ಅದ್ಭುತ ಕ್ಯಾಚ್ ಮೂಲಕ ವಿರಾಟ್‌ ಕೊಹ್ಲಿ ಔಟ್ ಮಾಡಿದ ತ್ರಿಪಾಠಿ: ವಿಡಿಯೋ

ಚೆನ್ನೈ: ಕೋಲ್ಕತ್ತಾ ನೈಟ್ ರೈಡರ್ಸ್‌ನ ರಾಹುಲ್ ತ್ರಿಪಾಠಿ ಅದ್ಭುತ ಕ್ಯಾಚ್‌ ಪಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ. ಸೊಗಸಾದ ಕ್ಯಾಚ್ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿಯನ್ನು ಪೆವಿಲಿಯನ್‌ಗೆ ಅಟ್ಟಿರುವ ವಿಡಿಯೋ ಇದು.

ಐಪಿಎಲ್ 2021: ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳುಳ್ಳ ವಿಶೇಷ ಪುಟದ ಲಿಂಕ್

ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಭಾನುವಾರ (ಏಪ್ರಿಲ್ 18) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 10ನೇ ಪಂದ್ಯದಲ್ಲಿ ಕೋಲ್ಕತ್ತಾ ಮತ್ತು ಬೆಂಗಳೂರು ಮುಖಾಮುಖಿಯಾಗಿದ್ದವು. ಈ ವೇಳೆ ರಾಹುಲ್ ತ್ರಿಪಾಠಿ ಉತ್ತಮ ಕ್ಯಾಚ್‌ಗಾಗಿ ಗಮನ ಸೆಳೆದರು.

ಆರಂಭಿಕರಾಗಿ ಬಂದಿದ್ದ ವಿರಾಟ್ ಕೊಹ್ಲಿ, ವರುಣ್ ಚಕ್ರವರ್ತಿ ಅವರ 1.2ನೇ ಓವರ್‌ನಲ್ಲಿ ತ್ರಿಪಾಠಿಗೆ ಕ್ಯಾಚಿತ್ತು ಕೇವಲ 5 ರನ್ ಬಾರಿಸಿ ನಿರ್ಗಮಿಸಿದರು. ಕೊಹ್ಲಿ ಬ್ಯಾಟ್ ತಾಗಿದ್ದ ಚೆಂಡು ಓವರ್‌ ಕವರ್‌ನತ್ತ ಸಾಗಿತ್ತು. ಅಲ್ಲಿ ಓಡಿ ಬಂದ ತ್ರಿಪಾಠಿ ಡೈ ಹಾರಿ ಕ್ಯಾಚ್ ಪಡೆದುಕೊಂಡರು.

ಐಪಿಎಲ್: ಎಬಿ ಡಿ ವಿಲಿಯರ್ಸ್ ಸ್ಫೋಟಕ ಬ್ಯಾಟಿಂಗ್‌, 39ನೇ ಅರ್ಧ ಶತಕ

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಆರ್‌ಸಿಬಿ, ಎಬಿ ಡಿ ವಿಲಿಯರ್ಸ್ 76 (34), ಗ್ಲೆನ್ ಮ್ಯಾಕ್ಸ್‌ವೆಲ್ 76 (34), ದೇವದತ್ ಪಡಿಕ್ಕಲ್ 25 ರನ್‌ ನೊಂದಿಗೆ ಆರ್‌ಸಿಬಿ 20 ಓವರ್‌ಗೆ 4 ವಿಕೆಟ್ ಕಳೆದು 204 ರನ್ ಗಳಿಸಿತ್ತು. ತ್ರಿಪಾಠಿ 20 ಎಸೆತಗಳಲ್ಲಿ 25 ರನ್ ಕೊಡುಗೆ ನೀಡಿದ್ದರು. ಆದರೆ ಕೆಕೆಆರ್‌ ಪಂದ್ಯವನ್ನು ಸೋತಿತು.

For Quick Alerts
ALLOW NOTIFICATIONS
For Daily Alerts
Story first published: Sunday, April 18, 2021, 19:42 [IST]
Other articles published on Apr 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X