ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಜಡೇಜಾ ರೀತಿ ಕೆಎಲ್ ರಾಹುಲ್ ಮತ್ತು ರಶೀದ್ ಖಾನ್ 1 ವರ್ಷ ಐಪಿಎಲ್‌ನಿಂದ ಬ್ಯಾನ್!?

KL Rahul and Rashid Khan could get prohibited from IPL 2022 says Report

ಈ ಬಾರಿಯ ಐಪಿಎಲ್ ಟೂರ್ನಿ ಭಾರತದಲ್ಲಿ ಆರಂಭವಾಗಿ ಕೊರೋನಾವೈರಸ್ ಕಾರಣದಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡ ನಂತರ ಯುಎಇಗೆ ಸ್ಥಳಾಂತರಿಸಲ್ಪಟ್ಟು ಸಾಕಷ್ಟು ತೊಂದರೆಗಳನ್ನು ಎದುರಿಸಿ ಕೊನೆಗೂ ಯಶಸ್ವಿಯಾಗಿ ಮುಕ್ತಾಯವನ್ನು ಕಂಡಿತು. ಹೀಗೆ ಟೂರ್ನಿ ಆಯೋಜನೆಯ ಕುರಿತಾಗಿ ಸಾಕಷ್ಟು ಅಡೆತಡೆಗಳನ್ನು ಎದುರಿಸಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಸಾಕಷ್ಟು ಟೀಕೆಗಳಿಗೆ ಒಳಗಾಗಿತ್ತು.

ಐಪಿಎಲ್ 2022 ರಿಟೆನ್ಷನ್: ಆರ್‌ಸಿಬಿಯ ಈ ಇಬ್ಬರು ಆಟಗಾರರು ಮಾತ್ರ ಸೇಫ್, ಉಳಿದವರ ಕಥೆ?ಐಪಿಎಲ್ 2022 ರಿಟೆನ್ಷನ್: ಆರ್‌ಸಿಬಿಯ ಈ ಇಬ್ಬರು ಆಟಗಾರರು ಮಾತ್ರ ಸೇಫ್, ಉಳಿದವರ ಕಥೆ?

ಟೂರ್ನಿ ನಡೆಯುವ ವಿಚಾರವಾಗಿ ವಿವಾದಕ್ಕೆ ಒಳಗಾಗಿದ್ದ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆಟಗಾರರು ಮತ್ತು ಫ್ರಾಂಚೈಸಿಗಳ ನಡುವಿನ ಮನಸ್ತಾಪದಿಂದಲೂ ಸಹ ಭಾರೀ ದೊಡ್ಡ ಮಟ್ಟದ ವಿವಾದಕ್ಕೆ ಒಳಗಾಗಿತ್ತು. ಹೌದು, ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ನಡೆಯುವ ವೇಳೆಗೆ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ತಂಡದ ನಾಯಕನಾಗಿದ್ದ ಡೇವಿಡ್ ವಾರ್ನರ್ ಅವರನ್ನು ನಾಯಕ ಸ್ಥಾನದಿಂದ ಕೆಳಗಿಳಿಸಿತ್ತು ಹಾಗೂ ಕೆಲ ಪಂದ್ಯಗಳು ಕಳೆದ ನಂತರ ತಂದದಿಂದಲೂ ಸಹ ಡೇವಿಡ್ ವಾರ್ನರ್ ಅವರನ್ನು ಹೊರಹಾಕಿತ್ತು. ಹೀಗೆ ಫ್ರಾಂಚೈಸಿ ಮತ್ತು ಡೇವಿಡ್ ವಾರ್ನರ್ ನಡುವೆ ಉಂಟಾಗಿದ್ದ ಮನಸ್ತಾಪದಿಂದ ನಂತರ ನಡೆದ ಯಾವುದೇ ಪಂದ್ಯದಲ್ಲಿಯೂ ಕೂಡ ಡೇವಿಡ್ ವಾರ್ನರ್ ಅವರಿಗೆ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಆಡುವ ಅವಕಾಶವನ್ನು ನೀಡಲಿಲ್ಲ ಮತ್ತು ತಂಡದವರ ಜೊತೆ ಪ್ರಯಾಣ ಮಾಡುವುದಕ್ಕೂ ಕೂಡಾ ಬಿಟ್ಟಿರಲಿಲ್ಲ.

