ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೋಲ್ಕತ್ತಾ ನೈಟ್ ರೈಡರ್ಸ್ ಆಟಗಾರ ಕ್ರಿಸ್‌ ಗ್ರೀನ್‌ ಬೌಲಿಂಗ್‌ನಿಂದ ನಿಷೇಧ!

Chris Green 'gutted' by Big Bash ban for illegal bowling | CHRIS GREEN | BIGBASH | ONEINDIA KANNADA
KKRs new signing Chris Green banned for illegal action at BBL

ಬೆಂಗಳೂರು, ಜನವರಿ 8: ಈ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಟಗಾರರ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಪಾಲಾಗಿದ್ದ ಆಸ್ಟ್ರೇಲಿಯಾ ಆಲ್ ರೌಂಡರ್ ಕ್ರಿಸ್‌ ಗ್ರೀನ್, ಬೌಲಿಂಗ್‌ನಿಂದ 3 ತಿಂಗಳ ಕಾಲ ನಿಷೇಧಿಸಲ್ಪಟ್ಟಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಾ ಗ್ರೀನ್‌ಗೆ ನಿಷೇಧ ಶಿಕ್ಷೆ ವಿಧಿಸಿದೆ.

ಐಪಿಎಲ್ 2020ರ ಫೈನಲ್ ಪಂದ್ಯದ ದಿನಾಂಕ, ಸಮಯ ಪ್ರಕಟ!ಐಪಿಎಲ್ 2020ರ ಫೈನಲ್ ಪಂದ್ಯದ ದಿನಾಂಕ, ಸಮಯ ಪ್ರಕಟ!

ಬಿಗ್‌ ಬ್ಯಾಷ್‌ ಲೀಗ್‌ (ಬಿಬಿಎಲ್‌)ನಲ್ಲಿ ಸಿಡ್ನಿ ಥಂಡರ್ಸ್ ಪರ ಆಡುತ್ತಿದ್ದಾಗ ಕ್ರಿಸ್‌ ಗ್ರೀನ್‌ ಅವರ ಬೌಲಿಂಗ್ ಆ್ಯಕ್ಷನ್ ಅನುಮಾನಾಸ್ಪದವಾಗಿದೆ ಎಂದು ವರದಿಯಾಗಿತ್ತು. ವರದಿಯ ಬೆನ್ನಲ್ಲೇ ಗ್ರೀನ್‌ ಅವರನ್ನು ಬೌಲಿಂಗ್‌ನಿಂದ ನಿಷೇಧಿಸಲಾಗಿದೆ. ಕಳೆದ ವಾರ ಬಿಬಿಎಲ್‌ನಲ್ಲಿ ಮೆಲ್ಬರ್ನ್ ಸ್ಟಾರ್ಸ್ ವಿರುದ್ಧ ಆಡುತ್ತಿದ್ದಾಗ ಕ್ರಿಸ್ ಬೌಲಿಂಗ್‌ ಆ್ಯಕ್ಷನ್‌ನ ಬಗ್ಗೆ ಆರೋಪ ಕೇಳಿಬಂದಿತ್ತು.

ಲಕ್ಷ್ಮಣ್‌ ನೆಚ್ಚಿನ ಭಾರತ ಟಿ20 ವಿಶ್ವಕಪ್‌ ತಂಡದಲ್ಲಿ ಧೋನಿ, ಧವನ್‌ ಇಲ್ಲ!ಲಕ್ಷ್ಮಣ್‌ ನೆಚ್ಚಿನ ಭಾರತ ಟಿ20 ವಿಶ್ವಕಪ್‌ ತಂಡದಲ್ಲಿ ಧೋನಿ, ಧವನ್‌ ಇಲ್ಲ!

ಹರಾಜಿನ ವೇಳೆ 26ರ ಹರೆಯದ ಅನ್‌ಕ್ಯಾಪ್ಡ್‌ ಆಟಗಾರ ಕ್ರಿಸ್‌ ಗ್ರೀನ್‌ ಅವರನ್ನು ಮೂಲಬೆಲೆಯಾದ 20 ಲಕ್ಷ ರೂ.ಗೆ ಮಾಜಿ ಚಾಂಪಿಯನ್ಸ್ ಕೆಕೆಆರ್ ಖರೀದಿಸಿತ್ತು. ಇನ್ನು 3 ತಿಂಗಳ ಕಾಲ ಗ್ರೀನ್ ಬೌಲಿಂಗ್ ಮಾಡುವಂತಿಲ್ಲವಾದ್ದರಿಂದ ಐಪಿಎಲ್ ಆರಂಭವಾಗುವ ಮಾರ್ಚ್ 29ರ ವೇಳೆ ಲಿನ್‌ಗೆ ಆಡಲು ಅವಕಾಶ ಸಿಗಲಿದೆಯೋ ಇಲ್ಲವೋ ತಿಳಿದುಬಂದಿಲ್ಲ.

ಎರಡನೇ ಟಿ20: ಭಾರತದ ಗೆಲುವಿಗೆ ಕಾರಣವಾದ ಅಂಶಗಳುಎರಡನೇ ಟಿ20: ಭಾರತದ ಗೆಲುವಿಗೆ ಕಾರಣವಾದ ಅಂಶಗಳು

ಐಪಿಎಲ್‌ನಲ್ಲಿ ಪಾಲ್ಗೊಳ್ಳಬೇಕಾದರೆ ಐಪಿಎಲ್‌ ಗವರ್ನಿಂಗ್ ಕೌನ್ಸಿಲ್‌ನಿಂದ ಕ್ರಿಸ್‌ ಗ್ರೀನ್‌ಗೆ ಅನುಮೋದನೆ ಲಭಿಸಬೇಕು. ಆದರೆ ಗ್ರೀನ್‌ ನಿಷೇಧ ಮಾರ್ಚ್ ತಿಂಗಳವರೆಗೂ ಇರುವುದರಿಂದ ಆಡಲು ಅವಕಾಶ ಸಿಗಲಿದೆಯೋ ಇಲ್ಲವೋ ಎಂಬುದು ಸ್ಪಷ್ಟಗೊಂಡಿಲ್ಲ. ಆದರೆ ಗ್ರೀನ್‌ ಐಪಿಎಲ್‌ನಲ್ಲಿ ಆಡುವ ಸಾಧ್ಯತೆ ಹೆಚ್ಚಿದೆ.

Story first published: Wednesday, January 8, 2020, 19:55 [IST]
Other articles published on Jan 8, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X