ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪುಟ್ಟ ಬಾಲಕನ ಜೀವ ಉಳಿಸಲು ಕೆಎಲ್ ರಾಹುಲ್ ಮಾಡಿದ ಧನ ಸಹಾಯ ಕಂಡ ನೆಟ್ಟಿಗರು ಫಿದಾ

KL Rahul Donates Rs 31 Lakh For Budding Cricketers bone marrow transplant surgery
11 ವರ್ಷದ ಮಗುವಿನ ಜೀವ ಉಳಿಸಿದ ಕನ್ನಡಿಗ ಕೆಎಲ್ ರಾಹುಲ್ | Oneindia Kannada

ಪ್ರಸ್ತುತ ಭಾರತ ಅಂತರರಾಷ್ಟ್ರೀಯ ಪುರುಷರ ಕ್ರಿಕೆಟ್ ತಂಡದ ಪ್ರಮುಖ ಆಟಗಾರರಲ್ಲಿ ಓರ್ವನಾಗಿರುವ ಕೆಎಲ್ ರಾಹುಲ್ ರೋಹಿತ್ ಶರ್ಮಾ ಭಾರತ ಪೂರ್ಣಾವಧಿ ನಾಯಕನಾದ ನಂತರ ಉಪನಾಯಕನ ಸ್ಥಾನಕ್ಕೆ ಏರಿದ್ದರು. ಹೀಗೆ ಸಾಲು ಸಾಲು ಯಶಸ್ಸುಗಳನ್ನು ಗಳಿಸುತ್ತಿರುವ ಕೆಎಲ್ ರಾಹುಲ್ ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡುವುದರ ಮೂಲಕ ಕ್ರಿಕೆಟ್ ಅಭಿಮಾನಿಗಳ ಮನಸ್ಸನ್ನು ಗೆಲ್ಲುವುದು ಮಾತ್ರವಲ್ಲದೇ ಇದೀಗ ದೊಡ್ಡ ಖಾಯಿಲೆಯಿಂದ ಬಳಲುತ್ತಿದ್ದ ಬಾಲಕನ ಚಿಕಿತ್ಸೆಗೆ ದೊಡ್ಡ ಮೊತ್ತವನ್ನು ದೇಣಿಗೆಯಾಗಿ ನೀಡುವುದರ ಮೂಲಕ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ.

ಹೌದು, ವರದ್ ನಲ್ವಾಡೆ ಎಂಬ 11 ವರ್ಷದ ಪುಟ್ಟ ಬಾಲಕನೋರ್ವ ಅಪ್ಲಾಸ್ಟಿಕ್ ಅನೀಮಿಯಾ ಎಂಬ ಮೂಳೆ ರಜ್ಜಿಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದನು. ಹಾಗೂ ಭವಿಷ್ಯದಲ್ಲಿ ಓರ್ವ ಕ್ರಿಕೆಟಿಗನಾಗಬೇಕು ಎಂಬ ಗುರಿಯನ್ನು ಹೊಂದಿರುವ ವರದ್ ಈಗಾಗಲೇ ಅದಕ್ಕೆ ಬೇಕಾದ ತಯಾರಿಗಳನ್ನು ಕೂಡ ಆರಂಭಿಸಿದ್ದಾನೆ. ಹೀಗೆ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ವರದ್ ಒಮ್ಮೆ ಜ್ವರಕ್ಕೆ ಒಳಗಾದರೆ ಆ ಪುಟ್ಟ ಜ್ವರದಿಂದ ಚೇತರಿಸಿಕೊಳ್ಳಲು ತಿಂಗಳುಗಳೇ ಕಳೆಯುತ್ತಿದ್ದವು. ಹೀಗೆ ಈ ಕಾಯಿಲೆಯಿಂದ ಬಳಲುತ್ತಿರುವ ವರದ್ ಐದನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಆತನ ಕುಟುಂಬದವರು ಮಧ್ಯಮ ವರ್ಗದವರಾಗಿದ್ದಾರೆ. ಹಾಗೂ ಆತನ ತಂದೆಯ ಪಿಎಫ್ ಹಣವೆಲ್ಲಾ ಈತನ ಚಿಕಿತ್ಸೆಗೆ ಖಾಲಿಯಾಗಿದ್ದ ಕಾರಣ ಎನ್ ಜಿ ಒ ಮೂಲಕ ವರದ್ ಚಿಕಿತ್ಸೆಗೆ ಹಣವನ್ನು ಸಂಗ್ರಹಿಸಲು ಮುಂದಾಗಿದ್ದರು.