ಐಪಿಎಲ್: ಧೋನಿ ಬಿಟ್ಟು ಈ 4 ಪ್ರಮುಖ ಆಟಗಾರರನ್ನು ಸಿಎಸ್‌ಕೆ ಉಳಿಸಿಕೊಳ್ಳಲಿದೆ ಎಂದ ಮಾಜಿ ಕ್ರಿಕೆಟಿಗ!ಐಪಿಎಲ್: ಧೋನಿ ಬಿಟ್ಟು ಈ 4 ಪ್ರಮುಖ ಆಟಗಾರರನ್ನು ಸಿಎಸ್‌ಕೆ ಉಳಿಸಿಕೊಳ್ಳಲಿದೆ ಎಂದ ಮಾಜಿ ಕ್ರಿಕೆಟಿಗ!

ಹೀಗೆ ಟೂರ್ನಿ ನಡೆಯುವ ವೇಳೆ ಫ್ರಾಂಚೈಸಿ ಮತ್ತು ಆಟಗಾರರ ನಡುವಿನ ಕಿತ್ತಾಟದಿಂದ ಭಾರೀ ವಿವಾದಕ್ಕೆ ಕಾರಣವಾಗಿದ್ದ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮುಗಿದ ನಂತರವೂ ಕೂಡ ಫ್ರಾಂಚೈಸಿ ಮತ್ತು ಆಟಗಾರರ ನಡುವಿನ ಕಿತ್ತಾಟಕ್ಕೆ ಮತ್ತೊಮ್ಮೆ ಸಾಕ್ಷಿಯಾಗಿದೆ. ಹೌದು, ಐಪಿಎಲ್ ರಿಟೆನ್ಷನ್ ಕುರಿತಾಗಿ ಪಂಜಾಬ್ ಕಿಂಗ್ಸ್ ತಂಡದ ಆಟಗಾರ ಕೆಎಲ್ ರಾಹುಲ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡದ ಆಟಗಾರ ರಶೀದ್ ಖಾನ್ ನಡೆದುಕೊಂಡಿರುವ ರೀತಿಯಿಂದಾಗಿ ತಮ್ಮ ಫ್ರಾಂಚೈಸಿಗಳ ಜೊತೆ ಬೇಡವಾಗಿದ್ದ ವಿವಾದವನ್ನು ಸೃಷ್ಟಿಸಿಕೊಂಡಿದ್ದಾರೆ. ಅಷ್ಟಕ್ಕೂ ಪಂಜಾಬ್ ಕಿಂಗ್ಸ್ ಮತ್ತು ಕೆಎಲ್ ರಾಹುಲ್ ನಡುವೆ ಹಾಗೂ ಸನ್ ರೈಸರ್ಸ್ ಹೈದರಾಬಾದ್ ಮತ್ತು ರಶೀದ್ ಖಾನ್ ನಡುವೆ ಎದ್ದಿರುವ ವಿವಾದವೇನು ಎಂಬುದರ ಕುರಿತ ವಿವರ ಈ ಕೆಳಕಂಡಂತಿದೆ.

ರಿಟೆನ್ಷನ್ ನಡೆಯುವುದಕ್ಕೂ ಮುನ್ನವೇ ಬೇರೆ ಫ್ರಾಂಚೈಸಿಯೊಂದಿಗೆ ರಾಹುಲ್ ಮತ್ತು ರಶೀದ್ ಖಾನ್ ಸಂಪರ್ಕ

ರಿಟೆನ್ಷನ್ ನಡೆಯುವುದಕ್ಕೂ ಮುನ್ನವೇ ಬೇರೆ ಫ್ರಾಂಚೈಸಿಯೊಂದಿಗೆ ರಾಹುಲ್ ಮತ್ತು ರಶೀದ್ ಖಾನ್ ಸಂಪರ್ಕ

