ಅಬುಧಾಬಿಯಲ್ಲಿ ಬುಧವಾರ ಆರ್ಸಿಬಿ ಭರ್ಜರಿ ಗೆಲುವು ದಾಖಲಿಸಿದ ಬಳಿಕ ತಂಡದ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಮೂರು ವರ್ಷಗಳ ಹಿಂದೆ ಕೆಕೆಆರ್ ವಿರುದ್ಧ ಅನುಭವಿಸಿದ ಹೀನಾಯ ಸೋಲಿಗೆ ಸೇಡು ತೀರಿಸಿಕೊಂಡಿತು ಆರ್ಸಿಬಿ.
2017ರಲ್ಲಿ ಕೆಕೆಆರ್ ವಿರುದ್ಧ ಆರ್ಸಿಬಿ ಕೇವಲ 49ರನ್ಗಳಿಗೆ ಆಲೌಟ್ ಆಗಿ ಭಾರೀ ಮುಖಭಂಗ ಅನುಭವಿಸಿತ್ತು. ಆದರೆ ಸರಿಯಾಗಿ ಮೂರು ವರ್ಷಗಳ ಬಳಿಕ ಕೊಹ್ಲಿ ಪಡೆ ಕೆಕೆಆರ್ ತಂಡವನ್ನ ಅಷ್ಟೇ ಹೀನಾಯವಾಗಿ ಸೋಲಿಸಿದೆ.
ಎಬಿಡಿ, ಕೊಹ್ಲಿ ಜೊತೆಗಿನ ಅನುಭವ ಹಂಚಿಕೊಂಡ ಗುರ್ಕೀರತ್ ಸಿಂಗ್
ನಿಗದಿತ 20 ಓವರ್ಗಳಲ್ಲಿ ಕೆಕೆಆರ್ 8 ವಿಕೆಟ್ ನಷ್ಟಕ್ಕೆ ಗಳಿಸಿದ್ದು ಕೇವಲ 84ರನ್ಗಳು. ಇದು ಐಪಿಎಲ್ ಇತಿಹಾಸದಲ್ಲಿ ಪೂರ್ಣ 20 ಓವರ್ ಆಡಿದ ತಂಡ ಆಲ್ಔಟ್ ಆಗದೇ ಗಳಿಸಿದ ಕನಿಷ್ಠ ಮೊತ್ತವಾಗಿದೆ. ಈ ಗುರಿಯನ್ನ ಆರ್ಸಿಬಿ 39 ಎಸೆತಗಳು ಬಾಕಿ ಇರುವಂತೆಯೇ ತಲುಪಿತು.
ಪಂದ್ಯ ಗೆದ್ದ ಬಳಿಕ ಆರ್ಸಿಬಿ ಡ್ರೆಸ್ಸಿಂಗ್ ರೂಂನಲ್ಲಿ ಸಂಭ್ರಮ ಕಳೆಕಟ್ಟಿತ್ತು. ಏಕೆಂದರೆ ಕೆಕೆಆರ್ ವಿರುದ್ಧ ಇದು ಸಾಧಾರಣ ಗೆಲುವಾಗಿರಲಿಲ್ಲ. ಈ ಸೀಸನ್ನಲ್ಲಿ ಗಳಿಸಿದ ಬೃಹತ್ ಜಯ ಇದಾಗಿದೆ. ಹೀಗಾಗಿ ಪ್ರತಿಯೊಬ್ಬ ಆಟಗಾರರು ಗೆಲುವಿನ ಕುರಿತು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದು, ಈ ಕುರಿತಾದ ವೀಡಿಯೋವನ್ನು ಆರ್ಸಿಬಿ ತನ್ನ ಅಧಿಕೃತ ಯೂಟ್ಯೂಬ್ ಅಕೌಂಟ್ನಲ್ಲಿ ಪೋಸ್ಟ್ ಮಾಡಿದೆ.