ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ನ್ಯೂಜಿಲೆಂಡರ್‌ ಆಫ್‌ ದಿ ಯಿಯರ್‌' ಪ್ರಶಸ್ತಿಗೆ ಬೆನ್‌ ಸ್ಟೋಕ್ಸ್‌ ನಾಮಾಂಕಿತ!

Kiwi heart-breaker Stokes nominated for New Zealander of the Year

ವೆಲ್ಲಿಂಗ್ಟನ್‌, ಜುಲೈ 19: ಕಳೆದ ಭಾನುವಾರ ಅಂತ್ಯಗೊಂಡ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್‌ ಪರ ಅಜೇಯ ಅರ್ಧಶತಕ ಮತ್ತು ಸೂಪರ್‌ ಓವರ್‌ನಲ್ಲಿ ಭರ್ಜರಿ ಬ್ಯಾಟಿಂಗ್‌ ನಡೆಸಿ ಪಂದ್ಯ ಶ್ರೇಷ್ಠ ಗೌರವ ಪಡೆದ ಬೆನ್‌ ಸ್ಟೋಕ್ಸ್‌ ಎದುರಾಳಿ ನ್ಯೂಜಿಲೆಂಡ್‌ ತಂಡದ ಕೋಟ್ಯಂತರ ಅಭಿಮಾನಿಗಳ ಹೃದಯವನ್ನು ನುಚ್ಚು ನೂಡು ಮಾಡಿದ್ದರು.

ಲಾರ್ಡ್ಸ್‌ ಪ್ರೇಕ್ಷಕರಿಗೆ 360 ಡಿಗ್ರಿ ದರ್ಶನ ಮಾಡಿಸಿದ ಎಬಿ ಡಿ'ವಿಲಿಯರ್ಸ್‌ಲಾರ್ಡ್ಸ್‌ ಪ್ರೇಕ್ಷಕರಿಗೆ 360 ಡಿಗ್ರಿ ದರ್ಶನ ಮಾಡಿಸಿದ ಎಬಿ ಡಿ'ವಿಲಿಯರ್ಸ್‌

ಇದೀಗ ಅದೇ ಬೆನ್‌ ಸ್ಟೋಕ್ಸ್‌ ಅವರನ್ನು "ನ್ಯೂಜಿಲೆಂಡರ್‌ ಆಫ್‌ ದಿ ಯಿಯರ್‌" ಪ್ರಶಸ್ತಿಗೆ ನಾಮಾಂಕಿತ ಮಾಡಲಾಗಿದೆ. ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ಸ್ಟಾರ್‌ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಅವರು ನ್ಯೂಜಿಲೆಂಡ್‌ ಸಂಜಾತ ಎಂಬುದು ವಿಶೇಷ.

ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಕಳೆದ ಭಾನುವಾರ ನಡೆದ ಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡದ ಪರ ಅಜೇಯ 84 ರನ್‌ಗಳನ್ನು ಚೆಚ್ಚಿದ್ದ ಸ್ಟೋಕ್ಸ್‌ ಬಳಿಕ ಸೂಪರ್‌ ಓವರ್‌ನಲ್ಲೂ ತಂಡಕ್ಕೆ 15 ರನ್‌ಗಳನ್ನು ತಂದುಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಅಂದಹಾಗೆ ಪಂದ್ಯ ನಿಗದಿಯ ಓವರ್‌ಗಳು ಮತ್ತು ಸೂಪರ್‌ ಓವರ್‌ ಎರಡರಲ್ಲೈ ಟೈ ಫಲಿತಾಂಶ ಹೊರಬಿದ್ದ ಹಿನ್ನೆಲೆಯಲ್ಲಿ, ಟೈ ಬ್ರೇಕರ್‌ ನಿಯಮಾನುಸಾರ ಒಟ್ಟು ಬೌಂಡರಿಗಳ ಗಳಿಕೆಯ ಆಧಾರದ ಮೇರೆ ಇಂಗ್ಲೆಂಡ್‌ಗೆ ಚಾಂಪಿಯನ್ಸ್‌ ಪಟ್ಟ ಒಲಿದಿತ್ತು.

ರಣಜಿ ಟ್ರೋಫಿ ಕ್ರಿಕೆಟ್‌ಗೆ ಕೊನೆಗೂ DRS ಕರುಣಿಸಿದ ಬಿಸಿಸಿಐರಣಜಿ ಟ್ರೋಫಿ ಕ್ರಿಕೆಟ್‌ಗೆ ಕೊನೆಗೂ DRS ಕರುಣಿಸಿದ ಬಿಸಿಸಿಐ

ಇದೀಗ ನ್ಯೂಜಿಲೆಂಡ್‌ ಸಂಜಾತ ಇಂಗ್ಲೆಂಡ್‌ ಆಟಗಾರನನ್ನು "ನ್ಯೂಜಿಲೆಂಡರ್‌ ಆಫ್‌ ದಿಯಿಯರ್‌" ಪ್ರಶಸ್ತಿಗೆ ಕಿವೀಸ್‌ ನಾಯಕ ಕೇನ್‌ ವಿಲಿಯಮ್ಸನ್‌, ನ್ಯೂಸ್‌ಟಾಕ್‌ ಝಡ್‌ಬಿಯ ನಿರೂಪಕ ಸೈಮನ್‌ ಬಾರ್ನೆಟ್‌, ಲೀಗ್‌ ಸ್ಟಾರ್‌ನ ಮನು ವತುವೇಯ್‌ ಹಾಗೂ ಕ್ರೈಸ್ಟ್‌ಚರ್ಚ್‌ ಮಸೀದಿ ಮೇಲೆ ನಡೆದ ಉಗ್ರರ ದಾಳಿಯಲ್ಲಿನ ಹೀರೊಗಳಾದ ಅಬ್ದುಲ್‌ ಅಝೀಝ್‌ ಅವರೊಟ್ಟಿಗೆ ನಾಮಾಂಕಿತ ಮಾಡಲಾಗಿದೆ ಎಂದು ನ್ಯೂಜಿಲೆಂಡ್‌ ಹೆರಲ್ಡ್‌ ವರದಿ ಮಾಡಿದೆ.

