ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆಕೆಆರ್ ಷೇರು ಅವ್ಯವಹಾರ, ಶಾರುಖ್ ಗೆ ಸಮನ್ಸ್

By Mahesh

ಕೋಲ್ಕತ್ತಾ, ಅ.27: ಇಂಡಿಯನ್ ಪ್ರಿಮಿಯರ್ ಲೀಗ್ ನ ಪ್ರಮುಖ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ನ ಸಹ ಮಾಲೀಕತ್ವ ಹೊಂದಿರುವ ನಟ ಶಾರುಖ್ ಖಾನ್ ಅವರಿಗೆ ಮತ್ತೆ ಶಾಕ್ ನೀಡಲಾಗಿದೆ. ಕೆಕೆಆರ್ ಷೇರು ಅವ್ಯವಹಾರ ಪ್ರಕರಣದಲ್ಲಿ ಶಾರುಖ್ ಹಾಗೂ ಜೂಹಿ ಚಾವ್ಲಾ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ.

ಕಾನೂನಿನಡಿಯಲ್ಲಿ ರೆಡ್ ಚಿಲ್ಲೀಸ್ ಎಂಟರ್ ಟೈನ್ಮೆಂಟ್ ಪ್ರೈ ಲಿ ಅಂಗವಾದ ಕೋಲ್ಕತ್ತಾ ನೈಟ್ ರೈಡರ್ಸ್ ಸ್ಫೋರ್ಟ್ಸ್ ಪ್ರೈ ಲಿ ಷೇರು ಮಾರಾಟ ಮಾಡದೆ ಅಕ್ರಮ ಎಸಗಿದ್ದಾರೆ. ಹೀಗಾಗಿ ಶಾರುಖ್ ಖಾನ್, ಜೂಹಿ ಚಾವ್ಲಾ ಹಾಗೂ ಜೇ ಮೆಹ್ತಾ ಅವರಿಗೆ ಸಮನ್ಸ್ ಜಾರಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹೇಳಿದ್ದಾರೆ.

KKR Share Sale violation :Shahrukh Khan summoned by ED

100 ಕೋಟಿ ಅವ್ಯವಹಾರ: ಕೆಕೆಆರ್ ಷೇರುಗಳನ್ನು ಜೂಹಿ ಚಾವ್ಲಾ ಪತಿ ಜೇ ಮೆಹ್ತಾ ಅವರಿಗೆ ಪರಭಾರೆ ಮಾಡುವಾಗ ವಿದೇಶಿ ವಿನಿಮಯ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಇದರಿಂಡ 100 ಕೋಟಿ ರು.ಗೂ ಅಧಿಕ ನಷ್ಟವಾಗಿದೆ. ಈ ಬಗ್ಗೆ ಕೆಕೆಆರ್ ತಂಡಕ್ಕೆ ಮೂರು ಬಾರಿ ಸಮನ್ಸ್ ಜಾರಿ ಮಾಡಲಾಗಿದೆ. Foreign Exchange Management Act (FEMA) ಕಾಯ್ದೆ ಉಲ್ಲಂಘನೆ ಅಡಿಯಲ್ಲಿ ಕೆಕೆಆರ್ ಮಾಲೀಕರ ವಿರುದ್ಧ ಕ್ರಮ ಜರುಗಿಸಲು ಜಾರಿ ನಿರ್ದೇಶನಾಲಯ ಮುಂದಾಗಿದೆ.

2008-09ರಿಂದ ಈ ಪ್ರಕರಣದ ತನಿಖೆ ನಡೆಯುತ್ತಿದ್ದರೂ ಪ್ರಗತಿ ಕಂಡಿರಲಿಲ್ಲ. 2016ರ ಐಪಿಎಲ್ ಸೀಸನ್ ಆರಂಭಕ್ಕೂ ಮುನ್ನ ಸಮನ್ಸ್ ಜಾರಿ ಮಾಡಿರುವುದು ಅಚ್ಚರಿ ವಿಷಯ ಎಂದು ಶಾರುಖ್ ಖಾನ್ ಪರ ವಕೀಲರು ಹೇಳಿದ್ದಾರೆ. ಈಗ ನವೆಂಬರ್ ಮೊದಲ ವಾರದಲ್ಲಿ ಜಾರಿ ನಿರ್ದೇಶನಾಲಯ ಕಚೇರಿಗೆ ಶಾರುಖ್ ಖಾನ್ ಅವರು ಖುದ್ದು ಹಾಜರಾಗಿ ಈ ಬಗ್ಗೆ ವಿವರಣೆ ನೀಡಬೇಕಾಗಿದೆ.

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X