ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೌರವ್ ಗಂಗೂಲಿ ಕಾಲೆಳೆದ ಮಾಜಿ ಕ್ರಿಕೆಟರ್ ಕೀರ್ತಿ ಅಝಾದ್

Kirti Azad takes a dig at Sourav Ganguly while wishing him good health

ನವದೆಹಲಿ: ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಅಧ್ಯಕ್ಷ ಮತ್ತು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಇತ್ತೀಚೆಗೆ ಹೃದಯಾಘಾತಕ್ಕೊಳಗಾಗಿದ್ದರು. ಎದೆಬೇನೆ ಕಾಣಿಸಿಕೊಂಡ ದಾದಾ ಅವರನ್ನು ಕೋಲ್ಕತ್ತಾದ ವುಡ್‌ಲ್ಯಾಂಡ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಈಗ ದಾದಾ ಆರೋಗ್ಯ ಸ್ಥಿತಿ ಸಂಪೂರ್ಣ ಚೆನ್ನಾಗಿದೆ. ಗಂಗೂಲಿ ಸಾಮಾನ್ಯ ಸ್ಥಿತಿಗೆ ಬಂದಿದ್ದಾರೆ.

ಭಾರತ ತಂಡ ಜಾತಿ, ಮತ ಮೀರಿ ನಡೆದುಕೊಳ್ಳುತ್ತಿದೆ: ಶೋಯೆಬ್ ಅಖ್ತರ್ಭಾರತ ತಂಡ ಜಾತಿ, ಮತ ಮೀರಿ ನಡೆದುಕೊಳ್ಳುತ್ತಿದೆ: ಶೋಯೆಬ್ ಅಖ್ತರ್

ಶನಿವಾರ (ಜನವರಿ 2) ಜಿಮ್ ನಲ್ಲಿ ಅಭ್ಯಾಸ ಮಾಡುತ್ತಿದ್ದ ಗಂಗೂಲಿ ಹೃದಯ ನೋವಿಗೆ ತುತ್ತಾಗಿದ್ದರು. ಆ ಬಳಿಕ ಅವರನ್ನು ಕೋಲ್ಕತ್ತಾದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಆ್ಯಂಜಿಯೋಪ್ಲ್ಯಾಸ್ಟಿ ಚಿಕಿತ್ಸೆ ನಡೆದ ಬಳಿಕ ಗಂಗೂಲಿ ಯತಾ ಸ್ಥಿತಿಗೆ ಬಂದಿದ್ದರು.

ಸೌರವ್ ಗಂಗೂಲಿ ಟ್ರೋಲ್

ಸೌರವ್ ಗಂಗೂಲಿ ಟ್ರೋಲ್

ಗಂಗೂಲಿ ಆಸ್ಪತ್ರೆಗೆ ದಾಖಲಾಗುತ್ತಲೇ ಸಾವಿರಾರು ಅಭಿಮಾನಿಗಳು ಗಂಗೂಲಿ ಬೇಗ ಚೇತರಿಸಿಕೊಳ್ಳುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಶುಭ ಕೋರಿದ್ದರು. ಇನ್ನೂ ಕೆಲವರು ಶುಭ ಕೋರುತ್ತಲೇ ಗಂಗೂಲಿ ಕಾಲು ಎಳೆದಿದ್ದರು. ಭಾರತದ ಮಾಜಿ ಕ್ರಿಕೆಟರ್ ಕೀರ್ತಿ ಅಝಾದ್ ಕೂಡ ಗಂಗೂಲಿಗೆ ತರಲೆ ಮಾಡಿ ವಿಶ್ ಮಾಡಿದ್ದಾರೆ.

