ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆXIಪಿ ಬ್ಯಾಟ್ಸ್‌ಮನ್ ಮನ್‌ದೀಪ್ ಸಿಂಗ್ ತಂದೆ ಹರ್ದೇವ್ ನಿಧನ

Kings XI Punjab batsman Mandeep Singh’s Father Hardev Singh Passes Away

ನವದೆಹಲಿ: ಕಿಂಗ್ಸ್ XI ಪಂಜಾಬ್ ಬ್ಯಾಟ್ಸ್‌ಮನ್ ಮನ್‌ದೀಪ್ ಸಿಂಗ್ ಅವರ ತಂದೆ ಹರ್ದೇವ್ ಸಿಂಗ್ ನಿಧನರಾಗಿದ್ದಾರೆ. ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಗುರುವಾರ (ಅಕ್ಟೋಬರ್ 22) ಕೊನೆಯುಸಿರೆಳೆದಿದ್ದಾರೆ.

ಜೆಫ್ರಿ ಬಾಯ್ಕಾಟ್ ಲಿಂಗಭೇದ ಟೀಕೆಗಳ ಬಗ್ಗೆ ಮೌನ ಮುರಿದ ಇಸಾ ಗುಹಜೆಫ್ರಿ ಬಾಯ್ಕಾಟ್ ಲಿಂಗಭೇದ ಟೀಕೆಗಳ ಬಗ್ಗೆ ಮೌನ ಮುರಿದ ಇಸಾ ಗುಹ

ಕಳೆದ ತಿಂಗಳು ಹರ್ದೇವ್ ಸಿಂಗ್ ಅವರ ಆರೋಗ್ಯದಲ್ಲಿ ತೀವ್ರ ಏರುಪೇರಾಗಿತ್ತು ಎಂದು ಪಂಜಾಬ್ ಕೇಸರಿ ಸ್ಪೋರ್ಟ್ಸ್ ವರದಿ ಮಾಡಿದೆ. ಆರಂಭದಲ್ಲಿ ಹರ್ದೇವ್ ಅವರನ್ನು ಮನೆಯ ಸಮೀಪದಲ್ಲಿ ದಾಖಲು ಮಾಡಿತ್ತು. ಆದರೆ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಮತ್ತೆ ಚಂಡೀಗಢದ ಆಸ್ಪತ್ರೆಗೆ ಸೇರಿಸಲಾಗಿತ್ತು.

2016ರಲ್ಲಿ ಜಿಂಬಾಬ್ವೆ ಪ್ರವಾಸ ಕೈಗೊಂಡಿದ್ದ ಮಗ ಮನ್‌ದೀಪ್‌ಗೆ ಹರ್ದೇವ್ ಸಿಂಗ್ ಪ್ರಮುಖ ಬೆಂಬಲ ನೀಡಿದ್ದರು. ಅದಕ್ಕೂ ಮುನ್ನ ಮನ್‌ದೀಪ್ ಸಿಂಗ್ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗದಿದ್ದಾಗ ಹರ್ದೇವ್, ತನ್ನ ಮಗ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವವರೆಗೂ ತಾನು ಕ್ರಿಕೆಟ್ ನೋಡುವುದಿಲ್ಲ ಎಂದು ಶಪಥ ಮಾಡಿದ್ದರು.

IPL ರೀತಿಯಲ್ಲಿ LPL ಯಶಸ್ಸು ಸಾಧಿಸಲು ಶ್ರೀಲಂಕಾ ಸರ್ಕಾರದ ಬೆಂಬಲIPL ರೀತಿಯಲ್ಲಿ LPL ಯಶಸ್ಸು ಸಾಧಿಸಲು ಶ್ರೀಲಂಕಾ ಸರ್ಕಾರದ ಬೆಂಬಲ

ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ ಸಲುವಾಗಿ ಮನ್‌ದೀಪ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿದ್ದು, ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಬಯೋ ಬಬಲ್‌ ಒಳಗಿದ್ದಾರೆ. ತಂದೆಯ ಅಂತ್ಯ ಸಂಸ್ಕಾರಕ್ಕೆ ಅವರಿಗೆ ಭಾರತಕ್ಕೆ ಬರಲು ಅವಕಾಶ ಮಾಡಿಕೊಡಲಾಗುತ್ತದೆಯೋ ಇಲ್ಲವೋ ಸ್ಪಷ್ಟಗೊಂಡಿಲ್ಲ.

Story first published: Friday, October 23, 2020, 10:21 [IST]
Other articles published on Oct 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X