ಬಾಂಗ್ಲಾ ಪ್ರೀಮಿಯರ್‌ ಲೀಗ್‌ ಅಖಾಡಕ್ಕೆ ಆಸ್ಟ್ರೇಲಿಯಾದ ಸ್ಟಾರ್‌ ಆಲ್‌ರೌಂಡರ್‌ಬಾಂಗ್ಲಾ ಪ್ರೀಮಿಯರ್‌ ಲೀಗ್‌ ಅಖಾಡಕ್ಕೆ ಆಸ್ಟ್ರೇಲಿಯಾದ ಸ್ಟಾರ್‌ ಆಲ್‌ರೌಂಡರ್‌

ಅತ್ಯಂತ ನಾಟಕೀಯ ಅಂತ್ಯಕಂಡ 12ನೇ ಆವೃತ್ತಿಯ ವಿಶ್ವಕಪ್‌ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ ಕೇನ್‌ ವಿಲಿಯಮ್ಸನ್‌ ಮತ್ತು ಬೆನ್‌ ಸ್ಟೋಕ್ಸ್‌ ಪ್ರಶಸ್ತಿಗೆ ಹಲವು ಬಾರಿ ನಾಮಾಂಕಿತಗೊಂಡಿದ್ದಾರೆ ಎಂದು ಪ್ರಶಸ್ತಿಯ ಮುಖ್ಯ ತೀರ್ಪುಗಾರರಾದ ಕ್ಯಾಮರೂನ್‌ ಬೆನೆಟ್‌ ಹೇಳಿದ್ದಾರೆ. "ಸ್ಟೋಕ್ಸ್‌ ಬ್ಲ್ಯಾಕ್‌ ಕ್ಯಾಪ್ಸ್‌ ಪರ ಆಡದೇ ಇರಬಹುದು. ಅವರು ಕ್ರೈಸ್ಟ್‌ಚರ್ಚ್‌ನಲ್ಲಿ ಜನಿಸಿದವರು. ಅಲ್ಲದೇ ಅವರ ಪೋಷಕರೂ ನೆಲೆಸಿದ್ದಾರೆ ಕೂಡ," ಎಂದಿದ್ದಾರೆ.

ಅನೈತಿಕ ಸಂಬಂಧಗಳ ಕುರಿತಾಗಿ ಬಾಯ್ಬಿಟ್ಟ ಪಾಕ್‌ನ ಮಾಜಿ ಆಲ್‌ರೌಂಡರ್‌!ಅನೈತಿಕ ಸಂಬಂಧಗಳ ಕುರಿತಾಗಿ ಬಾಯ್ಬಿಟ್ಟ ಪಾಕ್‌ನ ಮಾಜಿ ಆಲ್‌ರೌಂಡರ್‌!

ಇದಕ್ಕೂ ಮುನ್ನ ಇಂಗ್ಲೆಂಡ್‌ನ ಪ್ರಧಾನ ಮಂತ್ರಿ ಅಭ್ಯರ್ಥಿ ಬೇರಿಸ್‌ ಜಾನ್ಸನ್‌ ತಾವು ಅಧಿಕಾರಕ್ಕೆ ಬಂದರೆ ಇಂಗ್ಲೆಂಡ್‌ಗೆ ಚೊಚ್ಚಲ ವಿಶ್ವಕಪ್‌ ಗೆದ್ದುಕೊಟ್ಟ ವಿಶ್ವಕಪ್‌ ಹೀರೊ ಬೆನ್‌ ಸ್ಟೋಕ್ಸ್‌ಗೆ 'ನೈಟ್‌ಹುಡ್‌' ಗೌರವ ನೀಡುವುದಾಗಿ ಘೋಷಿಸಿದ್ದರು.

ಇನ್ನು 'ನ್ಯೂಜಿಲೆಂಡರ್‌ ಆಫ್‌ ದಿ ಯಿಯರ್‌' ಪ್ರಶಸ್ತಿಗೆ ಸೆಪ್ಟೆಂಬರ್‌ 15ರವರೆಗೆ ನಾಮಾಂಕಿತ ನಡೆಯಲಿದೆ. ಡಿಸೆಂಬರ್‌ನಲ್ಲಿ 10 ಅಂತಿಮ ಹೆಸರುಗಳನ್ನು ಪ್ರಕಟಿಸಿ 2020ರ ಫೆಬ್ರವರಿ ಹೊತ್ತಿಗೆ ಪ್ರಶಸ್ತಿ ನೀಡಲಾಗುತ್ತದೆ.

Story first published: Friday, July 19, 2019, 15:37 [IST]
Other articles published on Jul 19, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X