ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

KKR ನಾಯಕತ್ವ ತ್ಯಜಿಸಿದ ಡಿಕೆ : ಗೌತಮ್ ಗಂಭೀರ್ ಟ್ವೀಟ್ ವೈರಲ್

KKR Former Captain Gautam Gambir Tweet Viral After DK Step Down As KKR Captain

ಐಪಿಎಲ್ 13ನೇ ಆವೃತ್ತಿಯ ಮಧ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕ ಸ್ಥಾನದಿಂದ ಕೆಳಗಿಳಿಯುವ ಮೂಲಕ ದಿನೇಶ್ ಕಾರ್ತಿಕ್ ಶುಕ್ರವಾರ ಭಾರಿ ಅಚ್ಚರಿ ಮೂಡಿಸಿದ್ದಾರೆ. "ಅವರ ಬ್ಯಾಟಿಂಗ್ ಬಗ್ಗೆ ಗಮನಹರಿಸುವ ಮತ್ತು ತಂಡಕ್ಕೆ ಹೆಚ್ಚಿನ ಕೊಡುಗೆ ನೀಡುವ ಉದ್ದೇಶದಿಂದ" ನಾಯಕ ಸ್ಥಾನದಿಂದ ಕೆಳಗಿಳಿಯಲು ಕಾರ್ತಿಕ್ ನಿರ್ಧರಿಸಿದರು.

ಕೆಕೆಆರ್‌ ಕಂಡ ಯಶಸ್ವಿ ನಾಯಕ ಗೌತಮ್ ಗಂಭೀರ್ ಅವರನ್ನು ಬದಲಿಸಿದ ಬಳಿಕ, ಕಾರ್ತಿಕ್ 2018 ರ ಋತುವಿನಿಂದ ತಂಡವನ್ನು ಮುನ್ನಡೆಸುತ್ತಿದ್ದರು. ತಮ್ಮ ಮೊದಲ ಋತುವಿನಲ್ಲಿ, ಅವರು ತಂಡವನ್ನು ಪ್ಲೇಆಫ್‌ಗೆ ಕರೆದೊಯ್ದರು. ಆದರೆ ಕಳೆದ ವರ್ಷ, ಕೆಕೆಆರ್ ಲೀಗ್ ಹಂತದಲ್ಲಿ ಮುಗ್ಗರಿಸಿತು ಮತ್ತು ಪ್ರಸ್ತುತ ಏಳು ಪಂದ್ಯಗಳಿಂದ ನಾಲ್ಕು ಜಯಗಳಿಸಿ ಪಾಯಿಂಟ್ಸ್ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಕೆಕೆಆರ್ ನಾಯಕತ್ವ ತ್ಯಜಿಸಿದ ದಿನೇಶ್ ಕಾರ್ತಿಕ್: ಇಯಾನ್ ಮಾರ್ಗನ್‌ ನೂತನ ನಾಯಕಕೆಕೆಆರ್ ನಾಯಕತ್ವ ತ್ಯಜಿಸಿದ ದಿನೇಶ್ ಕಾರ್ತಿಕ್: ಇಯಾನ್ ಮಾರ್ಗನ್‌ ನೂತನ ನಾಯಕ

ಐಪಿಎಲ್ 2020 ರಲ್ಲಿ ಕಾರ್ತಿಕ್ ಅವರು ಬ್ಯಾಟಿಂಗ್‌ನೊಂದಿಗೆ ಕಳಪೆ ಪ್ರದರ್ಶನಕ್ಕಾಗಿ ಟೀಕೆಯನ್ನು ಎದುರಿಸುತ್ತಿದ್ದರು. ಐಪಿಎಲ್ ಪ್ರಸಕ್ತ ಋತುವಿನಲ್ಲಿ ಇದುವರೆಗೆ 108 ರನ್‌ಗಳಿಸಿ 15.42 ಬ್ಯಾಟಿಂಗ್ ಸರಾಸರಿಯನ್ನು ಹೊಂದಿದ್ದಾರೆ. ಆ 108 ರನ್‌ಗಳಲ್ಲಿ 58 ರನ್‌ಗಳು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಬಂದವು. ಹೀಗಾಗಿ ಫಾರ್ಮ್‌ ವೈಫಲ್ಯದಿಂದಾಗಿ ಇಯಾನ್ ಮಾರ್ಗನ್ ಅವರನ್ನು ಕಾರ್ತಿಕ್ ಅವರ ಬದಲಿ ನಾಯಕ ಎಂದು ಹೆಸರಿಸಲಾಗಿದೆ. ಈ ಐಪಿಎಲ್ ಪ್ರಾರಂಭದಲ್ಲಿ ಇಂಗ್ಲೆಂಡ್ ನಾಯಕನನ್ನು ಕೆಕೆಆರ್ ಉಪನಾಯಕ ಎಂದು ಹೆಸರಿಸಲಾಯಿತು.

