ಕೆ.ಎಲ್ ರಾಹುಲ್ ಏಷ್ಯಾಕಪ್‌ನಲ್ಲೂ ಆಡೋದು ಅನುಮಾನ: ಕಾರಣ ಏನು?

ಟೀಂ ಇಂಡಿಯಾ ಸ್ಟಾರ್ ಬ್ಯಾಟ್ಸ್‌ಮನ್ ಕೆ.ಎಲ್ ರಾಹುಲ್ ಪ್ರಸ್ತುತ ಜರ್ಮನಿಯಲ್ಲಿ ಚಿಕಿತ್ಸೆ ಪಡೆದಿದ್ದು, ಸಂಪೂರ್ಣ ಗುಣಮುಖರಾಗಲು ಇನ್ನಷ್ಟು ಸಮಯ ಬೇಕಾಗಿರುವುದರಿಂದ ಶ್ರೀಲಂಕಾದಲ್ಲಿ ನಡೆಯಲಿರುವ ಏಷ್ಯಾ ಕಪ್ 2022ರ ಟೂರ್ನಿಯಲ್ಲೂ ಆಡುವುದು ಅನುಮಾನ ಎಂದು ವರದಿಯಾಗಿದೆ.

ಕೆ.ಎಲ್ ರಾಹುಲ್‌ರನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ನಾಯಕರನ್ನಾಗಿ ಆಯ್ಕೆ ಮಾಡಲಾಗಿತ್ತು. ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಿದ್ದರ ಪರಿಣಾಮವಾಗಿ ರಾಹುಲ್ ತಂಡವನ್ನ ಮುನ್ನಡೆಸಬೇಕಾಗಿತ್ತು. ಆದ್ರೆ ಸರಣಿ ಪ್ರಾರಂಭಕ್ಕೂ ಒಂದು ದಿನ ಮುಂಚೆ ರಾಹುಲ್ ತೊಡೆಸಂದು ನೋವಿನಿಂದ ಬಳಲಿದ ಪರಿಣಾಮ ಇಡೀ ಟೂರ್ನಿಯಿಂದಲೇ ಹೊರಬಿದ್ದರು. ಉನ್ನತ ಚಿಕಿತ್ಸೆಗಾಗಿ ಜರ್ಮನಿಗೆ ತೆರಳಿದ್ದ ರಾಹುಲ್ ಶಸ್ತ್ರ ಚಿಕಿತ್ಸೆ ಪೂರ್ಣಗೊಳಿಸಿದ್ದಾರೆ.

ರಾಹುಲ್ ಅನುಪಸ್ಥಿತಿಯಲ್ಲಿ ಪಂತ್‌ ತಂಡವನ್ನ ಮುನ್ನಡೆಸಿದ್ರು

ರಾಹುಲ್ ಅನುಪಸ್ಥಿತಿಯಲ್ಲಿ ಪಂತ್‌ ತಂಡವನ್ನ ಮುನ್ನಡೆಸಿದ್ರು

ಕೆ.ಎಲ್ ರಾಹುಲ್ ದಿಢೀರನೆ ಟೂರ್ನಿಯಿಂದ ಹೊರಬಿದ್ದ ಬಳಿಕ ರಿಷಭ್ ಪಂತ್‌ರನ್ನು ನಾಯರನ್ನಾಗಿ ಘೋಷಿಸಲಾಯ್ತ. ಮೊದಲೆರಡು ಪಂದ್ಯಗಳನ್ನ ಸೋತಿದ್ದ ಟೀಂ ಇಂಡಿಯಾ ನಂತರದ ಎರಡೂ ಪಂದ್ಯಗಳಲ್ಲಿ ದಾಖಲೆಯ ಜಯಪಡೆದು ಸರಣಿಯನ್ನ ಸಮಬಲಗೊಳಿಸಿತು. ಅಂತಿಮ ಪಂದ್ಯವು ಬೆಂಗಳೂರಿನಲ್ಲಿ ಮಳೆಯಲ್ಲಿಯೇ ಕೊಚ್ಚಿ ಹೋದ ಪರಿಣಾಮ ಸರಣಿ 2-2ರಿಂದ ಸಮಬಲಗೊಂಡಿತು.

ಜರ್ಮನಿಯಲ್ಲಿ ಯಶಸ್ವಿ ಚಿಕಿತ್ಸೆ ಪಡೆದ ರಾಹುಲ್

ಜರ್ಮನಿಯಲ್ಲಿ ಶಸ್ತ್ರಚಿಕಿತ್ಸೆಯ ನಂತರ ತಮ್ಮ ಆರೋಗ್ಯದ ಕುರಿತಾಗಿ ತಿಳಿಸಿರುವ ರಾಹುಲ್, ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಚೇತರಿಸಿಕೊಳ್ಳುತ್ತಿದ್ದೇನೆ. ನಿಮ್ಮ ಹಾರೈಕೆಗೆ ಧನ್ಯವಾದಗಳು ಎಂದು ತಿಳಿಸಿದರು.

