ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆಎಲ್ ರಾಹುಲ್ ಅಲ್ಪಾವಧಿಯ ಪರಿಹಾರ ಎಂದ ಪಾರ್ಥಿವ್ ಪಟೇಲ್

KL Rahul is a short-term solution: Parthiv Patel

ನವದೆಹಲಿ, ಮೇ 20: ಟೀಮ್ ಇಂಡಿಯಾದ ಪರ ಟೆಸ್ಟ್‌ನಲ್ಲಿ ಅತೀ ಕಿರಿಯ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್ ಆಗಿ ಆಡಿದ್ದ ಪಾರ್ಥಿವ್ ಪಟೇಲ್, ಕೆಎಲ್ ರಾಹುಲ್ ವಿಕೆಟ್ ಕೀಪಿಂಗ್ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ವೈಟ್‌ ಬಾಲ್ ಕ್ರಿಕೆಟ್‌ನಲ್ಲಿ ರಾಹುಲ್ ಮತ್ತು ರಿಷಭ್ ಪಂತ್ ಇವರಲ್ಲಿ ಯಾರನ್ನು ಆರಿಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಪಾರ್ಥಿವ್ ಒಂದಿಷ್ಟು ವಿಚಾರಗಳನ್ನು ಹಂಚಿಕೊಂಡರು.

ವಿರಾಟ್ ಕೊಹ್ಲಿ ನಾಯಕತ್ವದಲ್ಲಿನ ಮೈನಸ್‌ಗಳ ವಿವರಿಸಿದ ಮೊಹಮ್ಮದ್ ಕೈಫ್ವಿರಾಟ್ ಕೊಹ್ಲಿ ನಾಯಕತ್ವದಲ್ಲಿನ ಮೈನಸ್‌ಗಳ ವಿವರಿಸಿದ ಮೊಹಮ್ಮದ್ ಕೈಫ್

'ಲಾಕ್‌ಡೌನ್ ಬಟ್ ನಾಟ್ ಔಟ್' ಸರಣಿಯ ಇತ್ತೀಚಿನ ಎಪಿಸೋಡ್‌ನಲ್ಲಿ ಮಾತನಾಡಿದ ಪಾರ್ಥಿವ್ ಪಟೇಲ್, ಏಕದಿನ ಮತ್ತು ಟಿ20 ಕ್ರಿಕೆಟ್‌ನಲ್ಲಿ ಮೊದಲ ಆಯ್ಕೆಯ ಭಾರತದ ವಿಕೆಟ್ ಕೀಪರ್ ಯಾರು ಎಂಬ ಪ್ರಶ್ನೆಗೆ ಉತ್ತರಿಸಿ, ತನ್ನ ಮನಸ್ಸಿನಲ್ಲಿರುವುದನ್ನು ಹೇಳಿಕೊಂಡರು.

ಕ್ರಿಕೆಟ್ ಪ್ರೇಮಿಗಳ ಹೃದಯಗೆದ್ದ ಟಾಪ್ 5 ಟಿವಿ ನಿರೂಪಕಿಯರು ಇವರು!ಕ್ರಿಕೆಟ್ ಪ್ರೇಮಿಗಳ ಹೃದಯಗೆದ್ದ ಟಾಪ್ 5 ಟಿವಿ ನಿರೂಪಕಿಯರು ಇವರು!

'ಈ ಸಂದರ್ಭದಲ್ಲಿ ಕೆಎಲ್ ರಾಹುಲ್ ಅವರನ್ನು ಪರಿಗಣಿಸಿ ಹೇಳುವುದಾದರೆ, ವಿಶ್ವಕಪ್‌ ಅನ್ನು ಮನಸ್ಸಿನಲ್ಲಿಟ್ಟುಕೊಂಡರೆ ರಾಹುಲ್ ಒಬ್ಬರು ಅಲ್ಪಾವಧಿ ಪರಿಹಾರ ಎಂದು ನನಗನ್ನಿಸುತ್ತದೆ. ವಿಶ್ವಕಪ್‌ನಲ್ಲೂ ರಾಹುಲ್ ಅವರ ಜವಾಬ್ದಾರಿಯನ್ನು ಚೆನ್ನಾಗಿ ನಿಭಾಯಿಸುತ್ತಾರೆ. ಅದರಲ್ಲಿ ಅನುಮಾನವೇ ಇಲ್ಲ. ಆದರೆ ಸುದೀರ್ಘ ಕಾಲಕ್ಕೆ ನಮಗೊಬ್ಬರು ಪರಿಣಿತ ವಿಕೆಟ್ ಕೀಪರ್ ಬೇಕಿದೆ,' ಎಂದು ಪಾರ್ಥಿವ್ ಹೇಳಿದ್ದಾರೆ.

