ ತಂಡದ ನಾಯಕ ಸಿಎಂ ಗೌತಮ್, ಅಬ್ರಾಬ್ ಕಾಜಿ ಅರೆಸ್ಟ್ಮ್ಯಾಚ್ ಫಿಕ್ಸಿಂಗ್: ಬಳ್ಳಾರಿ ತಂಡದ ನಾಯಕ ಸಿಎಂ ಗೌತಮ್, ಅಬ್ರಾಬ್ ಕಾಜಿ ಅರೆಸ್ಟ್

'ನಾವು (ಅಶ್ವಿನ್ ಮತ್ತು ಪಂಜಾಬ್) ಸೌಹಾರ್ದಯುತವಾಗಿ ಬೇರೆಯಾಗಲು ಬಯಸಿದ್ದೇವೆ. ಅಸ್ವಿನ್ ಮೌಲ್ಯಕ್ಕೆ ತಕ್ಕ ಬದಲಾವಣೆಗಾಗಿ ಕೆಲವೇ ತಂಡಗಳ ಜೊತೆ ಚರ್ಚಿಸುತ್ತಿದ್ದೇವೆ,' ಎಂದು ವಾಡಿಯಾ ಮಾಹಿತಿ ನೀಡಿದ್ದಾರೆ. ಕಳೆದ ಸೀಸನ್‌ನಲ್ಲಿ ಆಡಿದ 14 ಪಂದ್ಯಗಳಲ್ಲಿ 6 ಗೆಲುವುಗಳೊಂದಿಗೆ ಪಂಜಾಬ್ 6ನೇ ಸ್ಥಾನದಲ್ಲಿತ್ತು. ಪಂಜಾಬ್, ಡೆಲ್ಲಿ, ಬೆಂಗಳೂರು ಈ ತಂಡಗಳು ಇದುವರೆಗೂ ಐಪಿಎಲ್ ಟ್ರೋಫಿ ಗೆದ್ದಿಲ್ಲ.

Story first published: Thursday, November 7, 2019, 16:45 [IST]
Other articles published on Nov 7, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X