"ಎಲ್ಲರಿಗೂ ನಮಸ್ಕಾರ. ಇದು ಒಂದೆರಡು ವಾರಗಳ ಕಠಿಣ ಸಮಯವಾಗಿದ್ದು, ಆದರೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ನಾನು ಚೇತರಿಸಿಕೊಳ್ಳುತ್ತಿದ್ದೇನೆ ಮತ್ತು ನನ್ನ ಚೇತರಿಕೆಯ ಹಾದಿ ಪ್ರಾರಂಭವಾಗಿದೆ. ನನ್ನ ಆರೋಗ್ಯದ ಬಗ್ಗೆ ನಿಮ್ಮ ಹಾರೈಕೆ ಮತ್ತು ಪ್ರಾರ್ಥನೆಗಳಿಗೆ ಧನ್ಯವಾದಗಳು. ಶೀಘ್ರದಲ್ಲೇ ನಿಮ್ಮನ್ನು ಭೇಟಿ ಮಾಡುತ್ತೇನೆ," ಎಂದು ಸಾಮಾಜಿಕ ಜಾಲತಾಣ ಕೂನಲ್ಲಿ ಪೋಸ್ಟ್ ಮಾಡಿದ್ದಾರೆ.

ಸಂಪೂರ್ಣ ಇಂಗ್ಲೆಂಡ್ ಪ್ರವಾಸಕ್ಕೆ ರಾಹುಲ್ ಲಭ್ಯವಿಲ್ಲ

ಸಂಪೂರ್ಣ ಇಂಗ್ಲೆಂಡ್ ಪ್ರವಾಸಕ್ಕೆ ರಾಹುಲ್ ಲಭ್ಯವಿಲ್ಲ

ಇಂಗ್ಲೆಂಡ್‌ ವಿರುದ್ಧ ಮುಂಬರುವ ಏಕೈಕ ಟೆಸ್ಟ್ ಪಂದ್ಯ ಸೇರಿದಂತೆ ಸಂಪೂರ್ಣ ಇಂಗ್ಲೆಂಡ್ ಪ್ರವಾಸಕ್ಕೆ ಕೆ.ಎಲ್ ರಾಹುಲ್ ಲಭ್ಯವಿಲ್ಲ. ಟೆಸ್ಟ್ ಬಳಿಕ ಟೀಂ ಇಂಡಿಯಾ ಲಿಮಿಟೆಡ್ ಓವರ್ ಕ್ರಿಕೆಟ್‌ನಲ್ಲಿ ಭಾಗಿಯಾಗಲಿದೆ. ಮೂರು ಏಕದಿನ ಪಂದ್ಯ ಮತ್ತು ಮೂರು ಟಿ20 ಪಂದ್ಯಗಳಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿದ್ದು, ಜುಲೈ 7ರಂದು ಸೌತಾಂಪ್ಟನ್‌ನಲ್ಲಿ ಮೊದಲ ಟಿ20 ಪಂದ್ಯವನ್ನಾಡಲಿದೆ. ಇದಕ್ಕೂ ಮೊದಲುನಾರ್ಥಾಂಪ್ಟನ್‌ಶೈರ್ ವಿರುದ್ಧ ಎರಡು ಟಿ20 ಅಭ್ಯಾಸ ಪಂದ್ಯಗಳನ್ನೂ ಸಹ ಆಡಲಿದೆ.

Ind vs Eng 5th Test: ಪಂದ್ಯದ ಪ್ರಿವ್ಯೂ, ಹೆಡ್‌ ಟು ಹೆಡ್, ಪ್ಲೇಯಿಂಗ್‌ 11 ಡೀಟೈಲ್ಸ್‌

ಆಗಸ್ಟ್‌ನಲ್ಲಿ ನಡೆಯಲಿರುವ ಏಷ್ಯಾಕಪ್‌ನಲ್ಲೂ ಆಡುವುದು ಅನುಮಾನ

ಆಗಸ್ಟ್‌ನಲ್ಲಿ ನಡೆಯಲಿರುವ ಏಷ್ಯಾಕಪ್‌ನಲ್ಲೂ ಆಡುವುದು ಅನುಮಾನ

ಇನ್ನು ಏಷ್ಯಾ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮಾರ್ಚ್‌ 19ಕ್ಕೆ ಸಭೆ ಸೇರಿದ ಬಳಿಕ ಆಗಸ್ಟ್‌ 27ರಿಂದ ಸೆಪ್ಟೆಂಬರ್ 11ರವರೆಗೆ ಏಷ್ಯಾಕಪ್‌ ಟೂರ್ನಿಯನ್ನ ನಡೆಸಲು ತೀರ್ಮಾನಿಸಲಾಗಿತ್ತು. ಆದ್ರೆ ಈ ಟೂರ್ನಿಯನ್ನ ಮೂರು ದಿನ ಮುಂಚಿತವಾಗಿಯೇ ಆಗಸ್ಟ್‌ 24 ರಿಂದ ಸೆಪ್ಟೆಂಬರ್‌ 7ರವರೆಗೆ ನಡೆಸಲಾಗುವುದು.