ಪ್ರಸ್ತುತ ಅಸ್ತಿತ್ವದಲ್ಲಿರುವ 8 ಐಪಿಎಲ್ ಫ್ರಾಂಚೈಸಿಗಳಿಗೆ ಬಿಸಿಸಿಐ ರಿಟೆನ್ಷನ್ ಸಲುವಾಗಿ 4 ಆಟಗಾರರನ್ನು ತಂಡದಲ್ಲಿಯೇ ಉಳಿಸಿಕೊಳ್ಳಲು ಅನುಮತಿಯನ್ನು ನೀಡಿದೆ. ಹೀಗಾಗಿ ಪಂಜಾಬ್ ಕಿಂಗ್ಸ್ ತಂಡ ಕೆ ಎಲ್ ರಾಹುಲ್ ಅವರನ್ನು ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡ ರಶೀದ್ ಖಾನ್ ಅವರನ್ನು ಉಳಿಸಿಕೊಳ್ಳುವ ಯತ್ನದಲ್ಲಿದೆ. ಆದರೆ ಇದಕ್ಕೆ ಒಪ್ಪದ ಕೆಎಲ್ ರಾಹುಲ್ ಮತ್ತು ರಶೀದ್ ಖಾನ್ ನೂತನವಾಗಿ ಐಪಿಎಲ್ ಸೇರ್ಪಡೆಯಾಗುತ್ತಿರುವ ಲಖನೌ ತಂಡದ ಫ್ರಾಂಚೈಸಿ ಜತೆ ಸಂಪರ್ಕ ಬೆಳೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿಯೇ ಸನ್ ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ಫ್ರಾಂಚೈಸಿಗಳು ಕೆಎಲ್ ರಾಹುಲ್ ಮತ್ತು ರಶೀದ್ ಖಾನ್ ವಿರುದ್ಧ ದೂರನ್ನು ನೀಡಿವೆ ಎನ್ನಲಾಗುತ್ತಿದೆ. ಬಿಸಿಸಿಐ ನಿಯಮದ ಪ್ರಕಾರ ಆಟಗಾರನೋರ್ವ ಪ್ರಸ್ತುತ ತಾನು ಪ್ರತಿನಿಧಿಸುತ್ತಿರುವ ಫ್ರಾಂಚೈಸಿಯಿಂದ ಅಧಿಕೃತವಾಗಿ ಆಚೆ ಬರುವ ತನಕ ಮತ್ತೊಂದು ಫ್ರಾಂಚೈಸಿ ಜತೆ ಸಂಪರ್ಕ ಬೆಳೆಸುವುದಾಗಲಿ ಅಥವಾ ಆ ಫ್ರಾಂಚೈಸಿಯನ್ನು ಸೇರುವ ಕುರಿತಾದ ಚರ್ಚೆಯನ್ನು ಮಾಡುವುದಾಗಲಿ ಮಾಡಿದರೆ ಅದೊಂದು ಅಪರಾಧವಾಗಲಿದೆ.

