ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ತಕ್ಷಣವೇ ಮುಂದೂಡಲು ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್‌ ಸಲಹೆ

Kirti Azad says IPL 2021 should be stopped on COVID-19 cases in IPL

ದೇಶದಲ್ಲಿ ಎರಡನೇ ಅಲೆಯ ಕೊರೊನಾ ವೈರಸ್ ಸೋಂಕು ಹೆಚ್ಚಾಗುತ್ತಿದ್ದಂತೆಯೇ ಸಾಕಷ್ಟು ಮುನ್ನೆಚ್ಚರಿಕೆಯೊಂದಿಗೆ ಐಪಿಎಲ್ ಆಯೋಜನೆಯನ್ನು ಮಾಡುವ ದೃಢ ನಿರ್ಧಾರವನ್ನು ಬಿಸಿಸಿಐ ತೆಗೆದುಕೊಂಡು ಮುಂದುವರಿದಿತ್ತು. ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಟೂರ್ನಿ ಲೀಗ್‌ಹಂತದ ಪ್ರಥಮಾರ್ಧ ಸಂಪೂರ್ಣವಾಗಿದೆ. ಆದರೆ ಈ ಸಂದರ್ಭದಲ್ಲಿ ಕೆಕೆಆರ್ ತಂಡದ ಇಬ್ಬರು ಸದಸ್ಯರು ಕೊರೊನಾ ವೈರಸ್‌ಗೆ ತುತ್ತಾಗಿರುವುದು ಟೂರ್ನಿಯಲ್ಲಿ ಆತಂಕಕ್ಕೆ ಕಾರಣವಾಗಿದೆ.

ಈ ಬೆಳವಣಿಗೆಯಿಂದಾಗಿ ಟೂರ್ನಿಯನ್ನು ತಕ್ಷಣವೇ ಸ್ಥಗಿತಗೊಳಿಸುವುದು ಸೂಕ್ತ ಎಂದು ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಈ ಕ್ಷಣಕ್ಕೆ ಅನ್ವಯವಾಗುವಂತೆ ಐಪಿಎಲ್‌ಅನ್ನು ಮುಂದೂಡಬೇಕು. ಆಟಗಾರರ ಸುರಕ್ಷತೆಗೆ ಪ್ರಥಮ ಆದ್ಯತೆಯನ್ನು ನೀಡಬೇಕು ಎಂದು ಕೀರ್ತಿ ಆಜಾದ್ ಹೇಳಿದ್ದಾರೆ.

ಐಪಿಎಲ್ 2021 : ಕೊಲ್ಕತ್ತಾ vs ಬೆಂಗಳೂರು ಇಂದಿನ ಪಂದ್ಯ ಮುಂದೂಡಿಕೆಐಪಿಎಲ್ 2021 : ಕೊಲ್ಕತ್ತಾ vs ಬೆಂಗಳೂರು ಇಂದಿನ ಪಂದ್ಯ ಮುಂದೂಡಿಕೆ

ದೇಶದಲ್ಲಿ ಕೊರೊನಾ ವೈರಸ್‌ನ ಪ್ರಕರಣಗಳು ಈ ಪ್ರಮಾಣದಲ್ಲಿ ಹೆಚ್ಚುತ್ತಿರುವಾಗ ಐಪಿಎಲ್ ಲೀಗ್‌ ಟೂರ್ನಮೆಂಟ್‌ಅನ್ನು ಮುಂದುವರಿಸುವ ಬಿಸಿಸಿಐನ ನಿರ್ಧಾರವನ್ನು ಕೀರ್ತಿ ಆಜಾದ್ ಪ್ರಶ್ನಿಸಿದ್ದಾರೆ. ಟೂರ್ನಿಗಿಂತ ಆಟಗಾರರ ಸುರಕ್ಷತೆಯನ್ನು ಬಿಸಿಸಿಐ ಗಮನದಲ್ಲಿಟ್ಟುಕೊಂಡು ಯೋಚನೆಯನ್ನು ನಡೆಸಬೇಕು ಎಂದು ಕೀರ್ತಿ ಆಜಾದ್ ಹೇಳಿದ್ದಾರೆ.

"ನಾನು ಎಲ್ಲಾ ಆಟಗಾರರು ಬಯೋಬಬಲ್‌ನಲ್ಲಿದ್ದು ಉಳಿದ ಎಲ್ಲರಿಗಿಂತಲೂ ಸುರಕ್ಷಿತವಾಗಿದ್ದು ಹಾಗೂ ದೇಶದ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸುತ್ತಿದ್ದಾರೆ ಎಂದು ಭಾವಿಸಿದ್ದೆ. ಆದರೆ ಬಯೋಬಬಲ್‌ನಲ್ಲಿದ್ದರೂ ಕೊರಿಒನಾ ವೈರಸ್‌ಗೆ ತುತ್ತಾಗಿರುವುದು ದುರದೃಷ್ಟಕರ. ಇದರರ್ಥ ಖಂಡಿತವಾಗಿಯೂ ಸುರಕ್ಷತೆಯಲ್ಲಿ ಲೋಪವಿದೆ. ಇದು ಭಯಹುಟ್ಟಿಸುವಂತಾ ಸಂಗತಿ. ತಕ್ಷಣವೇ ಟೂರ್ನಿಯನ್ನು ನಿಲ್ಲಿಸಬೇಕು" ಎಂದು ಕೀರ್ತಿ ಆಜಾದ್ ಪ್ರತಿಕ್ರಿಯಿಸಿದ್ದಾರೆ.

Story first published: Tuesday, May 4, 2021, 9:37 [IST]
Other articles published on May 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X