ಪಿಎಸ್ಎಲ್: ಮೈದಾನದಲ್ಲಿಯೇ ಸಹ ಆಟಗಾರ ಕಮ್ರಾನ್ ಕೆನ್ನೆಗೆ ಬಾರಿಸಿದ ಪಾಕ್ ಪ್ರಮುಖ ಆಟಗಾರ!ಪಿಎಸ್ಎಲ್: ಮೈದಾನದಲ್ಲಿಯೇ ಸಹ ಆಟಗಾರ ಕಮ್ರಾನ್ ಕೆನ್ನೆಗೆ ಬಾರಿಸಿದ ಪಾಕ್ ಪ್ರಮುಖ ಆಟಗಾರ!

ಹೀಗೆ ಪುಟ್ಟ ಬಾಲಕನೋರ್ವನ ಚಿಕಿತ್ಸೆಗೆ ಇಷ್ಟು ದೊಡ್ಡ ಮಟ್ಟದ ಹಣದ ಅವಶ್ಯಕತೆ ಇರುವುದನ್ನು ತಿಳಿದ ಕೆಎಲ್ ರಾಹುಲ್ ಕೂಡಲೇ ತನ್ನ ತಂಡದೊಂದಿಗೆ ಆತನ ಪೋಷಕರನ್ನು ಸಂಪರ್ಕಿಸಿ ಚಿಕಿತ್ಸೆಗೆ ಅಗತ್ಯವಿದ್ದ 31 ಲಕ್ಷ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಈ ಹಣದ ನೆರವಿನಿಂದ ವರದ್ ಚಿಕಿತ್ಸೆ ಮುಂಬೈನ ಜಸ್ಲೋಕ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆದಿದೆ. ಹೀಗೆ ಇಷ್ಟು ದೊಡ್ಡ ಮಟ್ಟದ ಹಣದ ಅಗತ್ಯತೆ ಉಂಟಾಗಲು ಕಾರಣ ವರದ್ ಬಳಲುತ್ತಿದ್ದ ಕಾಯಿಲೆ ಗುಣಮುಖವಾಗಬೇಕೆಂದರೆ ಕಡ್ಡಾಯವಾಗಿ ಮಾಡಲೇಬೇಕಾಗಿದ್ದ ಅಸ್ಥಿಮಜ್ಜೆ ಕಸಿ. ಹೌದು, ಈ ಅಸ್ಥಿ ಮಜ್ಜೆ ಕಸಿ ಮಾಡಲು ಇಷ್ಟು ದೊಡ್ಡ ಮಟ್ಟದ ಹಣದ ಅಗತ್ಯತೆ ಇತ್ತು ಹಾಗೂ ಈ ಅಗತ್ಯತೆಯನ್ನು ಕೆಎಲ್ ರಾಹುಲ್ ಪೂರೈಸಿದ್ದು, ಇತರರಿಗೆ ಮಾದರಿಯಾಗಿದ್ದಾರೆ.