ಈ ವಿವಾದದ ಕುರಿತು ಬಿಸಿಸಿಐ ಹೇಳಿದ್ದಿಷ್ಟು

ಈ ವಿವಾದದ ಕುರಿತು ಬಿಸಿಸಿಐ ಹೇಳಿದ್ದಿಷ್ಟು

ಕೆಎಲ್ ರಾಹುಲ್ ಮತ್ತು ರಶೀದ್ ಖಾನ್ ವಿಚಾರವಾಗಿ ನಮಗೆ ಯಾವುದೇ ರೀತಿಯ ಲಿಖಿತ ದೂರುಗಳು ಬಂದಿಲ್ಲ. ಆದರೆ ಈ ಇಬ್ಬರೂ ಸಹ ಫ್ರಾಂಚೈಸಿಯೊಂದರ ಆಟಗಾರರಾಗಿರುವಾಗಲೇ ಮತ್ತೊಂದು ಫ್ರಾಂಚೈಸಿ ಜತೆ ಮಾತುಕತೆ ನಡೆಸಿದ್ದಾರೆ ಎಂಬ ಮೌಖಿಕ ದೂರುಗಳು ನಮಗೆ ಬಂದಿವೆ. ಹೀಗಾಗಿ ಈ ಕುರಿತಾಗಿ ಸೂಕ್ತ ತನಿಖೆಯನ್ನು ನಡೆಸಲಿದ್ದು ಆರೋಪಗಳು ಸಾಬೀತಾದರೆ ಇಬ್ಬರ ವಿರುದ್ಧವೂ ಕೂಡ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಬಿಸಿಸಿಐ ಸ್ಪಷ್ಟನೆ ನೀಡಿದೆ. ಹೀಗಾಗಿ ಕೆಎಲ್ ರಾಹುಲ್ ಹಾಗೂ ರಶೀದ್ ಖಾನ್ ಲಕ್ನೋ ಫ್ರಾಂಚೈಸಿ ಜತೆ ಸಂಪರ್ಕ ಬೆಳೆಸಿದ್ದಾರೆ ಎಂಬ ಕಾರಣಕ್ಕೆ ಆರೋಪ ಸಾಬೀತಾದರೆ 1 ವರ್ಷ ಬ್ಯಾನ್ ಆಗುವ ಸಾಧ್ಯತೆಗಳಿವೆ.

ತಂಡವೊಂದರ ಆಟಗಾರನಾಗಿರುವಾಗಲೇ ಬೇರೆ ಫ್ರಾಂಚೈಸಿಯೊಂದರ ಸಂಪರ್ಕ ಬೆಳೆಸಿದ್ದಕ್ಕೆ ಈ ಹಿಂದೆಯೂ ವಿಧಿಸಲಾಗಿತ್ತು 1 ವರ್ಷ ಬ್ಯಾನ್ ಶಿಕ್ಷೆ

ತಂಡವೊಂದರ ಆಟಗಾರನಾಗಿರುವಾಗಲೇ ಬೇರೆ ಫ್ರಾಂಚೈಸಿಯೊಂದರ ಸಂಪರ್ಕ ಬೆಳೆಸಿದ್ದಕ್ಕೆ ಈ ಹಿಂದೆಯೂ ವಿಧಿಸಲಾಗಿತ್ತು 1 ವರ್ಷ ಬ್ಯಾನ್ ಶಿಕ್ಷೆ

ಕೆಎಲ್ ರಾಹುಲ್ ಮತ್ತು ರಶೀದ್ ಖಾನ್ ತಂಡವೊಂದರ ಆಟಗಾರರಾಗಿರುವಾಗಲೇ ಬೇರೆ ಫ್ರಾಂಚೈಸಿಯೊಂದರ ಸಂಪರ್ಕ ಬೆಳೆಸಿದ್ದಕ್ಕೆ 1 ವರ್ಷ ಬ್ಯಾನ್ ಆಗುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಈ ರೀತಿಯ ಘಟನೆ ನಡೆಯುತ್ತಿರುವುದು ಇದೇ ಮೊದಲೇನಲ್ಲ, ಈ ಹಿಂದೆಯೂ ನಡೆದಿದ್ದಕ್ಕೆ ಉದಾಹರಣೆಯೊಂದಿದೆ. ಹೌದು, 2010ರ ಸಮಯದಲ್ಲಿ ರಾಜಸ್ತಾನ್ ರಾಯಲ್ಸ್ ತಂಡದಲ್ಲಿದ್ದ ರವೀಂದ್ರ ಜಡೇಜಾ, ತಂಡದಲ್ಲಿರುವಾಗಲೇ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಜತೆ ಸಂಪರ್ಕ ಬೆಳೆಸಿದ್ದಕ್ಕೆ ಬಿಸಿಸಿಐ ರವೀಂದ್ರ ಜಡೇಜಾರನ್ನು ಆ ಐಪಿಎಲ್ ಆವೃತ್ತಿಯಿಂದ ಬ್ಯಾನ್ ಮಾಡಿತ್ತು.

Story first published: Tuesday, November 30, 2021, 19:36 [IST]
Other articles published on Nov 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X