ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌: ಪಾರ್ಥಿವ್‌ ಪಟೇಲ್‌ ಫೋರ್‌ಗೆ 'ಫ**' ಎಂದ ಕೆಎಲ್‌ ರಾಹುಲ್‌

IPL 2019 : ಲೈವ್ ನಲ್ಲಿ ಇರೋದನ್ನೆ ಮರೆತ K L ರಾಹುಲ್ ಏನಂದ್ರು ಗೊತ್ತಾ..!?
 KL Rahul drops the F word while talking with the commentators

ಬೆಂಗಳೂರು, ಏಪ್ರಿಲ್‌ 25: ರಾಯಲ್‌ ಚಾಲೆಂಜರ್ಸ್‌ ತಂಡದ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಪಾರ್ಥಿವ್‌ ಪಟೇಲ್‌ ಅವರ ಬ್ಯಾಟಿಂಗ್‌ ವೇಳೆ ಕಿಂಗ್ಸ್‌ ಇಲೆವೆನ್‌ ತಂಡದ ಸ್ಟಾರ್‌ ಬ್ಯಾಟ್ಸ್‌ಮನ್‌ ಕೆಎಲ್‌ ರಾಹುಲ್‌ 'ಫ**' ಎಂದು ಎಫ್‌ ಪದದ ಬಳಕೆ ಮಾಡಿರುವುದು ಟೆಲಿವಿಷನ್‌ನಲ್ಲಿ ನೇರ ಪ್ರಸಾರಗೊಂಡಿದೆ.

 ಐಪಿಎಲ್: ಆರ್‌ಸಿಬಿಗೆ ಸತತ 3ನೇ ಗೆಲುವು ತಂದಿತ್ತ ಎಬಿಡಿ, ಉಮೇಶ್ ಯಾದವ್ ಐಪಿಎಲ್: ಆರ್‌ಸಿಬಿಗೆ ಸತತ 3ನೇ ಗೆಲುವು ತಂದಿತ್ತ ಎಬಿಡಿ, ಉಮೇಶ್ ಯಾದವ್

ಆರ್‌ಸಿಬಿ ತಂಡ ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಐಪಿಎಲ್‌ 2019ರ ಪಂದ್ಯದಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಎದುರು ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿತ್ತು. ಆರ್‌ಸಿಬಿ ಇನಿಂಗ್ಸ್‌ ಆರಂಭಿಸಿದ ಬಳಿಕ ಕ್ಷೇತ್ರ ರಕ್ಷಣೆಯಲ್ಲಿದ್ದ ಕಿಂಗ್ಸ್‌ ಆಟಗಾರ ಕೆ.ಎಲ್‌ ರಾಹುಲ್‌ ಮೈಕ್‌ ತೊಟ್ಟು ಕಾಂಮೆಂಟೇಟರ್‌ಗಳೊಂದಿಗೆ ಚರ್ಚೆಯಲ್ಲಿ ತೊಡಗಿದ್ದರು. ಕ್ಷೇತ್ರ ರಕ್ಷಣೆಯಲ್ಲಿರುವ ಆಟಗಾರರೊಂದಿಗೆ ಕಾಮೆಂಟೇಟರ್‌ಗಳು ಮಾತನಾಡುವುದು ಐಪಿಎಲ್‌ನ ಟ್ರೆಂಡ್‌ಗಳಲ್ಲಿ ಒಂದು.

ಪಂದ್ಯದ ಕುರಿತಾಗಿ ಮತ್ತು ಆಟಗಾರರ ಕುರಿತಾಗಿ ರಾಹುಲ್‌ ಜೊತೆಗೆ ವೀಕ್ಷಕ ವಿವರಣೆಗಾರರು ಚರ್ಚೆ ನಡೆಸುತ್ತಿದ್ದರು. ಅತ್ತ ಮೊಹಮ್ಮದ್‌ ಶಮಿ ಅವರ ಎಸೆತದಲ್ಲಿ ಪಾರ್ಥಿವ್‌ ಪಟೇಲ್‌ ಇನ್‌ಸೈಡ್‌ ಎಡ್ಜ್‌ ಮೂಲಕ ಫೈನ್‌ ಲೆಗ್ ವಿಭಾಗದಲ್ಲಿ ಬೌಂಡರಿ ಗಳಿಸಿದರು. ಈ ಸಂದರ್ಭದಲ್ಲಿ ತಾವು ನೇರ ಪ್ರಸಾರದ ಚರ್ಚೆಯಲ್ಲಿ ಪಾಲ್ಗೊಂಡಿರುವುದನ್ನು ಮರೆತ ರಾಹುಲ್‌ "ಆವ್‌.. ಫ**' ಎಂದು ಹೇಳಿಬಿಟ್ಟರು.

 ಐಪಿಎಲ್‌ 2019: ಚೆಂಡನ್ನು ಜೇಬಲಿಟ್ಟು, ಎಲ್ಲಿಟ್ಟಿದ್ದೇನೆಂದು ಮರೆತ ಅಂಪೈರ್‌! ಐಪಿಎಲ್‌ 2019: ಚೆಂಡನ್ನು ಜೇಬಲಿಟ್ಟು, ಎಲ್ಲಿಟ್ಟಿದ್ದೇನೆಂದು ಮರೆತ ಅಂಪೈರ್‌!

ತಮಾಶೆಯ ಸಂಗತಿ ಎಂಬಂತೆ ರಾಹುಲ್‌ಗೆ ಕೂಡಲೇ ಇದರ ಅರಿವಾಗಿ, ಕಾಮೆಂಟೇಟರ್ಸ್‌ ಬಳಿ ಇದು ನೇರ ಪ್ರಸಾರವಾಯಿತೆ ಎಂದು ಖಾತ್ರಿ ಪಡಿಸಿಕೊಳ್ಳಲು ಪ್ರಯತ್ನಿಸಿದರು. ಇದಕ್ಕೆ ಕಾಮೆಂಟೇಟರ್ ಡ್ಯಾನಿ ಮಾರಿಸ್ಸನ್‌ ಸಾರಿ ಕೇ.. ಎಲ್‌.. ಪ್ರಸಾರವಾಗಿದೆ ಎಂದು ಉತ್ತರಿಸಿದರು. ಪಂದ್ಯದಲ್ಲಿ ರಾಹುಲ್‌ 27 ಎಸೆತಗಳಲ್ಲಿ 42 ರನ್‌ಗಳನ್ನು ಸಿಡಿಸಿದರಾದರೂ ತಂಡಕ್ಕೆ ಜಯ ತಂದುಕೊಡಲು ಸಾಧ್ಯವಾಗಲಿಲ್ಲ.

ಪಂದ್ಯದಲ್ಲಿ ಪಾರ್ಥಿವ್‌ ಪಟೇಲ್‌ 24 ಎಸೆತಗಳಲ್ಲಿ 43 ರನ್‌ಗಳನ್ನು(7 ಫೋರ್‌, 2 ಸಿಕ್ಸರ್‌) ಸಿಡಿಸಿ ಮಿಂಚಿದರೆ, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 17 ರನ್‌ಗಳ ಜಯ ದಾಖಲಿಸಿ ಅಂಕಪಟ್ಟಿಯಲ್ಲಿ ಮೊದಲ ಬಾರಿ ಒಂದು ಸ್ಥಾನ ಮೇಲೇರಿ 7ನೇ ಸ್ಥಾನ ಪಡೆದುಕೊಂಡಿತು.

Story first published: Thursday, April 25, 2019, 17:51 [IST]
Other articles published on Apr 25, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X