ಪಾಕಿಸ್ತಾನ ಪ್ರವಾಸಕ್ಕೆ 16 ಆಟಗಾರರ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ: ತಂಡದ ಮೇಲಿದೆ ಐಪಿಎಲ್ ಎಫೆಕ್ಟ್!ಪಾಕಿಸ್ತಾನ ಪ್ರವಾಸಕ್ಕೆ 16 ಆಟಗಾರರ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ: ತಂಡದ ಮೇಲಿದೆ ಐಪಿಎಲ್ ಎಫೆಕ್ಟ್!

ಇನ್ನು ಅಗತ್ಯವಿದ್ದ ಹಣವನ್ನು ದೇಣಿಗೆ ನೀಡುವುದರ ಮೂಲಕ ಯಶಸ್ವಿಯಾಗಿ ಪೂರೈಸಿದ ನಂತರ ಮಾತನಾಡಿರುವ ಕೆ ಎಲ್ ರಾಹುಲ್ ತಾನು ವರದ್ ಚಿಕಿತ್ಸೆಗೆ ಅತ್ಯಾವಶ್ಯಕವಾಗಿ ಬೇಕಾಗಿದ್ದ ಹಣವನ್ನು ಪೂರೈಸಿದ್ದು, ಚಿಕಿತ್ಸೆ ಯಶಸ್ವಿಯಾಗಿರುವುದರಿಂದ ಸಂತಸ ತಂದಿದೆ ಎಂದಿದ್ದಾರೆ. ಹೀಗೆ ತಾನು ಮಾಡಿದ ಧನಸಹಾಯದಿಂದ ಇನ್ನೂ ಹಲವಾರು ಮಂದಿ ಪ್ರೇರೇಪಿತರಾಗಿ ಇದೇ ರೀತಿ ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಿದರೆ ಮತ್ತಷ್ಟು ಖುಷಿಯಾಗಲಿದೆ ಎಂದು ಕೆ ಎಲ್ ರಾಹುಲ್ ತಿಳಿಸಿದ್ದಾರೆ. ಹೀಗೆ ಕೆಎಲ್ ರಾಹುಲ್ ಮಾಡಿದ ಧನ ಸಹಾಯಕ್ಕೆ ಕೃತಜ್ಞತೆ ಸಲ್ಲಿಸಿರುವ ವರದ್ ಅವರ ತಾಯಿ ಕೆಎಲ್ ರಾಹುಲ್ ಧನ ಸಹಾಯ ಮಾಡದೇ ಇದ್ದಿದ್ದರೆ ತಮ್ಮ ಮಗನಿಗೆ ಇಷ್ಟು ದೊಡ್ಡ ಮೊತ್ತದ ಚಿಕಿತ್ಸೆಯನ್ನು ಕೊಡಿಸಲು ಆಗುತ್ತಲೇ ಇರಲಿಲ್ಲ ಎಂದಿದ್ದಾರೆ. ಹೀಗೆ ಉತ್ತಮ ಸಮಾಜಮುಖಿ ಕೆಲಸವನ್ನು ಮಾಡಿರುವ ಕೆಎಲ್ ರಾಹುಲ್ ಮೈದಾನದಲ್ಲಿ ಮಾತ್ರವಲ್ಲದೇ ಮೈದಾನದಿಂದಾಚೆಗೂ ಕೂಡ ಹೀರೋ ಆಗಿ ಮಿಂಚಿದ್ದಾರೆ. ಓರ್ವ ಕ್ರಿಕೆಟಿಗನಾಗಿ ಮುಂಬರುವ ದಿನಗಳಲ್ಲಿ ಕ್ರಿಕೆಟಿಗನಾಗಬೇಕು ಎಂಬ ಕನಸನ್ನು ಹೊತ್ತಿರುವ ಬಾಲಕನ ಜೀವವನ್ನು ಉಳಿಸಿದ ಕೆಎಲ್ ರಾಹುಲ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಪ್ರಶಂಸೆಗಳು ವ್ಯಕ್ತವಾಗುತ್ತಿವೆ.

Story first published: Wednesday, February 23, 2022, 9:49 [IST]
Other articles published on Feb 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X