ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ತಂಡದಿಂದ ತಾನಾಗಿ ಹೊರ ನಡೆಯಲು ರಾಹುಲ್ ದಾರಿ ಹುಡುಕುತ್ತಿದ್ದಾರೆ!'

ತಂಡದಿಂದ ತಾನಾಗಿ ಹೊರ ನಡೆಯಲು ರಾಹುಲ್ ದಾರಿ ಹುಡುಕುತ್ತಿದ್ದಾರೆ! | Oneindia Kannada
KL Rahul is finding new ways to get himself out - Sanjay Bangar

ನವದೆಹಲಿ, ನವೆಂಬರ್ 29: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಗಾಗಿ ಭಾರತ ಕ್ರಿಕೆಟ್ ತಂಡದಲ್ಲಿ ಆರಂಭಿಕರ ಸ್ಥಾನಕ್ಕೆ ಪ್ರಮುಖ ಸ್ಪರ್ಧಿಯಾಗಿರುವ ಕೆಎಲ್ ರಾಹುಲ್, ತಾನಾಗಿ ತಂಡದಿಂದ ಹೊರ ನಡೆಯಲು ಹೊಸದಾರಿ ಹುಡುಕುತ್ತಿದ್ದಾರೆ ಎಂದು ತಂಡದ ಸಹಾಯಕ ಬ್ಯಾಟಿಂಗ್ ಕೋಚ್ ಸಂಜಯ್ ಬಾಂಗರ್ ಹೇಳಿದ್ದಾರೆ.

ನನ್ನ ಬದುಕಿನ ಕಗ್ಗತ್ತಲ ದಿನವಿದು: ಕೋಚ್ ರಮೇಶ್‌ಗೆ ಕುಟುಕಿದ ಮಿಥಾಲಿನನ್ನ ಬದುಕಿನ ಕಗ್ಗತ್ತಲ ದಿನವಿದು: ಕೋಚ್ ರಮೇಶ್‌ಗೆ ಕುಟುಕಿದ ಮಿಥಾಲಿ

ರಾಹುಲ್‌ಗೆ ಅನೇಕ ಪಂದ್ಯಗಳಲ್ಲಿ ತಂಡದಲ್ಲಿ ಸ್ಥಾನ ಒದಗಿಸಲಾಗಿತ್ತು. ಆದರೆ ಯುವ ಆಟಗಾರ ರಾಹುಲ್ ಯಾವುದೇ ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ತೋರಿಸಿಲ್ಲ. ಮುಂಬರಲಿರುವ ಟೆಸ್ಟ್‌ನಲ್ಲೂ ರಾಹುಲ್‌ಗೆ ಅವಕಾಶ ನೀಡುವ ನಿರೀಕ್ಷೆಯಿದೆ. ಆದರೆ ಅವಕಾಶದ ಜೊತೆಗೆ ರಾಹುಲ್‌ಗೆ ಈ ಮುಖಾಂತರ ಎಚ್ಚರಿಕೆಯನ್ನೂ ರವಾನಿಸಲಾಗಿದೆ.

'ಸುಮಾರು 30 ಟೆಸ್ಟ್ ಪಂದ್ಯಗಳನ್ನು ಆಡಿರುವ ಕೆಎಲ್ ರಾಹುಲ್ ಇದೇ ಪ್ರದರ್ಶನವನ್ನು ಮುಂದುವರೆಸಿದರೆ ತಂಡದಲ್ಲಿ ಯುವ ಆಟಗಾರರ ಸಾಲಿನಲ್ಲಿ ಅವರಿನ್ನು ಹೆಚ್ಚುದಿನ ಕಾಣಲು ಸಾಧ್ಯವಿಲ್ಲ. ಅವರಿಗೆ ಜವಾಬ್ದಾರಿಯಿದೆ. ಅವರು ಅದನ್ನು ಅರ್ಥ ಮಾಡಿಕೊಳ್ಳಬೇಕು' ಎಂದು ಬಾಂಗರ್ ಗುರುವಾರ (ನವೆಂಬರ್ 29) ತಿಳಿಸಿದ್ದಾರೆ.

ಹಾಕಿ ವಿಶ್ವಕಪ್ 2018: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯಹಾಕಿ ವಿಶ್ವಕಪ್ 2018: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ಆಡಿದ್ದ ಟಿ20 ಸರಣಿಯಲ್ಲೂ ರಾಹುಲ್ ಕಳಪೆ ಬ್ಯಾಟಿಂಗ್ ತೋರಿಸಿದ್ದರು. ಮೊದಲ ಪಂದ್ಯದಲ್ಲಿ 13, ಅಂತಿಮ ಪಂದ್ಯದಲ್ಲಿ 14 ರನ್ ಗಳಿಸಿದ್ದರು. ಸಿಡ್ನಿಯಲ್ಲಿ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲೂ ರಾಹುಲ್ 3 ರನ್ ಗಳಿಸಿ ಕ್ರೀಡಾಭಿಮಾನಿಗಳ, ಪರಿಣಿತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಅಭ್ಯಾಸ ಪಂದ್ಯದಲ್ಲಿ ರಾಹುಲ್ ಆರಂಭಿರಾಗಿ ಬ್ಯಾಟಿಂಗ್‌ಗೆ ಇಳಿದಿದ್ದರು. ಆಸ್ಟ್ರೇಲಿಯಾ ವಿರುದ್ಧ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಭಾರತ, ಪೃಥ್ವಿ ಶಾ 66, ಪೂಜಾರ 54, ಕೊಹ್ಲಿ 64, ರಹಾನೆ 56, ಹನುಮ ವಿಹಾರಿ 53, ರೋಹಿತ್ 40 ರನ್ ನೆರವಿನೊಂದಿಗೆ 92 ಓವರ್ ನಲ್ಲಿ ಎಲ್ಲಾ ವಿಕೆಟ್ ಕಳೆದು 358 ರನ್ ಪೇರಿಸುವ ಮೂಲಕ ಮೊದಲ ಇನ್ನಿಂಗ್ಸ್ ಮುಗಿಸಿದೆ. ಆಸೀಸ್ ಇನ್ನಿಂಗ್ಸ್ ಗೆ ಇಳಿದಿದೆ.

Story first published: Thursday, November 29, 2018, 17:36 [IST]
Other articles published on Nov 29, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X