ಕಾರ್ತಿಕ್ ನಾಯಕತ್ವ ತ್ಯಜಿಸಿ ಮಾರ್ಗನ್‌ಗೆ ಹಸ್ತಾಂತರಿಸಿದ ಸುದ್ದಿ ಬಹಿರಂಗವಾದ ಕೆಲವೇ ನಿಮಿಷಗಳಲ್ಲಿ ಗೌತಮ್ ಗಂಭೀರ್ ರಹಸ್ಯವಾದ ಟ್ವೀಟ್ ಪೋಸ್ಟ್ ಮಾಡಿದ್ದಾರೆ. ಕೆಕೆಆರ್ ತಂಡವನ್ನ ಎರಡು ಬಾರಿ ಚಾಂಪಿಯನ್ ಮಾಡಿರುವ ಗೌತಿ ಅವರು ಲೀಗ್‌ಗಳಲ್ಲಿ ಅತ್ಯಂತ ಯಶಸ್ವಿ ತಂಡವನ್ನಾಗಿ ಮಾಡಿದ್ದರು.

ಗೌತಮ್ ಗಂಭೀರ್ ಅವರು ನಿರ್ಗಮಿಸಿದ ನಂತರ ಕೆಕೆಆರ್ ತಂಡವು ಅಷ್ಟೇನೂ ಪ್ರಭಾವಿತರಾಗಿಲ್ಲ ಎಂದು ತೋರುತ್ತಿದೆ. ಮಾಜಿ ಕೆಕೆಆರ್ ನಾಯಕ ತನ್ನ ಟ್ವೀಟ್ ಮೂಲಕ ಅವರು ಏನು ಅರ್ಥೈಸಿದ್ದಾರೆಂದು ವಿವರಿಸಲಿಲ್ಲ. ಆದರೆ ಟ್ವೀಟ್‌ ನೋಡುಗರ ಹುಬ್ಬುಗಳನ್ನು ಏರಿಸುವಂತೆ ಮಾಡಿದೆ.

ನಾಯಕತ್ವವನ್ನು ತ್ಯಜಿಸುವ ನಿರ್ಧಾರವನ್ನು ಕಾರ್ತಿಕ್ ತೆಗೆದುಕೊಂಡ ಕೂಡಲೇ, ಗೌತಮ್ ''ಪರಂಪರೆಯನ್ನು ನಿರ್ಮಿಸಲು ಇದು ವರ್ಷಗಳನ್ನು ತೆಗೆದುಕೊಳ್ಳುತ್ತದೆ ಆದರೆ ಅದನ್ನು ನಾಶಮಾಡಲು ಒಂದು ನಿಮಿಷ ತೆಗೆದುಕೊಳ್ಳುತ್ತದೆ'' ಎಂದು ಸುಲಭವಾಗಿ ಅರ್ಥವಾಗದ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಈ ಮೂಲಕ ಗಂಭೀರ್ ದಿನೇಶ್ ಕಾರ್ತಿಕ್‌ಗೆ ಪರೋಕ್ಷವಾಗಿ ಟಾಂಗ್ ಕೊಟ್ರಾ, ಅಥವಾ ಫ್ರಾಂಚೈಸಿ ಮಾಲೀಕರನ್ನು ಟೀಕಿಸಿದ್ರಾ ಎಂಬುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ

Story first published: Friday, October 16, 2020, 16:26 [IST]
Other articles published on Oct 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X