ಏಕದಿನದಲ್ಲಿ ಅತೀ ಹೆಚ್ಚು ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದ ಟಾಪ್ 5 ಬೌಲರ್‌ಗಳು!ಏಕದಿನದಲ್ಲಿ ಅತೀ ಹೆಚ್ಚು ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದ ಟಾಪ್ 5 ಬೌಲರ್‌ಗಳು!

'ರಿಷಭ್ ಪಂತ್ ಅವರೂ ಕೀಪಿಂಗ್ ಜವಾಬ್ದಾರಿ ನಿಭಾಯಿಸಬಲ್ಲರು. ನನ್ನ ಬಗ್ಗೆಯೇ ಹೇಳೋದಾದ್ರೆ ನಾನು ಪಾದಾರ್ಪಣೆ ಮಾಡುವಾಗ ನನಗೆ 17-18ರ ಹರೆಯ. ಆಗ ನನಗೆ ಒಳ್ಳೆಯ ಸರಣಿಗಳು ಸಿಗಲಿಲ್ಲ. ಕೆಲವು ವರ್ಷ ನಾನು ದೇಸಿ ಕ್ರಿಕೆಟ್‌ನತ್ತ ಮುಖ ಮಾಡಬೇಕಾಗಿ ಬಂತು. ಇದು ನನಗೆ ಕೌಶಲ ಬೆಳೆಸುಕೊಳ್ಳುವಲ್ಲಿ ಬಹಳಷ್ಟು ಸಹಾಯಕ್ಕೆ ಬಂತು.' ಎಂದು ಪಟೇಲ್ ವಿವರಿಸಿದರು.

ಬೇಸತ್ತು ಹೋಗಿದ್ದ ಮಯಾಂಕ್ ಅಗರ್ವಾಲ್‌ಗೆ ಭರವಸೆ ತುಂಬಿದ್ದು ರಾಹುಲ್ ದ್ರಾವಿಡ್ಬೇಸತ್ತು ಹೋಗಿದ್ದ ಮಯಾಂಕ್ ಅಗರ್ವಾಲ್‌ಗೆ ಭರವಸೆ ತುಂಬಿದ್ದು ರಾಹುಲ್ ದ್ರಾವಿಡ್

'ರಿಷಭ್ ನನ್ನು ಪ್ರತೀ ಬಾರಿಯೂ ಭೇಟಿಯಾದಾಗ ನಾನು ಹೇಳುತ್ತಿರುತ್ತೇನೆ. ಜನ ನಿನ್ನ ಬಗ್ಗೆ ಮಾತನಾಡುತ್ತಿದ್ದಾರೆ. ಯಾಕೆಂದರೆ ನಿನ್ನಲ್ಲಿ ಪ್ರತಿಭೆಯಿದೆ. ನಿನ್ನಲ್ಲಿ ಪ್ರತಿಭೆ ಇಲ್ಲದಿದ್ದರೆ ಜನ ನಿನ್ನ ಬಗ್ಗೆ ಮಾತನಾಡಲಾರರು. ಅದನ್ನು ತಲೆಯಲ್ಲಿಟ್ಟುಕೊ. ಕೆಲ ಸಮಯ ನೀನು ದೇಸಿ ಕ್ರಿಕೆಟ್‌ನತ್ತ ಹೋಗಬೇಕಾಗುತ್ತದೆ. ಫಾರ್ಮ್‌ ಅನ್ನು ಮರಳಿ ಪಡೆಯಬೇಕಾಗುತ್ತದೆ ಎಂದು,' ಎಂದು ಪಾರ್ಥಿವ್ ಹೇಳಿದರು.

Story first published: Wednesday, May 20, 2020, 18:04 [IST]
Other articles published on May 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X