ಇಎಸ್‌ಪಿಎನ್‌ ಕ್ರಿಕ್‌ಇನ್ಫೋ ಪ್ರಕಾರ ಕೆ.ಎಲ್ ರಾಹುಲ್ ಈ ಸಮಯದಲ್ಲೂ ಟೀಂ ಇಂಡಿಯಾ ಸ್ಕ್ವಾಡ್‌ ಸೇರುವುದು ಬಹುತೇಕ ಅನುಮಾನವಾಗಿದೆ. ಜರ್ಮನಿಯಿಂದ ಭಾರತಕ್ಕೆ ಮರಳಿದ ಬಳಿಕ ರಾಹುಲ್ 6 ರಿಂದ 12 ವಾರಗಳ ಕಾಲ ಪುನರ್ವಸತಿ ಶಿಬಿರದಲ್ಲಿ ಚೇತರಿಕೆ ಪಡೆಯಲಿದ್ದಾರೆ.

ಏಕೆಂದರೆ ಹೆರಿನಾ ಶಸ್ತ್ರಚಿಕಿತ್ಸೆ ನಂತರ ಪೂರ್ಣ ಚಟುವಟಿಕೆಗೆ ಮರಳಲು ಕ್ರೀಡಾಪಟುವಿಗೆ ಸಾಮಾನ್ಯ ಸಮಯಾವಧಿಯು 6 ರಿಂದ 12 ವಾರಗಳ ನಡುವೆ ಇರುತ್ತದೆ, ಅಂದರೆ ಏಷ್ಯಾ ಕಪ್ ಪ್ರಾರಂಭವಾದಾಗ ರಾಹುಲ್ ಪೂರ್ಣ ಫಿಟ್‌ನೆಸ್ ಅನ್ನು ಮರಳಿ ಪಡೆಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಬೆಂಗಳೂರಿನ ಎನ್‌ಸಿಎನಲ್ಲಿ ಈ ಅವಧಿಯಲ್ಲಿ ಥೆರಪಿ ಮತ್ತು ಪುನರ್ವಸತಿ ಶಿಬಿರಗಳಲ್ಲಿ ಭಾಗಿಯಾಗುವ ಸಾಧ್ಯತೆಯಿದೆ.

ಕೊಹ್ಲಿ ಶತಕಗಳಿಸುವುದು ನಮಗೆ ಬೇಕಿಲ್ಲ, ಆದರೆ..: ಹೀಗೆ ಯಾಕಂದ್ರು ಕೋಚ್ ರಾಹುಲ್ ದ್ರಾವಿಡ್!

ಏಳು ತಿಂಗಳಲ್ಲಿ ಏಳು ಸರಣಿ ಮಿಸ್ ಮಾಡಿಕೊಂಡಿರುವ ಕೆ.ಎಲ್ ರಾಹುಲ್

ಏಳು ತಿಂಗಳಲ್ಲಿ ಏಳು ಸರಣಿ ಮಿಸ್ ಮಾಡಿಕೊಂಡಿರುವ ಕೆ.ಎಲ್ ರಾಹುಲ್

ರಾಹುಲ್ ಇಂಜ್ಯುರಿಯಿಂದ ಸರಣಿ ಮಿಸ್‌ ಮಾಡಿಕೊಂಡಿರುವುದು ಇದೇ ಮೊದಲೇನಲ್ಲ. ಕಳೆದ ಏಳು ತಿಂಗಳಲ್ಲಿ ಕೆ.ಎಲ್ ರಾಹುಲ್ ಅವರ ಏಳನೇ ಸರಣಿಯನ್ನು ಕಳೆದುಕೊಂಡಿರುವುದರಿಂದ, ಮುಂಬರುವ ಹೆಚ್ಚಿನ ಪಂದ್ಯಗಳಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದಾರೆ. ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿ ಮತ್ತು ಶ್ರೀಲಂಕಾ ವಿರುದ್ಧದ ಟೆಸ್ಟ್ ಮತ್ತು ಟಿ20 ಸರಣಿಯನ್ನು ಕಳೆದುಕೊಂಡಿದ್ದಾರೆ. ಮಣಿಕಟ್ಟು ಗಾಯದ ಕಾರಣ ಆಸ್ಟ್ರೇಲಿಯಾ ವಿರುದ್ಧದ ಸರಣಿಯನ್ನೂ ಕಳೆದುಕೊಂಡಿದ್ದರು. ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ಟಿ20, ಇಂಗ್ಲೆಂಡ್ ಹಾಗೂ ಐರ್ಲೆಂಡ್ ಸರಣಿಯಿಂದ ಹಿಂದೆ ಸರಿಯಬೇಕಾಯಿತು.

For Quick Alerts
ALLOW NOTIFICATIONS
For Daily Alerts
Story first published: Thursday, June 30, 2022, 16:50 [IST]
Other articles published on Jun 30, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X