ಗಂಗೂಲಿ ಕಾಲೆಳೆಯಲು ಕಾರಣವಿದೆ

ಗಂಗೂಲಿ ಕಾಲೆಳೆಯಲು ಕಾರಣವಿದೆ

ನೆಟ್ಟಿಗರು ಗಂಗೂಲಿ ಕಾಲೆಳೆಯಲು ಕಾರಣವಿದೆ. ಹೃದಯಾಘಾತ ಸಂಭವಿಸುವ ಮುನ್ನ ಗಂಗೂಲಿ ಅವರು ಬಿಜೆಪಿ ಆಪ್ತ ಉದ್ಯಮಿ ಗೌತಮ್ ಅದಾನಿ ಒಡೆತನದ 'ಫಾರ್ಚ್ಯೂನ್' ಅಡುಗೆ ಎಣ್ಣೆಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲ, ನಿಮ್ಮ ಹೃದಯದ ಆರೋಗ್ಯಕ್ಕೆ ಈ ಎಣ್ಣೆ ಬಳಸಿ ಎಂದು ಜಾಹೀರಾತಿನಲ್ಲಿ ಗಂಗೂಲಿ ನಟಿಸಿದ್ದರು. ಈಗ ಗಂಗೂಲಿಗೇ ಹೃದಯಾಘಾತವಾಗಿದ್ದರಿಂದ ತಮಾಷೆಗೂ ಎಡೆ ಮಾಡಿಕೊಟ್ಟಿದೆ.

ಪರೀಕ್ಷಿಸಿದ ಉತ್ಪನ್ನಗಳಿಗೆ ಪ್ರಚಾರ ನೀಡಿ

ಗಂಗೂಲಿಗೆ ತರ್ಲೆ ಮಾಡಿ ಟ್ವೀಟ್ ಮಾಡಿರುವ ಮಾಜಿ ಕ್ರಿಕೆಟರ್, ಸದ್ಯ ಕಾಂಗ್ರೆಸ್ ಸದಸ್ಯ ಆಗಿರುವ ಕೀರ್ತಿ ಅಝಾದ್, 'ದಾದಾ ಸೌರವ್ ಗಂಗೂಲಿ ಬೇಗ ಚೇತರಿಸಿಕೊಳ್ಳಿ. ಯಾವಾಗಲೂ ಪರೀಕ್ಷಿಸಿದ, ಪ್ರಾಯೋಗಿಸಿದ ಉತ್ಪನ್ನಗಳಿಗೆ ಪ್ರಚಾರ ನೀಡಿ. ಯಾವಾಗಲೂ ಎಚ್ಚರಿಕೆಯಾಗಿರಿ, ಜಾಗೃತರಾಗಿರಿ. ನಿಮ್ಮನ್ನು ದೇವರು ಆಶೀರ್ವದಿಸಲಿ' ಎಂದು ಬರೆದುಕೊಂಡಿದ್ದಾರೆ.

ವಿಶ್ವಕಪ್‌ ತಂಡದಲ್ಲಿದ್ದ ಅಝಾದ್

ವಿಶ್ವಕಪ್‌ ತಂಡದಲ್ಲಿದ್ದ ಅಝಾದ್

ಸ್ಪಿನ್ ಬೌಲರ್ ಆಗಿದ್ದ ಕೀರ್ತಿ ಅಝಾದ್ ಅವರು ಟೀಮ್ ಇಂಡಿಯಾ ಪರ 10 ಟೆಸ್ಟ್‌ ಇನ್ನಿಂಗ್ಸ್‌ಗಳಲ್ಲಿ 3 ವಿಕೆಟ್, 11 ಏಕದಿನ ಇನ್ನಿಂಗ್ಸ್‌ಗಳಲ್ಲಿ 7 ವಿಕೆಟ್ ಪಡೆದಿದ್ದಾರೆ. ಅಷ್ಟೇ ಅಲ್ಲ, 1983ರಲ್ಲಿ ಭಾರತ ತಂಡ ಚೊಚ್ಚ ವಿಶ್ವಕಪ್‌ ಗೆದ್ದಾಗ ಆ ತಂಡದಲ್ಲಿ ಕೀರ್ತಿ ಅಝಾದ್ ಕೂಡ ಇದ್ದರು. ಅಂದ್ಹಾಗೆ, ಬಿಜೆಪಿಗೆ ಆಪ್ತವಾಗಿರುವ ಅದಾನಿಯ ಉತ್ಪನ್ನಗಳಿಗೆ ಕಣ್ಮುಚ್ಚಿ ಪ್ರಚಾರ ನೀಡಬೇಡಿ ಎಂಬರ್ಥದಲ್ಲಿ ಅಝಾದ್ ಅವರು ಗಂಗೂಲಿಯನ್ನು ಎಚ್ಚರಿಸಿದ್ದಾರೆ.

Story first published: Monday, January 4, 2021, 18:58 [IST]
Other articles published on Jan 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X